
ಹಾಲಿನ ದರ ಹೆಚ್ಚಳಕ್ಕಾಗಿ ರೈತರ ಪ್ರತಿಭಟನೆ ..
ಕೋಲಾರ ಆ.19 : ಕೋಲಾರ ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಹಾಲಿನ ಸಂಪರ್ಕ ಹೆಚ್ಚಾಗಿ ದೊರೆಯೊಯುತ್ತಿಲ್ಲ ಎಂದು ಆಗ್ರಹಿಸಿ ಪ್ರತಿಭಟನೆ ಮಾಡಿದ್ದಾರೆ .ಮತ್ತು ಈ ವಿಚಾರವಾಗಿ ಸಾವಿರಾರು ರೈತರು ಸೇರಿದ್ದಾರೆ.
ಕೋಲಾರ ಜಿಲ್ಲೆಯ ಜನ ಹಾಲಿನ ದರದ ಹಿನ್ನೆಲೆ ಯಲ್ಲಿ ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ ಎಂದು ಹೇಳಲಾಗಿದೆ .ರೈತರಿಗೆ ಹಾಲಿಗೆ ಸಮರ್ಪಕ ದರ ಹೆಚ್ಚಾಗಿ ದೊರೆಯುತ್ತಿಲ್ಲ ಎಂದು ತಿಳಿದುಬಂದಿದೆ . ಮುಖ್ಯಮಂತ್ರಿಗಳು ರೈತರ ಮಗನಾಗಿರುವುದರಿಂದ ನಮಗೆ ನಮ್ಮ ಎಲ್ಲಾ ಬೇಡಿಕೆಗಳು ಈಡೇರಬೇಕು ಅಲ್ಲಿಯವರೆಗೂ ಪ್ರತಿಭಟನೆ ಬಿಡುವುದಿಲ್ಲಎಂದು ಆಗ್ರಹಿಸಿದ್ದಾರೆ .
ಸುತ್ತಮುತ್ತಲಿನ ಎಲ್ಲಾ ತಾಲ್ಲೂಕು ಹಾಲು ಉತ್ಪಾದಕರು ಇಲ್ಲಿ ಸೇರಿದ್ದೇವೆ .ಮತ್ತು ಜನರ ಬೇಡಿಕೆ ಏನೆಂದರೆ ಪ್ರತಿ ಲೀಟರ್ ಗೆ 10 ರೂ ಹೆಚ್ಚು ಮಾಡಬೇಕು ಲೀಟರ್ ಗೆ ಈಗ 5 ರೂ ಪ್ರೋತ್ಸಾಹ ದನ ಕೊಡ್ತಿದ್ದಾರೆ ಅದನ್ನು 7 ರೂ ಗೆ ಹೆಚ್ಚಿಸಬೇಕು ಹಾಗು ಆಹಾರ ಸಬ್ಸಿಡಿ ನೀಡಬೇಕು ಎಂದು ಆಗ್ರಹಿಸಿದ್ದಾರೆ .ನಂತರ ಇತರೆ ರಾಜ್ಯಗಳಲ್ಲಿ ಹಾಲಿಗೆ ಹೆಚ್ಚು ದರ ಕೊಡುತ್ತಿದ್ದಾರೆ .
ಹಾಲಿನ ದರ ಹೆಚ್ಚಿಸಬೇಕು ಎಂಬ ಹಿನ್ನೆಲೆಯಲ್ಲಿ ಕರ್ನಾಟಕದ ಮುಖ್ಯ ಮಂತ್ರಿಗಳಿಗೆ ಜಿಲ್ಲಾಡಳಿತದ ಮುಖಾಂತರ ಎಲ್ಲ ತಾಲ್ಲೂಕುಗಳಿಂದ ಜನ ಸೇರಿ ಮನವಿಯನ್ನು ಮಾಡಿದ್ದಾರೆ .ಸಮರ್ಪಕ ವಾದ ದರ ದೊರೆಯುವಂತೆ ಆಗ್ರಹಿಸಿದ್ದಾರೆ .
