Latestಬೆಂಗಳೂರು-Bengaluruರಾಜಕೀಯ | Politicsರಾಜ್ಯ-Karnataka

ರಾಜ್ಯದಲ್ಲಿ ಕಾನೂನು ಸಂಪೂರ್ಣವಾಗಿ ಕುಸಿದಿದೆ: ಹೆಚ್‌ಡಿಕೆ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸಂಪೂರ್ಣವಾಗಿ ಕುಸಿದಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಆರೋಪ ಮಾಡಿದ್ದಾರೆ.

ಚನ್ನಗಿರಿಯಲ್ಲಿ (Channagiri) ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಸರ್ಕಾರಕ್ಕೆ, ಸರ್ಕಾರದ ಅಧಿಕಾರಿಗಳಿಗೆ ಯಾರು ಗೌರವ ಕೊಡುವ ವಾತಾವರಣ ಇಲ್ಲ. ಯಾವ ಪೊಲೀಸ್ ಅಧಿಕಾರಿಗಳಿಗೂ ಈ ರಾಜ್ಯದಲ್ಲಿ ಗೌರವವಿಲ್ಲ. ಈ ಸರ್ಕಾರ ಆ ರೀತಿ ಇದೆ. ಪೊಲೀಸ್ ಅಧಿಕಾರಿಗಳನ್ನು ಆ ರೀತಿ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಸಂಪೂರ್ಣವಾಗಿ ಕಾನೂನು ಕುಸಿತವಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೆಸಿ ಜನರಲ್ ಆಸ್ಪತ್ರೆ ಯಲ್ಲಿ ಮತ್ತೊಂದು ಅಮಾನವೀಯ ಘಟನೆ

https://youtu.be/8HO4VosUuaI?si=GE3MM9Xtd5JYnSR-

ಪೊಲೀಸ್ ಇಲಾಖೆ ಕಠಿಣವಾಗಿ ತೀರ್ಮಾನ ಮಾಡದೇ ಇರುವ ರೀತಿ ವಾತಾವರಣ ಸೃಷ್ಟಿ ಈ ಸರ್ಕಾರ ಮಾಡಿದೆ. ಇದು ಸರ್ಕಾರದ ಸ್ವಯಂ ಜವಾಬ್ದಾರಿ. ಇದು ಅವರೇ ಮಾಡಿಕೊಂಡಿರುವ ಕೆಲಸ. ಈ ಸರ್ಕಾರದ ಬಗ್ಗೆ ಅಧಿಕಾರಿಗಳಲ್ಲಿ ವಿಶ್ವಾಸ ಇಲ್ಲ. ಜನರಲ್ಲೂ ವಿಶ್ವಾಸ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಫಾರ್ಮ್‍ಹೌಸ್‍ನಲ್ಲಿ ರೇವ್ ಪಾರ್ಟಿ ಪ್ರಕರಣ- ನಟಿ ಹೇಮಾಗೆ ಸಿಸಿಬಿ ನೋಟಿಸ್

https://youtu.be/U8u0xL467TE?si=jb436IAt9e2a7BZZ
Share with Friends
author avatar
News Desk