Top Storiesಬೆಂಗಳೂರು-Bengaluru

ಜೊಮ್ಯಾಟೋ ಹೈಪರ್ಪ್ಯೂರ್ ಉಗ್ರಾಣದಲ್ಲಿ ಭಾರೀ ಲೋಪ – 146 ಕೆಜಿ ಚಿಕನ್ ಸೇರಿ 40 ಸ್ಯಾಂಪಲ್ ವಶ

ಬೆಂಗಳೂರು: ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ನಗರದ ಸಾಕಾಲವಾರದಲ್ಲಿರುವ ಜೊಮ್ಯಾಟೋ ಹೈಪರ್ಪ್ಯೂರ್ ಉಗ್ರಾಣದ ಮೇಲೆ ದಾಳಿ ನಡೆಸಿ ತಪಾಸಣೆ ಮಾಡಿದಾಗ ಹಲವು ಲೋಪದೋಷಗಳು ಬೆಳಕಿಗೆ ಬಂದಿವೆ.

ತಪಾಸಣೆ ವೇಳೆ 146 ಕೆಜಿ ಚಿಕನ್ ಮಾಂಸ ಮತ್ತು 40 ಕೆಜಿ ಬೆಳ್ಳುಳ್ಳಿ ಪೇಸ್ಟ್ ತಯಾರಕರಲ್ಲಿ FSSAI ಪರವಾನಿಗೆ ಸಂಖ್ಯೆ ಇಲ್ಲದಿರುವುದು ಪತ್ತೆಯಾಗಿದೆ. ಅಲ್ಲದೆ 300 ಕೆಜಿ ಪ್ಯಾಕ್ಡ್ ಅಕ್ಕಿ, 20 ಕೆಜಿ ಡ್ರೈ ಫ್ರೂಟ್ಸ್ ಮತ್ತು 15 ಕೆಜಿ ಮಸಾಲಾ ಪದಾರ್ಥಗಳಲ್ಲಿ ಮಿಸ್ ಲೇಬಲಿಂಗ್ ಇರುವುದು ಕಂಡುಬಂದಿದೆ.

ಇದಲ್ಲದೆ ಫ್ರಿಡ್ಜ್‌ನಲ್ಲಿ ಇಡದೆ ಇರುವ 10 ಉಪ್ಪಿನಕಾಯಿ ಪ್ಯಾಕೆಟ್‌ಗಳು ಪತ್ತೆಯಾಗಿದ್ದು, ಲೇಬಲಿಂಗ್ ಕಂಡೀಶನ್ ಉಲ್ಲಂಘನೆಯಾಗಿದೆ. ಆಹಾರದ ಗುಣಮಟ್ಟ ಪರೀಕ್ಷೆಗಾಗಿ ಅಧಿಕಾರಿಗಳು ಸ್ಥಳದಲ್ಲೇ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಇದರಲ್ಲಿ ಲೀಗಲ್‌ಗಾಗಿ 5 ಮಾದರಿಗಳನ್ನು ಮತ್ತು ಸರ್ವೆಗಾಗಿ 35 ಮಾದರಿಗಳನ್ನು ಸೇರಿಸಿ ಒಟ್ಟು 40 ಮಾದರಿಗಳ ಸ್ಯಾಂಪಲ್*ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಜೊಮ್ಯಾಟೋ ಹೈಪರ್ಪ್ಯೂರ್‌ಗೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ. ನೋಟೀಸ್‌ಗೆ ನೀಡುವ ಉತ್ತರದ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಇಲಾಖೆ ತಿಳಿಸಿದೆ.

Share with Friends
author avatar
Digital Desk