LatestTop Storiesಸ್ಯಾಂಡಲ್​ವುಡ್-Sandalwood

ದುನಿಯಾ ವಿಜಯ್ ‘ಸಿಟಿ ಲೈಟ್ಸ್’ ಚಿತ್ರದ ‘ಕಂದಮ್ಮ’ ಹಾಡು ಬಿಡುಗಡೆ..!

ಬೆಂಗಳೂರು : ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್‌ ಅವರ ನಿರ್ದೇಶನದ ಬಹುನಿರೀಕ್ಷಿತ ‘ಸಿಟಿ ಲೈಟ್ಸ್’ ಸಿನಿಮಾದಿಂದ ಹೊಸ ಮಧುರವಾದ ಹಾಡೊಂದು ರಿಲೀಸ್‌ ಆಗಿದ್ದು ಸಂಗೀತ ಪ್ರಿಯರ ಮನ ಗೆಲ್ಲುತ್ತಿದೆ,ಚರಣ್ ರಾಜ್ ಮ್ಯೂಸಿಕ್ ಮೆಚ್ಚುಗೆ ಪಡೆದಿದೆ.

​ಚಿತ್ರತಂಡ ಸದ್ಯ ‘ಕಂದಮ್ಮ’ ಎಂಬ ಪ್ರೇಮಗೀತೆಯನ್ನು ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಪ್ರಸಿದ್ಧ ಗಾಯಕ ಸಂಜಿತ್ ಹೆಗಡೆ ಅವರ ಕಂಠಸಿರಿಯಲ್ಲಿ ಅತ್ಯಂತ ಮಧುರವಾದ ಈ ಹಾಡು ಮೂಡಿಬಂದಿದ್ದು, ಕೇಳುಗರನ್ನು ಸಮ್ಮೋಹನಗೊಳಿಸುತ್ತಿದೆ.

ದುನಿಯಾ ವಿಜಯ್ ಸಿಟಿ ಲೈಟ್ಸ್ ಚಿತ್ರದ ಕಂದಮ್ಮ ಹಾಡು ಬಿಡುಗಡೆ

ಹಳ್ಳಿಯಿಂದ ನಗರಕ್ಕೆ ವಲಸೆ ಬರುವ ಕಥಾ ನಾಯಕ ಹಾಗೂ ನಾಯಕಿ ಎದುರಿಸುವ ಸವಾಲುಗಳೇ ಚಿತ್ರದ ಕಥೆ. ‘ಸಿಟಿ ಲೈಟ್ಸ್’ ಚಿತ್ರಕ್ಕೆ ಶಿವಸೇನಾ ಅವರ ಛಾಯಾಗ್ರಹಣ ಇದೆ, ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ದೀಪು ಎಸ್. ಕುಮಾರ್ ಎಡಿಟಿಂಗ್ ಚಿತ್ರಕ್ಕಿದೆ. ದುನಿಯಾ ಟಾಕೀಸ್ ಮತ್ತು ಯಂತ್ರೋದ್ದಾರಕ ಬ್ಯಾನರ್ ಅಡಿಯಲ್ಲಿ ವಿಜಯ್ ಕುಮಾರ್ ಹಾಗೂ ವಿಕ್ರಂ ಆರ್ಯ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಕಂದಮ್ಮ’ ವಿಡಿಯೋ ಸಾಂಗ್ ಸಖತ್ ವೈರಲ್ ಆಗಿದ್ದು, ವಿನಯ್ ರಾಜ್‌ಕುಮಾರ್ ಹಾಗೂ ಮೋನಿಷಾ ಜೋಡಿ ಗಮನ ಸೆಳೆದಿದೆ.

ದುನಿಯಾ ವಿಜಯ್ ಅವರ ನಿರ್ದೇಶನದ ಸಾಹಸಕ್ಕೆ ಈ ರೋಮ್ಯಾಂಟಿಕ್ ಸಾಂಗ್ ವಿಶೇಷ ಮೆರುಗು ನೀಡಿದ್ದು, ಹಾಡಿನ ಸಾಲುಗಳು ಮತ್ತು ಸಂಗೀತ ಪ್ರೇಮಿಗಳನ್ನು ಸೆಳೆಯುತ್ತಿವೆ. ಬಿಡುಗಡೆಯಾದ ಅಲ್ಪ ಸಮಯದಲ್ಲೇ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

Share with Friends
author avatar
Digital Desk