BlogEntertainmentLatestಬಾಲಿವುಡ್​ - Bollywood

ಹೆಣ್ಣು ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮದುವೆಯಾದ 5 ವರ್ಷದ ಬಳಿಕ ಮುದ್ದಾದ ಮಗುವಿಗೆ ಜನ್ಮ ನೀಡಿದ್ದು, ಬಾಲಿವುಡ್ ನಟ ರಣವೀರ್ ಸಿಂಗ್ ತಂದೆಯಾಗುವ ಖುಷಿಯಲ್ಲಿ ಇದ್ದಾರೆ. ಮುಂಬೈನ ಪ್ರತಿಷ್ಠಿತ ರಿಲಯನ್ಸ್ ಆಸ್ಪತ್ರೆಯಲ್ಲಿ ದೀಪಿಕಾ ಪಡುಕೋಣೆ ಮಗುವಿಗೆ ಜನ್ಮ ನೀಡಿದ್ದು,ಸದ್ಯಕ್ಕೆ ತಾಯಿ ಮಗು ಆರೋಗ್ಯವಾಗಿದ್ದಾರೆ.

ಫೆಬ್ರವರಿಯಲ್ಲಿ ದೀಪಿಕಾ ತಾವು ಗರ್ಭಿಣಿಯೆಂದು ಘೋಷಿಸಿದರು. ಸೆಪ್ಟೆಂಬರ್ 28ರಂದು ದೀಪಿಕಾಗೆ ಡೆಲಿವರಿ ಡೇಟ್ ಇತ್ತು. ಆದರೆ ನಿಗದಿಗಿಂತ 20 ದಿನ ಮೊದಲೇ ದೀಪಿಕಾ ಜನ್ಮ ನೀಡಿದ್ದಾರೆ.

👉 Please Follow our WhatsApp Channel for BREAKING News

ಈ ಶುಭ ಸುದ್ದಿ ಹೊರಬೀಳುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಮಹಾಪೂರವೇ ಹರಿದುಬರುತ್ತಿದೆ. ನಿನ್ನೆ ಸಂಜೆ ದೀಪಿಕಾ ಮತ್ತು ರಣವೀರ್ ಮುಂಬೈನ HN ರಿಲಯನ್ಸ್ ಆಸ್ಪತ್ರೆಗೆ ಬಂದಿದ್ದರು. ಇಂದು ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಗೌರಿ-ಗಣೇಶ ಹಬ್ಬದ ಟೈಮ್ ನಲ್ಲಿ ದೀಪಿಕಾ ಮನೆಗೆ ಗೌರಿಯ ಆಗಮನವಾಗಿದೆ.

ಹುಟ್ಟತ್ತಲೇ ಕೋಟಿ ಕೋಟಿ ಒಡತಿಯಾದ ಕಂದ :
ಹುಟ್ಟತ್ತಲೇ ಈ ಕಂದ ಕೋಟಿ ಕೋಟಿ ಒಡತಿಯಾಗಿದೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಒಟ್ಟು ಆಸ್ತಿ 745 ಕೋಟಿ ರೂ ಇದೆ. ಈಗ ತಾನೇ ಜಗತ್ತಿಗೆ ಬಂದಿರುವ ಮುದ್ದು ಮಗಳು ಕೋಟಿಗಳ ಒಡತಿಯಾಗಿದ್ದಾಳೆ. ಮಗಳಿಗಾಗಿಯೇ ಇತ್ತೀಚಿಗಷ್ಟೇ ದೀಪಿಕಾ ದಂಪತಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ರು. ಮನೆಯ ನಿರ್ಮಾಣ ಹಾಗೂ ಇಂಟೀರಿಯರ್ ಕೆಲಸ ಕೂಡ ಪೂರ್ಣಗೊಂಡಿದೆ.

Share with Friends
author avatar
News Desk