ಪುಷ್ಪ 2’ಸಿನಿಮಾಗೆ ಠಕ್ಕರ್ ಕೊಡಲು ಕೀರ್ತಿ ಸುರೇಶ್ ಸಜ್ಜು
ಮಹಾನಟಿ ಕೀರ್ತಿ ಸುರೇಶ್ (Keerthy Suresh) ನಟನೆಯ ‘ರಘು ತಾತ’ (Raghu Thatha) ಸಿನಿಮಾ ರಿಲೀಸ್ಗೆ ಮುಹೂರ್ತ ಫಿಕ್ಸ್ ಆಗಿದ್ದು, ಅಲ್ಲು ಅರ್ಜುನ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಪುಷ್ಪ 2’ (Pushpa 2) ಚಿತ್ರದ ಮುಂದೆ ಕೀರ್ತಿ ‘ರಘು ತಾತ’ ಸಿನಿಮಾ ರಿಲೀಸ್ ಆಗಲಿದೆ.
ನೆನು ಶೈಲಜ, ನೆನು ಲೋಕಲ್ ಅಂತಹ ಹಲವಾರು ಸಿನಿಮಾಗಳಲ್ಲಿ ನಟಿಸಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಸೌತ್ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಸಹಜ ನಟಿ ಕೀರ್ತಿ ನಟನೆಯ ಬಹುನಿರೀಕ್ಷಿತ ಸಿನಿಮಾ ರಘು ತಾತ ಸಿನಿಮಾ ಬಗ್ಗೆ ಸಿಹಿಸುದ್ದಿ ಸಿಕ್ಕಿದೆ.

ಸದ್ಯ ಈ ಸಿನಿಮಾವನ್ನು ಕನ್ನಡದ ಹೆಮ್ಮೆಯ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ಇದೇ ಆಗಸ್ಟ್ 15ಕ್ಕೆ ‘ರಘು ತಾತ’ ರಿಲೀಸ್ ಡೇಟ್ ಅನೌನ್ಸ್ ಆಗಿದೆ.
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಪುಷ್ಪ ಪಾರ್ಟ್ 2 ಬಗ್ಗೆ ಫ್ಯಾನ್ಸ್ಗೆ ಭಾರೀ ನಿರೀಕ್ಷೆಯಿದ್ದು, ಅಂದೇ ‘ರಘು ತಾತ’ ಸಿನಿಮಾ ಕೂಡ ರಿಲೀಸ್ ಆಗಲಿದೆ. . ಸ್ಟಾರ್ ನಟನ ಸಿನಿಮಾ ಮುಂದೆ ಮಹಾನಟಿ ಸಿನಿಮಾ ರಿಲೀಸ್ ಆಗ್ತಿರೋದ್ರಿಂದ ಪುಷ್ಪ 2 ಮುಂದೆ ಉತ್ತಮ ಪೈಪೋಟಿ ಕೊಡುತ್ತಾರಾ ಎಂದು ಕಾದುನೋಡಬೇಕಿದೆ.

‘ರಘು ತಾತ’ ಸಿನಿಮಾ ಮಹಿಳಾ ಪ್ರಧಾನ ಸಿನಿಮಾ ಆಗಿದೆ. ಇಡೀ ಸಿನಿಮಾ ಕೀರ್ತಿ ಪಾತ್ರದ ಸುತ್ತವೇ ಸುತ್ತಲಿದೆ. ಆಗಸ್ಟ್ 15ಕ್ಕೆ ಕೀರ್ತಿ ಸಿನಿಮಾ ಚಿತ್ರಮಂದಿರಕ್ಕೆ ಬಹುಭಾಷೆಗಳಲ್ಲಿ ಲಗ್ಗೆ ಇಡಲಿದೆ.
ಕನ್ನಡದ ಹೆಮ್ಮೆಯ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹಲವು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಈ ಹಿಂದೆ ಕೇವಲ ಕನ್ನಡದಲ್ಲಿ ಸಿನಿಮಾ ಮಾಡಿ, ಬೇರೆ ಭಾಷೆಗಳಿಗೆ ಡಬ್ ಮಾಡಿ ಚಿತ್ರಗಳನ್ನು ರಿಲೀಸ್ ಮಾಡುತ್ತಿತ್ತು. ಆದರೆ, ಇದೀಗ ಆಯಾ ಭಾಷೆಯಲ್ಲೇ ಸಿನಿಮಾ ಮಾಡುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ.

