BlogEntertainmentLatestTop Storiesಸ್ಯಾಂಡಲ್​ವುಡ್-Sandalwood

‘ಕೃಷ್ಣಂ ಪ್ರಣಯ ಸಖಿ’ ಚಿತ್ರಕ್ಕೆ ಸಿಕ್ತು ಗ್ರ್ಯಾಂಡ್ ಓಪನಿಂಗ್

ಹಾಡುಗಳಿಂದಲೇ ಸದ್ದು ಮಾಡಿದ ಗೋಲ್ಡನ್ ಸ್ಟಾರ್ ಗಣೇಶ ಅಭಿನಯಿಸಿರುವ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಇಂದು ಬಿಡುಗಡೆಯಾಗಿದೆ.ನರ್ತಕಿ ಚಿತ್ರಮಂದಿರದಲ್ಲಿ ‘ಕೃಷ್ಣಂ ಪ್ರಣಯ ಸಖಿ’ಗೆ ಗ್ರ್ಯಾಂಡ್ ವೆಲ್ ಕಮ್ ಸಿಕ್ಕಿದೆ. ಥಿಯೇಟರ್ ಎದುರು ಗಣಿ ಫ್ಯಾನ್ಸ್ ಸಂಭ್ರಮ ಆಚರಿಸಿದ್ದಾರೆ.

ಇಂದು ಸ್ವತಂತ್ರ ದಿನಾಚರಣೆಯಂದು “ಕೃಷ್ಣಂ ಪ್ರಣಯ ಸಖಿ” ಸಿನಿಮಾ ರಿಲೀಸ್‌ ಆಗಿದೆ. ಈ ಮುಂಚೆ ಸಿನಿಮಾಗಾಗಿ ಟಿಕೆಟ್‌ಗಳ ಪ್ರೀ ಬುಕಿಂಗ್‌ಗಾಗಿ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು, ಎಲ್ಲಾ ಥಿಯೇಟರ್‌ಗಳಲ್ಲಿ ಸೀಟ್ಸ್‌ ಫುಲ್‌ ಆಗಿದ್ದವು. ಟಿಕೆಟ್‌ಗಳು ಸಿಗದೆ ಹಲವರು ಬೇಸರಗೊಂಡಿದ್ದರು, ಬಹುನರೀಕ್ಷಿತ ಸಿನಿಮಾಗಾಗಿ ಜನರು ಇಷ್ಟು ದಿನ ಕಾದು ಸುಸ್ತಾಗಿ ಇದೀಗ ಥಿಯೇಟರ್‌ಗಳ ಬಳಿ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ.

ಸಿನಿಮಾದ ಸಾಂಗ್ಸ್‌ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ, ಇನ್ಸ್ಟಾಗ್ರಾಂನಲ್ಲಿ ಈ ಸಿನಿಮಾದ ದ್ವಾಪರ ದಾಟುತ ಬಂದ ಹಾಡಂತೂ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಒಂದು ಟ್ರೆಂಡ್‌ ಅನ್ನೆ ಸೃಷ್ಟಿಸಿ ಬಿಟ್ಟಿದೆ.

ಪ್ರಶಾಂತ್​ ಜಿ ರುದ್ರಪ್ಪ ನಿರ್ಮಾಣ, ಶ್ರೀನಿವಾಸ್​ ರಾಜು ನಿರ್ದೇಶನದ ಈ ಚಿತ್ರಕ್ಕಿದೆ. ರಂಗಾಯಣ ರಘು, ಸಾಧು ಕೋಕಿಲ ಸೇರಿದಂತೆ ಕಲಾವಿದರ ದೊಡ್ಡ ಬಣವೇ ಈ ಸಿನಿಮಾದಲ್ಲಿದೆ.

Share with Friends
author avatar
News Desk