Latestರಾಷ್ಟ್ರೀಯ-Nationalವಾಣಿಜ್ಯ

ಬೆಲೆ ಏರಿಕೆ ಶಾಕ್‌ನಲ್ಲಿದ್ದ ಗ್ರಾಹಕರಿಗೆ ಗುಡ್‌ ನ್ಯೂಸ್‌- LPG ಸಿಲಿಂಡರ್‌ ದರ 30 ರೂ. ಇಳಿಕೆ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್‌ (Cylinder Price) ದರವನ್ನು 30 ರೂ. ಇಳಿಕೆ ಮಾಡಿದೆ.

ದರ ಇಳಿಕೆಯಿಂದ ದೆಹಲಿಯಲ್ಲಿ ಮೊದಲು 1,676 ರೂ.ಗೆ ಮಾರಾಟವಾಗುತ್ತಿದ್ದ 19 ಕೆಜಿ ಸಿಲಿಂಡರ್‌ ಈಗ 1,646 ರೂ.ಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1,598 ರೂ., ಕೋಲ್ಕತ್ತಾದಲ್ಲಿ 1,756 ರೂ. ಇದೆ. ಇದನ್ನೂ ಓದಿ: ಇಂದಿನಿಂದ ಬ್ರಿಟಿಷರ ಕಾಲದ ಕ್ರಿಮಿನಲ್‌ ಕಾನೂನುಗಳಿಗೆ ಗುಡ್‌ಬೈ- 3 ದೇಶಿ ಕಾನೂನು ಜಾರಿ

https://youtu.be/5baaPtkP0Q4?si=amyaj3WwmrFWHxRr

ಗೃಹ ಬಳಕೆಯಲ್ಲಿ ಬಳಸುವ ಬಳಸುವ 14.2 ಕೆಜಿ ಎಲ್‌ಪಿಜಿ (LPG) ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆ 905.50 ರೂ.ದರವಿದೆ.

https://youtu.be/rt3ioEj0hMQ?si=n9cUY0_KLqv3kyfQ

ದೆಹಲಿಯಲ್ಲಿ 803 ರೂ. ಕೋಲ್ಕತ್ತಾದಲ್ಲಿ 829 ರೂ. ಚೆನ್ನೈನಲ್ಲಿ 818.50 ರೂ. ಮತ್ತು ಮುಂಬೈನಲ್ಲಿ 802.50 ರೂ. ಇದೆ. ಇದನ್ನೂ ಓದಿ: 213 ಹೊಸ ಡೆಂಗ್ಯೂ ಪ್ರಕರಣ ದಾಖಲೆ

Share with Friends
author avatar
News Desk