LatestTop Storiesಜಿಲ್ಲಾ ಸುದ್ದಿಗಳು | District News

ಕರಡಕಲ್ ಗ್ರಾಮದ ಮೃತ ರಾಣೆಮ್ಮ ಮನೆಗೆ ಸಚಿವ ಅಜಯಸಿಂಗ್ ಭೇಟಿ

ಲಿಂಗಸಗೂರ :ಇತ್ತೀಚೆಗೆ ಕೊಲೆಯಾದ ಕರಡಕಲ್ ಗ್ರಾಮದ ರಾಣೆಮ್ಮ ಅವರ ಮನೆಗೆ ರಾಯ ಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ, ಅಜಯ್ ಸಿಂಗ್ ಅವರು ಭೇಟಿ ನೀಡಿ ಮೃತ ರಾಣಿಮ್ಮ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಘಟನೆಯ ಕುರಿತಂತೆ ವಿಷಾದ ವ್ಯಕ್ತಪಡಿಸಿ ,ಕುಟುಂಬಸ್ಥರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡು ನಂತರ ಮಾತನಾಡಿದ ಅವರು ಇಂತಹ ಘಟನೆಗಳು ನಡೆಯಬಾರದು.

ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಸರಕಾರ ಖಂಡಿತವಾಗಿಯೂ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತಿದ್ದು ಮುಖ್ಯಮಂತ್ರಿ ಡಿ ಕೆ ಶಿವಕುಮಾ‌ರ್ ಅವರ ಗಮನಕ್ಕೂ ಈ ವಿಷಯ ತರಲಾಗಿದ್ದು.

ನೊಂದ ಕುಟುಂಬಕ್ಕೆ ಸರ್ಕಾರ ಖಂಡಿತವಾಗಿಯೂ ಪರಿಹಾರ ಒದಗಿಸುವಲ್ಲಿ ಕ್ರಮ ಕೈಗೊಳ್ಳುತ್ತಿದ್ದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ,ಸರ್ಕಾರದಿಂದ ಸಿಗುವ ಸೌಲತ್ತುಗಳ ನ್ನು ಒದಗಿಸುವಲ್ಲಿ ಕ್ರಮವಹಿಸು ವಂತೆ ಸ್ಥಳದಲ್ಲಿದ್ದ ಸಹಾಯಕ ಆಯುಕ್ತರಿಗೆ ಸೂಚಿಸಿದರು.

Share with Friends
author avatar
Digital Desk