Crime NewsLatestಬೆಂಗಳೂರು-Bengaluruರಾಜ್ಯ-Karnataka

ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಮಹಜರು

ಬೆಂಗಳೂರು: ಹೆಚ್‌ಡಿ ರೇವಣ್ಣ (HD.Revanna) ಮತ್ತು ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ವಿರುದ್ಧ ಲೈಂಗಿಕ ದೌರ್ಜನ್ಯ ದೂರು ನೀಡಿದ್ದ ಸಂತ್ರಸ್ತೆಯನ್ನು ಇಂದು ಬಸವನಗುಡಿಯಲ್ಲಿರುವ (Basavanagudi) ರೇವಣ್ಣ ನಿವಾಸಕ್ಕೆ (Home) ಕರೆತಂದು ವಿಶೇಷ ತನಿಖಾ ದಳ (SIT) ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ.

ಬೆಳಗ್ಗೆ 11 ಗಂಟೆಗೆ ರೇವಣ್ಣ ನಿವಾಸಕ್ಕೆ ನಾಲ್ವರು ಮಹಿಳಾ ಅಧಿಕಾರಿಗಳು ಸೇರಿ ಆರು ಮಂದಿ ಅಧಿಕಾರಿಗಳ ತಂಡದೊಂದಿಗೆ ಸಂತ್ರಸ್ತೆ ಆಗಮಿಸಿದರು. ಈ ವೇಳೆ ಸಂತ್ರಸ್ತೆಯ ಹೇಳಿಕೆ ಸೇರಿದಂತೆ ಎಲ್ಲಾ ಮಹಜರು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಚಿತ್ರೀಕರಣ ಮಾಡಲಾಯಿತು. ಮಹಜರು ನಡೆಸುವ ಮೊದಲು ಮುಂಜಾಗ್ರತಾ ಕ್ರಮವಾಗಿ ರೇವಣ್ಣ ನಿವಾಸಕ್ಕೆ ಬ್ಯಾರಿಕೇಡ್ ಹಾಕಲಾಗಿತ್ತು. ಬಸವನಗುಡಿ ಪೊಲೀಸರು ಸ್ಥಳದಲ್ಲಿ ಬಿಗಿಭದ್ರತೆ ಕಲ್ಪಿಸಿದ್ದರು. ಇದನ್ನೂ ಓದಿ:

ಹೆತ್ತವರ ಕಣ್ಣೆದುರೇ ಉಸಿರು ಚೆಲ್ಲಿದ್ದ ಮಕ್ಕಳು -ಮುಗಿಲು ಮುಟ್ಟಿದ್ದ ಪೋಷಕರ ಅಕ್ರಂದನ

https://youtu.be/6pZh0UjUGDM?si=adtDW8hLzMpdwH0C

ರೇವಣ್ಣ ತಮ್ಮ ಕೊಠಡಿಗೆ ಬರುವಂತೆ ಆಹ್ವಾನಿಸಿ ಹಣ್ಣು ಕೊಡುವ ನೆಪದಲ್ಲಿ ಮೈ ಮುಟ್ಟುತ್ತಿದ್ದರು. ಮನೆಯ ಸ್ಟೋರ್ ರೂಂನಲ್ಲಿ ಕೈ ಹಿಡಿದು ಎಳೆಯುತ್ತಿದ್ದರು. ಸೀರೆಯ ಪಿನ್ ಕಿತ್ತು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಪ್ರಜ್ವಲ್ ಹಿಂದಿನಿAದ ಬಂದು ಮೈ ಮುಟ್ಟುತ್ತಾ ಹೊಟ್ಟೆಯನ್ನು ಮುಟ್ಟುತ್ತಿದ್ದರು. ಇದೇ ರೀತಿ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಮಹಿಳೆ ದೂರು ನೀಡಿದ್ದರು. ಇದನ್ನೂ ಓದಿ: ಸಕ್ಕರೆ ನಾಡಲ್ಲಿ ನಿಲ್ಲದ ಭ್ರೂಣಲಿಂಗ ಪತ್ತೆ,ಹತ್ಯೆ !

https://youtu.be/M2KHexb54ZM?si=0ZdIrXSGvJYGxObQ
Share with Friends
author avatar
News Desk