Latestರಾಜಕೀಯ | Politicsರಾಜ್ಯ-Karnatakaಶಿವಮೊಗ್ಗ-Shivamogga

ಬಿಜೆಪಿಯ ಮಾಜಿ ವಿಧಾನ ಸದಸ್ಯ ಎಂ.ಬಿ.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಶಿವಮೊಗ್ಗ: ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ( M.B Bhanuprakash) ಅವರು ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಏರಿಕೆಯಾದ ಹಿನ್ನಲೆ ಖಂಡಿಸಿ ರಾಜ್ಯಾದಂತ ಪ್ರತಿಭಟನೆಗಳು ನಡೆಯುತ್ತಿವೆ. ನಗರದ (Shivamogga) ಗೋಪಿ ಸರ್ಕಲ್‍ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಅವರು ಭಾಗಿಯಾಗಿದ್ದಾಗ ತೀವ್ರ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

https://youtu.be/aU2T6ruBgE0?si=HZOewzNRgdyByE2m

ಸದ್ಯ ಮೃತದೇಹವನ್ನು ಕುಟುಂಬಸ್ಥರಿಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಡಿ ಗ್ಯಾಂಗ್‌ ಬಂಧನ – ಹಾಸ್ಯ ನಟ ಚಿಕ್ಕಣ್ಣಗೆ ನೋಟಿಸ್‌

Share with Friends
author avatar
News Desk