ಕೆಂಪೇಗೌಡ ರಸ್ತೆಯಲ್ಲಿರುವ ಮತ್ತೊಂದು ಪ್ರತಿಷ್ಠಿತ ಥಿಯೇಟರ್ ಬಂದ್
ಬೆಂಗಳೂರು: ಒಟಿಟಿ, ಕಡಿಮೆ ಸಂಖ್ಯೆಯಲ್ಲಿ ಸಿನಿಮಾ ಸೇರಿದಂತೆ ಹಲವಾರು ಕಾಡಿಣಗಳಿಂದಾಗಿ ಕೆ.ಜಿ (Kempegowda Road) ರಸ್ತೆಯ ಅನೇಕ ಚಿತ್ರಮಂದಿರಗಳು ಬಂದ್ ಆಗಿವೆ. ಇದೀಗ ಪ್ಯಾಲೇಸ್ (Palace) ಗುಟ್ಟಳ್ಳಿಯಲ್ಲಿರುವ ಕಾವೇರಿ(kaveri) ಚಿತ್ರಮಂದಿರದ (Theatre) ಸರದಿಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಒಂದಲ್ಲ ಒಂದು ಕಾರಣಕ್ಕೆ ಚಿತ್ರಮಂದಿರಗಳು ಬಗಿಲು ಹಾಕುತ್ತಿವೆ. ಇದಕ್ಕೆ ಒಟಿಟಿ ಮತ್ತು ಕಡಿಮೆ ಸಂಖ್ಯೆಯಲ್ಲಿ ಸಿನಿಮಾ ನಿರ್ಮಾಣ ಮತ್ತು ಆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ಗಳು ತಲೆಯೆತ್ತಿವೆ. ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಬಡಾವಣೆಯಲ್ಲಿ ಒಂದಾಗಿರುವ ಸ್ಯಾಂಕಿ ರಸ್ತೆಯ, ಪ್ಯಾಲೇಸ್ ಗುಟ್ಟಳ್ಳಿಯಲ್ಲಿರುವ ಕಾವೇರಿ ಚಿತ್ರಮಂದಿರ ತನ್ನ ಶಾಶ್ವತ ಪ್ರದರ್ಶನವನ್ನು ನಿಲ್ಲಿಸಲಿಲ್ಲ. ಕಳೆದ ಜನವರಿ 11ಕ್ಕೆ ಕಾವೇರಿಗೆ ಭರ್ತಿ 50 ವರ್ಷ ತುಂಬಿತ್ತು. ಗೋಲ್ಡನ್ ಜ್ಯುಬಿಲಿ ಆಚರಣೆಯನ್ನೂ ಮಾಡಲಾಗಿತ್ತು.ಇದನ್ನೂ ಓದಿ: ಪ್ರಜ್ವಲ್ ರೇವಣ್ಣನನ್ನು ಬಂಧಿಸುವಂತೆ “ಕೈ” ಕಾರ್ಯಕತೆಯರು ಅಗ್ರಹಿಸಿ ಪ್ರತಿಭಟನೆ

ಹಲವಾರು ಕಾರಣಗಳಿಂದಾಗಿ ಕಾವೇರಿ ಥಿಯೇಟರ್ ಇತಿಹಾಸದ ಪುಟದಲ್ಲಿ ದಾಖಲಾಗಿತ್ತು. ಮೆಜೆಸ್ಟಿಕ್ ಏರಿಯಾದಲ್ಲಿದ್ದ ಕಪಾಲಿ ಚಿತ್ರಮಂದಿರ ಹೊರತು ಪಡಿಸಿದರೆ, ಅತೀ ಹೆಚ್ಚು ಹಾಸನಗಳುಳ್ಳ ಚಿತ್ರಮಂದಿರ ಎಂದರೆ ಅದು ಕಾವೇರಿ ಚಿತ್ರಮಂದಿರ. 1300ರಷ್ಟು ಸೀಟುಗಳು ಈ ಚಿತ್ರಮಂದಿರದಲ್ಲಿದ್ದವು. ಜೊತೆಗೆ ಸಾಕಷ್ಟು ಚಿತ್ರಗಳು ಇಲ್ಲಿ ಶತದಿನ ಪ್ರದರ್ಶನ ಕೂಡ ಕಂಡಿವೆ. ಇದನ್ನೂ ಓದಿ: ರೇಪ್ ಮಾಡಿದ್ದು, ರೇವಣ್ಣ ಅಲ್ಲ, ಪ್ರಜ್ವಲ್ – ಸಂತ್ರಸ್ತೆಯ ಸ್ಫೋಟಕ ಹೇಳಿಕೆ
ಜನರು ಥಿಯೇಟರ್ ಬರುತ್ತಿಲ್ಲ. ಇಂತಹ ದೊಡ್ಡ ಕಟ್ಟಡವನ್ನು ನಿಭಾಯಿಸೋದು ಕಷ್ಟ. ಹಾಗಾಗಿ ಥಿಯೇಟರ್ ಬಂದು ಮಾಡಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಚಿತ್ರಮಂದಿರದ ಮಾಲೀಕರು ನಿರ್ಧಾರ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ. ಇದನ್ನೂ ಓದಿ: ದೆಹಲಿ ಆಯ್ತು ಈಗ ಅಹಮದಾಬಾದ್ನ ಶಾಲೆಗಳಿಗೆ ಬಾಂಬ್ ಬೆದರಿಕೆ
