Latestಕೃಷಿ-Agricultureಬೆಂಗಳೂರು-Bengaluruರಾಜ್ಯ-Karnataka

ಬರದಿಂದ ಏರಿಕೆಯಾದ ತರಕಾರಿ – ಸೆಂಚುರಿ, ಡಂಬಲ್ ಸೆಂಚುರಿ ದಾಟಿದ ಬೆಳೆ

ಬೆಂಗಳೂರು: ರಾಜ್ಯದಲ್ಲಿ ಬಿಸಿಲ ಬೇಗೆಯ ಪರಿಣಾಮ ಜೊತೆಗೆ ಸರಿಯಾದ ಮಳೆಯಾದೇ ಕೆಲ ತರಕಾರಿಗಳ ದರ ಗಗನಕ್ಕೇರಿದೆ. ಸದ್ಯ ತರಕಾರಿಗಳ (Vegetables) ಬೆಲೆ ಏರಿಕೆಯಿಂದ ಗ್ರಾಹಕರಿಗೆ ಬಿಸಿ ಮುಟ್ಟಿದಂತಾಗಿದೆ .

ಕಳೆದ ಒಂದು ವಾರದಿಂದ ಬೀನ್ಸ್ (Beans) ಕೆಜಿಗೆ 170 ರಿಂದ 200 ರೂ. ಗಡಿ ದಾಟಿದೆ. ಇತ್ತ ಕ್ಯಾರೆಟ್ (Carrot) ಸಹ ಸೆಂಚುರಿ ದಾಟಿದೆ. ಸದ್ಯ ಮೆಣಸಿನಕಾಯಿ (Chilli) ದರ ಕೂಡ ಏರಿಕೆಯಾಗಿದೆ. ಇದನ್ನೂ ಓದಿ: ಉಸಿರು ಚೆಲ್ಲಿದ ಕಂಚಿನಕಂಠ ಸುಬ್ರಹ್ಮಣ್ಯ ಧಾರೇಶ್ವರ

https://youtu.be/vuDutVu_QaI?si=g2w7-Bmn7g_xcvmI

ನೆರೆಯ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಂತರ, ಕೋಲಾರ ಜೆಲ್ಲೆಗಳಿಂದ ನಗರಕ್ಕೆ ಹೆಚ್ಚು ಬೀನ್ಸ್ ಮತ್ತು ಮೆಣಸಿನಕಾಯಿ ಪೂರೈಕೆಯಾಗುತ್ತದೆ. ಸದ್ಯ ಈ ಭಾಗದಲ್ಲೆಲ್ಲ ತಾಪಮಾನ ಏರಿಕೆಯಾಗಿದ್ದು, ಭಾರಿ ಪ್ರಮಾಣದಲ್ಲಿ ಇಳುವರು ಕುಸಿತ ಕಂಡಿದೆ. ಇದನ್ನೂ ಓದಿ: ಬಿಹಾರದಲ್ಲಿ ಗುಂಡಿಕ್ಕಿ ಜೆಡಿಯು ನಾಯಕನ ಹತ್ಯೆ

ಕೇವಲ ತರಕಾರಿ ಮಾತ್ರವಲ್ಲದೇ ಹಣ್ಣುಗಳ ದರದಲ್ಲೂ ಕೂಡ ಏರಿಕೆ ಕಂಡಿದೆ. ಸದಯದ ಪರಿಸ್ಥಿಯಲ್ಲಿ ಜೂನ್ ಅಂತ್ಯದವರೆಗೂ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ. ಜೂನ್‌ನಲ್ಲಿ ಈ ಬಾರಿ ಉತ್ತಮ ಮಳೆಯಾದರೆ ದರ ಇಳಿಕೆಯಾಗುವ ಸಾಧ್ಯತೆ ಇದೆ ಎಂಬುದು ವ್ಯಾಪಾರಿಗಲ ಮಾತು . ಇದನ್ನೂ ಓದಿ: ನಟಿ ಅಮೂಲ್ಯ ಮಾವ, ಬಿಜೆಪಿ ಮುಖಂಡ ಮನೆ ಮೇಲೆ ಚುನಾವಣಾಧಿಕಾರಿಗಳ ದಾಳಿ

https://youtu.be/CIbkq-93c6o?si=ZVlPl8_rhfLstTew
Share with Friends
author avatar
News Desk