BlogTop Storiesಕೋಲಾರ-Kolaraರಾಜ್ಯ-Karnataka

ಕೋಲಾರ : ದ್ವಿಚಕ್ರ ವಾನಗಳಿಗೆ ಬೊಲೆರೊ ಡಿಕ್ಕಿಯಾಗಿ ನಾಲ್ವರ ಸಾವು

ಕೋಲಾರ: ಮುಳಬಾಗಿಲು ತಾಲ್ಲೂಕಿನ ಆಂಬ್ಲಿಕಲ್ ಸಮೀಪದ ಗುಡಿಪಲ್ಲಿ ಮುಖ್ಯ ರಸ್ತೆಯ ಬಳಿ 3 ದ್ವಿಚಕ್ರ ವಾನಗಳಿಗೆ ಬೊಲೆರೊ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಇನ್ನೋರ್ವ ವ್ಯಕ್ತಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

3 ದ್ವಿಚಕ್ರ ವಾಹನಗಳಿಗೆ ಬೊಲೆರೊ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಾಲ್ವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಒಟ್ಟು ಓರ್ವ ಮಹಿಳೆ ಹಾಗೂ ಮೂವರು ಪುರುಷರ ಸಾವನ್ನಪ್ಪಿದ್ದಾರೆ. ಮಾತ್ರವಲ್ಲ, ಬುಲೆರೋ ವಾಹನದಲ್ಲಿದ್ದ ಒಬ್ಬರು ಗಾಯಗೊಂಡಿದ್ದಾರೆ.

ಮೃತರನ್ನು ಮುಳಬಾಗಿಲು ತಾಲ್ಲೂಕಿನ ನಾಗನಹಳ್ಳಿಯ ವೆಂಕಟರವಣಪ್ಪ (50) ಹಾಗೂ. ಕೋಣನಕುಂಟೆ ಗ್ರಾಮದ ಚಿಕ್ಕ ವೆಂಕಟರಾಮಪ್ಪ (52) ಹಾಗೂ ಅವರ ಪತ್ನಿ ಅಲುವೇಲಮ್ಮ (42) ಹಾಗೂ ರಾಧಪ್ಪ (52) ಎಂದು ಗುರುತಿಸಲಾಗಿದೆ. ಇನ್ನೂ ನಾಗನಹಳ್ಳಿಯ ವೆಂಕಟರವಣಪ್ಪ ಅವರ ಪತ್ನಿ ಗಾಯಿತ್ರಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡು ಮನೆಗೆ ದ್ವಿಚಕ್ರ‌‌ ವಾಹನದಲ್ಲಿ ಹೋಗುತ್ತಿರುವಾಗ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಬೊಲೊರೊ ವಾಹನ ಸವಾರನ ಅಜಾಗರೂಕತೆ ಮತ್ತು ಅತಿವೇಗವೇ ಕಾರಣ ಎನ್ನಲಾಗಿದೆ. ಈ ಕುರಿತು ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಾಲಗಿದೆ.

Share with Friends
author avatar
News Desk