
ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಸರಿಯಾದ ಬೆಳೆ ಇಲ್ಲದೆ ಕಂಗಾಲಾಗಿರುವ ರೈತರು.
ರಾಯಚೂರು : ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ಲಾಳೆ ಮಶಾಕ್ ದರ್ಗಾಕ್ಕೆ ವಿತಾಳ ಪಟ್ಟಣದ ರೈತರು ಕಾಲ್ನಡಿಗೆಯಲ್ಲಿ ತೆರಳಿ ಹೊಳೆ ನೀರನ್ನು ತಂದು ಭಕ್ತಿ ಭಾವದಿಂದ ಮಳೆಗಾಗಿ ಪ್ರಾರ್ಥಿಸಿ ಲಾಳೆ ಮಾಶಾಕ್ ಹಾಗೂ ಪಟ್ಟಣದಲ್ಲಿರುವ ದೇವರಿಗೆ ಜಲಾಭಿಷೇಕವನ್ನು ಮಾಡಿ ಮಳೆಗಾಗಿ ಪ್ರಾರ್ಥಿಸಿ , ದೇವರ ಮೊರೆ ಹೋಗಿದ್ದಾರೆ.
ಸಂಕಷ್ಟದಲ್ಲಿರುವ ರೈತ ಮಳೆಗಾಗಿ ಮಾಡಿದ ಪ್ರಾರ್ಥನೆ ದೇವರಿಗೆ ಮೆಚ್ಚಿ ಮಳೆ ಬರುವಂತಾಗಲಿ ಕಲ್ಮಠದ ಅಭಿನವಶ್ರೀ ಸಿದ್ದಲಿಂಗ ಮಹಾಸ್ವಾಮಿ.ಭಕ್ತಿ ಭಾವದಿಂದ ಮಳೆಗಾಗಿ ಪ್ರಾರ್ಥಿಸಿ , ಹೊಳೆ ನೀರನ್ನು ತಂದು ಜಲಾಭಿಷೇಕ ಮಾಡುವ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಂ ಎನ್ನದೆ ಯಾವುದೇ ಜಾತಿ ಭೇದಭಾವ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಶ್ರೀ ಕಲ್ಮಠದ ಅಭಿನವ ಸಿದ್ಧಲಿಂಗ ಸ್ವಾಮಿಗಳು ಸಮ್ಮುಖದಲ್ಲಿ ಪೂಜೆ ಜಲಾಭಿಷೇಕ ಕಾರ್ಯಕ್ರಮ ನಡೆದಿದ್ದು ವಿಶೇಷವಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು ದೇಶದ ಬೆನ್ನೆಲುಬು ರೈತ ದೇಶಕ್ಕೆ ಅನ್ನ ನೀಡುವ ರೈತ ಇವತ್ತಿನ ದಿನ ಸಂಕಷ್ಟದಲ್ಲಿದ್ದಾನೆ.
ಕವಿತಾಳ ಪಟ್ಟಣದಲ್ಲಿ ಇವತ್ತಿನ ದಿನ ವಿಶೇಷವಾದ ದಿನ ಯಾವುದೇ ಜಾತಿ ಭೇದಭಾವವಿಲ್ಲದೆ ಎಲ್ಲರೂ ಸೇರಿ ಆ ದೇವರಿಗೆ ಜಲಾಭಿಷೇಕ ಭಕ್ತಿ ಭಾವದಿಂದ ಮಾಡಿದ ಈ ಕಾರ್ಯ ದೇವರಿಗೆ ಮೆಚ್ಚಿ ಆದಷ್ಟು ಬೇಗನೆ ದೇವರು ಮಳೆಯನ್ನು ಕೊಟ್ಟು ರೈತನ ಬಾಳು ಬೆಳಗಲಿ ಎಂದು ಆಶೀರ್ವದಿಸಿ ಮಾತನಾಡಿದರು.
ಮಳೆಗಾಗಿ ಪ್ರಾರ್ಥಿಸಿ ಭಕ್ತಿ ಭಾವದಿಂದ ಕಾಲ್ನಡಿಗೆಯಿಂದ ಹೊಳೆಯಿಂದ ನೀರನ್ನು ತಂದ ಸಮೀರ್, ಹುಸೇನ್, ಬಾಬಾ,ವಾಜಿದ್, ಶಬ್ಬೀರ್, ಅಕ್ಬರ್, ವಾಜು, ರಜಬ್, ಇಸಾಕ್, ಯುವಕರನ್ನು ಡೊಳ್ಳು ವಾದ್ಯಗಳ ಮೂಲಕ ಮೆರವಣಿಗೆ ಮೂಲಕ ಕವಿತಾಳ ಪಟ್ಟಣದ ಹಿಂದೂ ಮುಸ್ಲಿಂ ಸಾರ್ವಜನಿಕರೆಲ್ಲರೂ ಸೇರಿ ಕರೆತಂದು ಜಲಾಭಿಷೇಕದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ಆ ದೇವರ ಕೃಪೆಗೆ ಪಾತ್ರರಾದರು.
