Crime NewsLatestಬೆಂಗಳೂರು-Bengaluruರಾಜಕೀಯ | Politicsರಾಜ್ಯ-Karnataka

ಪ್ರಜ್ವಲ್ ರೇವಣ್ಣನನ್ನು ಬಂಧಿಸುವಂತೆ “ಕೈ” ಕಾರ್ಯಕತೆಯರು ಅಗ್ರಹಿಸಿ ಪ್ರತಿಭಟನೆ

ಮಂಗಳೂರು: ಹಾಸನ (Hassan) ಆಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಭಾರತಕ್ಕೆ ವಾಪಸ್ಸಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ರಾಜ್ಯದಲ್ಲಿ 2 ನೇ ಹಂತದ ಲೋಕ ಸಭಾ ಚುನಾವಣೆಯ ಮತದಾನ (Voting) ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅವರು ಸ್ವದೇಶಕ್ಕೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜ್ವಲ್ ರೇವಣ್ಣ ವಿರುದ್ಧ ರಾಜ್ಯದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಮಂಗಳೂರು (Mangaluru) ಜಿಲ್ಲಾ ಕಾಂಗ್ರೆಸ್ (Congress) ಮಹಿಳಾ ಕಾರ್ಯಕರ್ತೆಯರು ಇಂದು ಮಲ್ಲಿಕಟ್ಟೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಕಚೇರಿ ಮಂದೆ ಪ್ರತಿಭಟನೆ ನಡೆಸಿದರು. ಇದನ್ನೂ ಓದಿ:ರೇಪ್ ಮಾಡಿದ್ದು, ರೇವಣ್ಣ ಅಲ್ಲ, ಪ್ರಜ್ವಲ್ – ಸಂತ್ರಸ್ತೆಯ ಸ್ಫೋಟಕ ಹೇಳಿಕೆ

https://youtu.be/6pZh0UjUGDM?si=t3-ZCwq80gSaV4qn

ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಬೇಕು, ಮಹಿಳೆಯರ ಅತ್ಯಾಚಾರವೆಸಗಿ ವಿದೇಶದಲ್ಲಿ ಅಡಗಿ ಕೂತಿರುವ ಪ್ರಜ್ವಲ್ ರೇವಣ್ಣರನ್ನು ವಾಪಸ್ಸು ಕರೆತಂದು ಬಂಧಿಸಿ ಎಂದು ಘೋಷಣೆಗಳನ್ನು ಕಾರ್ಯಕರ್ತೆಯರು ಕೂಗಿದ್ದಾರೆ.ಇದನ್ನೂ ಓದಿ: ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಮಹಜರು

https://youtu.be/8r8XkFbaG34?si=TqWSd-M1XaH7po8H

ಮಹಿಳೆಯರಿಗೆ ಘನತೆಯ ಬದುಕು ಬೇಕು ಸ್ತ್ರೀ ಕಂಟಕರಿಗೆ ಶಿಕ್ಷೆಯಾಗಲೇಬೇಕು ಎಂದು ಬರೆದ ಪ್ಲಕಾರ್ಡ್ ಗಳನ್ನು ಪ್ರದರ್ಶಿಸಿದ್ದಾರೆ. ಇದನ್ನೂ ಓದಿ: ಎಲ್ಲಿದಿಯಪ್ಪ ಪ್ರಜ್ವಲ್, ವಿಚಾರಣೆಗೆ ಹಾಜರಾಗುವಂತೆ ಕುಟುಂಬಸ್ಥರು, ಆಪ್ತರಿಂದಲೇ ಒತ್ತಡ

Share with Friends
author avatar
News Desk