Crime NewsLatestTop Storiesಚಿಕ್ಕಬಳ್ಳಾಪುರ-Chikkaballapuraರಾಜ್ಯ-Karnataka

ಒಂದು ವರ್ಷದ ಮಗುವನ್ನ ಆಸ್ಪತ್ರೆಯಲ್ಲಿ ಬಿಟ್ಟು ಹೋದ ಮಹಿಳೆ

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ (Chintamani) ನಗರದ ಸರ್ಕಾರಿ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ ಸರಿ ಸುಮಾರು ಒಂದೂವರೆ ವರ್ಷದ ಗಂಡು ಮಗುವನ್ನು ಮಹಿಳೆಯೊಬ್ಬಳು ಬಿಟ್ಟು ಹೋಗಿರುವ ಘಟನೆ ನಡೆದಿದೆ.

ಮೊದಲು ಆಸ್ಪತ್ರೆಯೂಳಗೆ ಮಗುವಿನ ಸಮೇತ ಬಂದಿದ್ದಾಳೆ. ಬಳಿಕ ಮಲಗಿದ್ದ ಮಗುವನ್ನ ಆಸ್ಪತ್ರೆಯಲ್ಲಿನ ದೇವರು ತೊಟ್ಟಿಲಲ್ಲಿ ಇಟ್ಟು ಪರಾರಿಯಾಗಿದ್ದಾಳೆ. ಸದ್ಯ ಈ ದೃಶ್ಯಗಳು ಸಿಸಿಟಿವಿಯಲಲಿ ಸೆರೆಯಾಗಿದೆ. ಇದನ್ನೂ ಓದಿ: ದರ್ಶನ್‌ ಬಂಧನ ಬಳಿಕ ಮೊದಲ ಬಾರಿಗೆ ಸುಮಲತಾ ಪ್ರತಿಕ್ರಿಯೆ

https://youtu.be/5dt9QT5cK_o?si=0PjQ_QqiE8HBtzZL

ಸ್ವಲ್ಪ ಸಮಯದ ನಂತರ ಮಗು ನಿದ್ದೆಯಿಂದ ಎದ್ದು ಆಳುತ್ತಿರುವುದನ್ನ ಗಮನಿಸಿದ ಆಸ್ಪತ್ರೆಯ ದಾದಿಯರು ಮಗುವನ್ನ ಎತ್ತಿಕೊಂಡು ಸಮಾಧಾನ ಮಾಡಿ ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ. ಮಗುವಿನ ಪೋಷಕರು ಪತ್ತೆಯಾಗದಿದ್ದಾಗ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಮಹಿಳೆ ಮಗು ಇಟ್ಟು ಆತುರಾತುರವಾಗಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಎಲ್ಲ ಪ್ರಕರಣವನ್ನು ಸಿಬಿಐಗೆ ಕೊಡಲು ಸಾಧ್ಯವಿಲ್ಲ: ಪರಂ

https://youtu.be/MJjBy8hFq3c?si=wqDXOAWS3od_S4Tx

ಸದ್ಯ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿರುವ ಮಗು ತಂದೆ-ತಾಯಿ ಯಾರಿರಬಹುದು ಪತ್ತೆ ಹಚ್ಚಲು ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ಸಂತೋಷ್ ಚಿಂತಾಮಣಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದುವರೆಗೂ ಮಗುವಿನ ಪೋಷಕರು ಪತ್ತೆಯಾಗಿಲ್ಲ ಅಂತ ತಿಳಿದುಬಂದಿದೆ. ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಟೀಮ್ ಇಂಡಿಯಾ

Share with Friends
author avatar
News Desk