BlogCrime Newsಬೆಂಗಳೂರು-Bengaluru

ಬೆಂಗಳೂರಲ್ಲಿ ಖತರ್ನಾಕ್ ಸೀರೆ ಕಳ್ಳಿಯರ ಗ್ಯಾಂಗ್ ಅರೆಸ್ಟ್‌

ಬೆಂಗಳೂರು: ಪ್ರತಿಷ್ಠಿತ ಸೀರೆ ಅಂಗಡಿಗಳಲ್ಲಿ ಕಳ್ಳತನ ಮಾಡ್ತಿದ್ದ ಮಹಿಳೆಯರನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ. ಗ್ಯಾಂಗ್ ಬಂಧನವಾಗಿದ್ದು ಜೆಪಿ ನಗರ ಪೊಲೀಸರಿಂದ ನಾಲ್ವರು ಮಹಿಳೆಯರನ್ನ ಅರೆಸ್ಟ್‌ ಮಾಡಿದ್ದಾರೆ.

ನಾಲ್ವರು ಮಹಿಳೆಯರ ಖತರ್ನಾಕ್ ಗ್ಯಾಂಗ್ ಬೆಂಗಳೂರಿನ ಪ್ರತಿಷ್ಠಿತ ಸೀರೆ ಅಂಗಡಿಗಳಲ್ಲಿ ಭಾರಿ ಬೆಲೆಬಾಳುವ ಸೀರೆಗಳನ್ನು ಕಡಿಯುತ್ತಿದ್ದರು. ಪೊನ್ನೂರು ಮಲ್ಲಿ , ವೆಂಕಟೇಶ್ವರಮ್ಮ , ಮಾಧುಗನಿ ಜಾನಕಿ ಹಾಗೂ ಮೇಧ ರಜನಿ ಬಂಧಿತ ಕಿಲಾಡಿ ಲೇಡಿಸ್.

ಶ್ರೀಮಂತ ಮಹಿಳೆಯರಂತೆ ಬಿಲ್ಡಪ್ ಕೊಡುತ್ತ ಸೀರೆ ಅಂಗಡಿಗಳಿಗೆ ಎಂಟ್ರಿ ಕೊಡುತ್ತಿದ್ದ ಆಂಧ್ರಪ್ರದೇಶ ಮೂಲದ ಈ ಗ್ಯಾಂಗ್ ಚಿನ್ಮಯ್ ಹಾಗೂ ಮುಗ್ಧ ಸೀರೆ ಅಂಗಡಿಗಳಲ್ಲಿ ಗಮನ ಬೇರೆಡೆ ಸೆಳೆದು ಸೀರೆ ಕೈಚಳಕ ತೋರಿದ್ದರು.

ಲಕ್ಷಗಟ್ಟಲೆ ಬೆಲೆಬಾಳುವ ಸೀರೆಗಳನ್ನೇ ಆಯ್ಕೆ ಮಾಡಿಒಳ್ಳುತ್ತಿದ್ದ ಇವರು ಪುಟ್ಟ ಸೀರೆಗಳನ್ನ ಟಚ್ ಕೂಡ ಮಾಡುತ್ತಿರಲಿಲ್ಲ. ಬಂಧಿತರಿಂದ ಬರೊಬ್ಬರಿ 17.5 ಲಕ್ಷ ಮೌಲ್ಯದ 38 ಸೀರೆಗಳನ್ನ ಪೊಲೀಸರು ವಶಕ್ಕೆ ಪಡೆಯಿದ್ದಾರೆ.

Share with Friends
author avatar
News Desk