ಪ್ಯಾರಾಲಿಂಪಿಕ್ಸ್‌ಗೆ ತೆರೆ : 29 ಪದಕ ಗೆದ್ದು 18ನೇ ಸ್ಥಾನದಲ್ಲಿ ಭಾರತ
ಪ್ಯಾರಿಸ್: 2024ರ ಪ್ಯಾರಾಲಿಂಪಿಕ್ಸ್‌ಗೆ ಅದ್ದೂರಿ ತೆರೆಬಿದ್ದಿದೆ. ಭಾರತ 29 ಪದಕಗಳನ್ನು ಪಡೆಯುವ ಮೂಲಕ ತನ್ನ ಅಭಿಯಾನವನ್ನು ಮುಕ್ತಾಯಗೊಳಿಸಿದೆ. ಈ ಮೂಲಕ ಪದಕ ಪಟ್ಟಿಯಲ್ಲಿ ಭಾರತ 18ನೇ ಸ್ಥಾನ ಪಡೆದುಕೊಂಡಿದೆ. ಇದು ಭಾರತದ ಐತಿಹಾಸಿಕ ಸಾಧನೆಯೂ ಆಗಿದೆ.
ಭಾರತವು 7 ಚಿನ್ನ, 9 ಬೆಳ್ಳಿ ಮತ್ತು 13 ಕಂಚಿನ ಪದಕಗಳನ್ನು ಪಡೆದು ಪ್ಯಾರಾಲಿಂಪಿಕ್ಸ್‌ನಲ್ಲಿ ಹೊಸ ದಾಖಲೆ ಬರೆಯಿತು. ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 19 ಪದಕಗಳನ್ನು ಗಳಿಸಿತ್ತು. ಈ ಸಲ 29 ಪದಕಗಳೊಂದಿಗೆ ಭಾರತ ಉತ್ತಮ ಸಾಧನೆಗೈದಿದೆ.
ಚೀನಾ 219 ಪದಕಗಳನ್ನು ಗೆಲ್ಲುವ ಮೂಲಕ ಮೊದಲ ಸ್ಥಾನ ಪಡೆದರೆ, ಗ್ರೇಟ್ ಬ್ರಿಟನ್ 122, ಅಮೆರಿಕ 104 ಪದಕಗಳನ್ನು ಪಡೆದು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
ಪದಕ ವಿಜೇತರ ಪಟ್ಟಿ
- ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್1 (ಶೂಟಿಂಗ್) : ಅವನಿ ಲೇಖರಾ -ಚಿನ್ನ
- ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್1 (ಶೂಟಿಂಗ್) : ಮೋನಾ ಅಗರ್ವಾಲ್ ಕಂಚು
- ಮಹಿಳೆಯರ 100 ಮೀಟರ್ ಟಿ35 (ಅಥ್ಲೆಟಿಕ್ಸ್): ಪ್ರೀತಿ ಪಾಲ್ -ಕಂಚು
- ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್ಎಚ್1 (ಶೂಟಿಂಗ್): ಮನೀಶ್ ನರ್ವಾಲ್ ಬೆಳ್ಳಿ
- ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಎಸ್ಎಚ್ 1 (ಶೂಟಿಂಗ್): ರುಬಿನಾ ಫ್ರಾನ್ಸಿಸ್ -ಕಂಚು
- ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್ಎಚ್1 (ಶೂಟಿಂಗ್): ಮನೀಶ್ ನರ್ವಾಲ್ ಬೆಳ್ಳಿ
- ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಎಸ್ಎಚ್ 1 (ಶೂಟಿಂಗ್): ರುಬಿನಾ ಫ್ರಾನ್ಸಿಸ್ ಕಂಚು
- ಮಹಿಳೆಯರ 200 ಮೀಟರ್ ಟಿ35 (ಅಥ್ಲೆಟಿಕ್ಸ್): ಪ್ರೀತಿ ಪಾಲ್ -ಕಂಚು
- ಪುರುಷರ ಹೈಜಂಪ್ ಟಿ47 (ಅಥ್ಲೆಟಿಕ್): ನಿಶಾದ್ ಕುಮಾರ್ -ಬೆಳ್ಳಿ
- ಪುರುಷರ ಡಿಸ್ಕಸ್ ಪ್ರೋ F56 (ಅಥ್ಲೆಟಿಕ್): ಯೋಗೇಶ್ ಕಥುನಿಯಾ -ಬೆಳ್ಳಿ
- ಪುರುಷರ ಸಿಂಗಲ್ಸ್ ಎಸ್ಎಲ್ 3 (ಬ್ಯಾಡ್ಮಿಂಟನ್): ನಿತೀಶ್ ಕುಮಾರ್ಗೆ ಚಿನ್ನ
- ಮಹಿಳಾ ಸಿಂಗಲ್ಸ್ ಎಸ್ಕುವ (ಬ್ಯಾಡ್ಮಿಂಟನ್): ತುಳಸಿಮತಿ ಮುರುಗೇಶನ್ -ಬೆಳ್ಳಿ
- ಮಹಿಳಾ ಸಿಂಗಲ್ಸ್ ಎಸ್ಕು5 (ಬ್ಯಾಡ್ಮಿಂಟನ್): ಮನೀಷಾ ರಾಮದಾಸ್ ಕಂಚು
- ಪುರುಷರ ಸಿಂಗಲ್ಸ್ ಎಸ್‌ಸ್ಎಲ್ 4 (ಬ್ಯಾಡ್ಮಿಂಟನ್): ಸುಹಾಸ್ ಯತಿರಾಜ್ -ಬೆಳ್ಳಿ
- ಬಿಲ್ಲುಗಾರಿಕೆ ಮಿಶ್ರ ತಂಡ: ರಾಕೇಶ್ ಕುಮಾರ್/ಶೀತಲ್ ದೇವಿ -ಕಂಚು
- ಪುರುಷರ ಜಾವೆಲಿನ್ ಥೋ F64 (ಅಥ್ಲೆಟಿಕ್): ಸುಮಿತ್ ಆಂಟಿಲ್ -ಚಿನ್ನ
- ಮಹಿಳಾ ಸಿಂಗಲ್ಸ್ ಎಸ್‌ಸ್ಎಚ್ 6 (ಬ್ಯಾಡ್ಮಿಂಟನ್): ನಿತ್ಯ ಶ್ರೀ ಶಿವನ್ -ಕಂಚು
- ಮಹಿಳೆಯರ 400 ಮೀಟರ್ ಟಿ20 (ಅಥ್ಲೆಟಿಕ್ಸ್): ದೀಪ್ತಿ ಜೀವನ್ನಿ -ಕಂಚು
- ಪುರುಷರ ಜಾವೆಲಿನ್ ಎಫ್46 (ಅಥ್ಲೆಟಿಕ್ಸ್): ಸುಂದರ್ ಸಿಂಗ್ ಗುರ್ಜರ್ -ಕಂಚು
- ಪುರುಷರ ಜಾವೆಲಿನ್ ಎಫ್46 (ಅಥ್ಲೆಟಿಕ್ಸ್): ಅಜೀತ್ ಸಿಂಗ್-ಬೆಳ್ಳಿ
- ಪುರುಷರ ಹೈ ಜಂಪ್ T63 (ಅಥ್ಲೆಟಿಕ್) ಮರಿಯಪ್ಪನ್ ತಂಗವೇಲು -ಕಂಚು
- ಪುರುಷರ ಹೈ ಜಂಪ್ ಟಿ63 (ಅಥ್ಲೆಟಿಕ್): ಶರದ್ ಕುಮಾರ್ -ಬೆಳ್ಳಿ
- ಪುರುಷರ ಶಾಟ್ ಪುಟ್ ಎಫ್46 (ಅಥ್ಲೆಟಿಕ್ಸ್): ಸಚಿನ್ ಖಿಲಾರಿ -ಬೆಳ್ಳಿ
- ಪುರುಷರ ವೈಯಕ್ತಿಕ ಬಿಲ್ಲುಗಾರಿಕೆ: ಹರ್ವಿಂದರ್ ಸಿಂಗ್ -ಚಿನ್ನ
- ಪುರುಷರ ಕ್ಲಬ್ ಥೋ 51 (ಅಥ್ಲೆಟಿಕ್): ಧರಂಬೀರ್ ಚಿನ್ನ
- ಪುರುಷರ ಕ್ಲಬ್ ಥೋ 51 (ಅಥ್ಲೆಟಿಕ್): ಪ್ರಣವ್ ಸೂರ್ಮಾ-ಬೆಳ್ಳಿ
- ಪುರುಷರ ಜೂಡೋ 60 ಕೆಜಿ ವಿಭಾಗ: ಕಪಿಲ್ ಪರ್ಮಾರ್ ಕಂಚು
- ಪುರುಷರ ಹೈ ಜಂಪ್ ಟಿ64 (ಅಥ್ಲೆಟಿಕ್ಸ್): ಪ್ರವೀಣ್ ಕುಮಾರ್ -ಚಿನ್ನ
- ಪುರುಷರ ಶಾಟ್ ಪುಟ್ ಎಫ್57 (ಅಥ್ಲೆಟಿಕ್ಸ್): ಹೊಕಾಟೊ ಸೆಮಾ ಕಂಚು
- ಮಹಿಳೆಯರ 200 ಮೀಟರ್ ಟಿ12 (ಅಥ್ಲೆಟಿಕ್ಸ್): ಸಿಮ್ರಾನ್ ಸಿಂಗ್ -ಕಂಚು
- ಪುರುಷರ ಜಾವೆಲಿನ್ ಎಫ್41 (ಅಥ್ಲೆಟಿಕ್ಸ್): ನವದೀಪ್ ಸಿಂಗ್ -ಚಿನ್ನ
