Health | ಆರೋಗ್ಯ

Health Care: ಎಷ್ಟೇ ಏಜ್​ ಆದ್ರೂ ಕೂಡ ಯಂಗ್​ ಆಗಿ ಕಾಣಬೇಕಾ? ಹಾಗಾದ್ರೆ ಇವರು ಕೊಟ್ಟಿರೋ ಟ್ರಿಕ್ಸ್​ ಫಾಲೋ ಮಾಡಿ

ತನ್ನ ಯವ್ವೌನವನ್ನು ಹಾಗೆಯೇ ಜತನವಾಗಿರಿಸಿಕೊಳ್ಳಲು ಹಾಗೂ ದೀರ್ಘಾಯುಷಿಯಾಗಿರಲು ಬಯೋಟೆಕ್ ಸಿಇಒ (CEO) ಬ್ರಯಾನ್ ಜಾನ್‌ಸನ್ ಮಿಲಿಯಗಟ್ಟೆಲೆ ಹಣ ಖರ್ಚು ಮಾಡುತ್ತಿದ್ದಾರೆ ಅಂತೆಯೇ ಅತ್ಯಂತ ಶಿಸ್ತುಬದ್ಧ ಹಾಗೂ ಕ್ರಮಬದ್ಧ ಜೀವನಶೈಲಿಯನ್ನು ಅನುಸರಿಸುವ ಮೂಲಕ ಅತ್ಯಂತ ವಿಭಿನ್ನ ಶೈಲಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಊಟ (Dinner) ತಿಂಡಿಯಿಂದ ಆರಂಭಿಸಿ, ವರ್ಕೌಟ್, ನಿದ್ದೆ (Sleep) ಇದೆಲ್ಲದರ ಮೇಲೆ ಕಟ್ಟುನಿಟ್ಟಿನ ಗಮನ ಹರಿಸುವ ಬ್ರಯಾನ್ ಕೊಂಚವೂ ವ್ಯತ್ಯಾಸವಾಗದಂತೆ ದಿನಚರಿಯನ್ನು ಅನುಸರಿಸುತ್ತಾರೆ.

ಮುಖದ ನೆರಿಗೆ ನಿವಾರಣೆಗೆ ಚಿಕಿತ್ಸೆ

ಜಾನ್‌ಸನ್ ಸ್ವತಃ ತಮ್ಮ ಫಿಟ್‌ನೆಸ್ ಜರ್ನಿಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ್ದು, ರಾತ್ರಿ ಹಾಸಿಗೆಯಲ್ಲಿ ಯಾವುದೇ ಕಚೇರಿಯ ಕೆಲಸವಾಗಲೀ ಓದುವುದಾಗಲೀ ಮಾಡುವುದಿಲ್ಲ ಬರಿಯ ವಿಶ್ರಾಂತಿ ಮಾತ್ರ ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಾರೆ. ಮುಖದ ನೆರಿಗೆಗಳನ್ನು ನಿವಾರಿಸಲು ಲೇಸರ್ ಚಿಕಿತ್ಸೆಯನ್ನು ಈ ಮಿಲಿಯಾಧಿಪತಿ ಮಾಡಿಸಿಕೊಳ್ಳುತ್ತಾರೆ. ರಾತ್ರಿ 8.30 ಗೆಲ್ಲಾ ಎಲ್ಲಾ ಕೆಲಸ ಮುಗಿಸಿ ನಿದ್ರಿಸುತ್ತೇನೆ ಎಂದು ಹೇಳುವ ಬ್ರಯಾನ್ ಬೆಳಗ್ಗೆ 6 ಗಂಟೆಗೆ ತಮ್ಮ ದಿನಚರಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಮಗನೊಂದಿಗೆ ಕೊಂಚ ಹೊತ್ತು ಅಡ್ಡಾಡುವುದೂ ಕೂಡ ಅವರ ಸಂಜೆಯ ಹವ್ಯಾಸಗಳಲ್ಲೊಂದಾಗಿದೆ ಎಂದು ಯೂಟ್ಯೂಬ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಜಾಹೀರಾತು

ಮನೆಯನ್ನೇ ಜಿಮ್‌ ರೀತಿಯಲ್ಲಿ ಸಿದ್ಧಪಡಿಸಿಕೊಂಡಿರುವ ಬ್ರಯಾನ್

ಮನೆಯನ್ನೇ ಸಂಪೂರ್ಣವಾಗಿ ತಮ್ಮ ಫಿಟ್‌ನೆಸ್ ಪ್ರಯಾಣಕ್ಕೆ ಬೇಕಂತೆ ಸಿದ್ಧಪಡಿಸಿಕೊಂಡಿರುವ ಬ್ರಯಾನ್, ಹೋಮ್ ಜಿಮ್ ಅನ್ನು ಸಿದ್ಧಪಡಿಸಿದ್ದಾರೆ ಸೀಲಿಂಗ್‌ಗಳಲ್ಲಿ ಪ್ರಕೃತಿಯ ನೋಟ ಬರುವಂತಹ ವಿನ್ಯಾಸಗಳನ್ನು ಅಳವಡಿಸಿದ್ದಾರೆ. ಇವರು ತಮ್ಮ ಬುಕ್‌ಶೆಲ್ಫ್‌ಗಳಲ್ಲಿ ಬಯೋಗ್ರಾಫಿಗಳ ಅನೂಹ್ಯ ಕಲೆಕ್ಶನ್‌ಗಳನ್ನೇ ಹೊಂದಿದ್ದಾರೆ.

ಇದನ್ನೂ ಓದಿ: 
ಬರೀ ಸಸ್ಯಾಹಾರಿಗಳಷ್ಟೇ ಅಲ್ಲ, ನಾನ್​ವೆಜಿಟೇರಿಯನ್ಸ್​ ಕೂಡ ಇವುಗಳನ್ನು ತಿಂದು ತೂಕ ಇಳಿಸಿಕೊಳ್ಳಬಹುದು!

ತಮ್ಮ ಮೇಲೆಯೇ ಪ್ರಯೋಗ

ಇಷ್ಟೆಲ್ಲಾ ಹಣ ಸಮಯ ವಿನಿಯೋಗಿಸುವ ಬ್ರಯಾನ್ 46 ರ ಹರೆಯದವರು ಹಾಗೂ 18 ರ ನಳನಳಿಸುವ ಯುವಕನಿಂತಿರಬೇಕೆಂದೇ ತಮ್ಮ ಮೇಲೆಯೇ ಪ್ರಯೋಗಗಳನ್ನು ನಡೆಸುತ್ತಾರೆ. ನಿದ್ರಿಸುವ ವ್ಯವಸ್ಥೆಯಿಂದ ತೊಡಗಿ ತಮ್ಮ ಪ್ರತಿಯೊಂದು ಚಟುವಟಿಕೆಯ ಮೇಲೂ ನಿಗಾವಹಿಸುವ ಬ್ರಯಾನ್, ಪ್ರತಿಯೊಂದಕ್ಕೂ ಮಿಲಿಯಗಟ್ಟಲೆ ಹಣ ಖರ್ಚುಮಾಡುತ್ತಾರೆ. ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ವರ್ಷಕ್ಕೆ ಸುಮಾರು  2 ಮಿಲಿಯನ್ ಖರ್ಚು ಮಾಡಿ ಪ್ರಾಜೆಕ್ಟ್ ಬ್ಲುಪ್ರಿಂಟ್ ಅನ್ನು ಸಿದ್ಧಪಡಿಸಿಕೊಂಡಿದ್ದಾರೆ.

ದೇಹದ ವಯಸ್ಸು ಅಳೆಯಲು ಬೇರೆ ಬೇರೆ ಚಿಕಿತ್ಸೆ

ವ್ಯಾಯಾಮದೊಂದಿಗೆ ದಿನವನ್ನು ಆರಂಭಿಸುವ ಬ್ರಯಾನ್ ದಿನಕ್ಕೆ 100 ಕ್ಕಿಂತ ಹೆಚ್ಚು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಹಾಗೂ ಪ್ರಾಜೆಕ್ಟ್ ರೆಡ್ ಲೈಟ್ ಹೆಸರಿನ ಕ್ಯಾಪ್ ಅನ್ನು ತಮ್ಮ ತಲೆಯಲ್ಲಿ ಧರಿಸುತ್ತಾರೆ, ಕಟ್ಟುನಿಟ್ಟಾದ  ಡಯೆಟ್ ಅನುಸರಿಸುತ್ತಾರೆ ಹೈ ಇಂಟೆನ್ಸಿವಿಟಿ ವ್ಯಾಯಾಮ ಮಾಡುತ್ತಾರೆ ಅಂತೆಯೇ ರಕ್ತ ಪರೀಕ್ಷೆ, ಅಲ್ಟ್ರಾಸೌಂಡ್ಸ್, ಎಮ್‌ಆರ್‌ಐ ಹಾಗೂ ಕೊಲೊನೊಸ್ಕೊಪೀಸ್ ಪರೀಕ್ಷೆಗಳ ಮೂಲಕ ತಮ್ಮ ದೇಹದ ವಯಸ್ಸನ್ನು ಅಳೆಯುತ್ತಾರೆ.

ಜಾನ್‌ಸನ್ ಅನುಸರಿಸುವ ದಿನಚರಿ ಆರೋಗ್ಯ ಪ್ರಯೋಜನಗಳನ್ನು ಹೊಂದಿಲ್ಲ

ಜಾನ್‌ಸನ್ ವಯಸ್ಸನ್ನೇ ರಿವರ್ಸ್ ಮಾಡುವ ತಂತ್ರಜ್ಞಾನವನ್ನು ಅನುಕರಿಸುತ್ತಿದ್ದು ಇದು ಅನೇಕ ವಿವಾದಗಳನ್ನುಂಟು ಮಾಡಿದೆ. ಇನ್ನು ಅವರು ಅನುಸರಿಸುವ ದಿನಚರಿ ಸ್ಪಷ್ಟವಲ್ಲದ ಆರೋಗ್ಯ ಪ್ರಯೋಜನಗಳನ್ನೊದಗಿಸುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಜಾಹೀರಾತು

ವಿವಾದದ ಸುಳಿಯಲ್ಲಿ ಜಾನ್‌ಸನ್ ಪ್ರಯೋಗಗಳು

ಜಾನ್‌ಸನ್ ತನ್ನ ಹದಿಹರೆಯದ ಮಗನಿಂದಲೇ ಬ್ಲಡ್ ಪ್ಲಾಸ್ಮಾ ಟ್ರಾನ್ಸ್‌ಫ್ಯೂಶನ್ ಅನ್ನು ಪಡೆದುಕೊಳ್ಳುವ ದಿನಚರಿಯಲ್ಲಿ ತೊಡಗಿಸಿಕೊಂಡಿರುವುದು ವಿವಾದವನ್ನುಂಟು ಮಾಡಿತ್ತು ಹಾಗೂ ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದಾಗಿ ಜಾನ್‌ಸನ್ ತಿಳಿಸಿದ್ದಾರೆ. ಇಂತಹುದೇ ಅನೇಕ ಪ್ರಯೋಗಗಳನ್ನು ಜಾನ್‌ಸನ್ ನಡೆಸುತ್ತಿರುತ್ತಾರೆ.

ದೀರ್ಘಾಯುಷ್ಯ ಹಾಗೂ ಯುವಕರಂತಾಗಲು ಮಿಲಿಯಗಟ್ಟಲೆ ವ್ಯಯಿಸುವ ಮಿಲಿಯಾಧಿಪತಿಗಳು

Shaniಯಿಂದ ಈ ರಾಶಿಯವರಿಗೆ ಕಾದಿದೆ ಲಕ್​!


Shaniಯಿಂದ ಈ ರಾಶಿಯವರಿಗೆ ಕಾದಿದೆ ಲಕ್​!

ದೀರ್ಘಾಯುಷ್ಯ ಹಾಗೂ ಯುವಕರಂತೆ ಇರಬೇಕೆಂಬ ಅದಮ್ಯ ಬಯಕೆಯಿಂದ ಜಾನ್‌ಸನ್‌ರಂತೆ ಅನೇಕ ಮಿಲಿಯಾಧಿಪತಿಗಳು ಕೆಲವೊಂದು ಪ್ರಯೋಗಗಳು ಹಾಗೂ ಚಿಕಿತ್ಸೆಗಾಗಿ ಹಣ ಖರ್ಚುಮಾಡುತ್ತಿದ್ದಾರೆ. 10 ವರ್ಷದ ದೀರ್ಘಾಯುಷ್ಯವನ್ನು ಪಡೆಯಲು ಸಾಮ್ ಆಲ್ಟ್‌ಮನ್, ಬಯೋಟೆಕ್ ಕಂಪನಿಯಲ್ಲಿ 180 ಮಿಲಿಯನ್ ವಿನಿಯೋಗಿಸುತ್ತಿದ್ದಾರೆ. 90 ರ ಹರೆಯದಲ್ಲೂ 50 ರಂತೆ ಕಾಣಿಸಿಕೊಳ್ಳಬೇಕೆಂದು ಪೀಟರ್ ಥೀಲ್ 3.5 ಮಿಲಿಯನ್ ವಿನಯೋಗಿಸುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ.

ಜಾಹೀರಾತು

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Share with Friends
author avatar
News Desk