LatestTop Storiesಗದಗ-Gadag

ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ – 3 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ವಶ

ಗದಗ: ಗದಗ ಜಿಲ್ಲಾ ಪೊಲೀಸರು ಕಳೆದ ಒಂದು ವರ್ಷದಲ್ಲಿ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಬರೋಬ್ಬರಿ 3 ಕೋಟಿಗೂ ಅಧಿಕ ಮೊತ್ತದ ವಸ್ತುಗಳನ್ನುವಶಕ್ಕೆ ಪಡೆದಿದ್ದಾರೆ.ಒಂದು ವರ್ಷದ ಕಾರ್ಯಾಚರಣೆ – 95 ಆರೋಪಿಗಳ ಬಂಧನ..

ಆಗಸ್ಟ್ 1, 2025 ರಿಂದ ಜುಲೈ 31, 2026 ರವರೆಗೆ ನಡೆದ ಈ ವಿಶೇಷ ಕಾರ್ಯಾಚರಣೆಗೆ ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ್ ಪಾಟೀಲ್ ಮತ್ತು ಜಿಲ್ಲಾ ಎಸ್ಪಿ ರೋಹನ್ ಜಗದೀಶ್ನೇತೃತ್ವ ವಹಿಸಿದ್ದರು.ಈ ಅವಧಿಯಲ್ಲಿ ಜಿಲ್ಲಾ ಪೊಲೀಸರು 68 ಕಳ್ಳತನ ಪ್ರಕರಣಗಳನ್ನು ಭೇದಿಸಿ 95 ಆರೋಪಿಗಳನ್ನು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ 3 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ವಶ

ವಶಕ್ಕೆ ಪಡೆದ ವಸ್ತುಗಳ ವಿವರ

  1. ಬಂಗಾರದ ಆಭರಣ: ಅಂದಾಜು 1,65,63,977 ರೂಪಾಯಿ ಮೌಲ್ಯದ ಚಿನ್ನಾಭರಣಗಳು ವಶ
  2. ಬೆಳ್ಳಿ ಆಭರಣ: ಸುಮಾರು 60,52,877 ರೂಪಾಯಿಮೌಲ್ಯದ ಬೆಳ್ಳಿ ವಸ್ತುಗಳು ಜಪ್ತಿ
  3. ನಗದು: 7,98,615 ರೂಪಾಯಿ ನಗದು ವಶಕ್ಕೆ
  4. ವಾಹನಗಳು: ಅಂತರ್ ಜಿಲ್ಲಾ ವಾಹನ ಸೇರಿದಂತೆ ಒಟ್ಟು 40 ವಾಹನಗಳು ಜಪ್ತಿ
  5. ಮೊಬೈಲ್: 97,19,578 ರೂಪಾಯಿಮೌಲ್ಯದ 965 ಮೊಬೈಲ್ ರಿಕವರಿ


ಈ ಜೊತೆಗೆ 32 ಮೋಸ, ವಂಚನೆ ಪ್ರಕರಣಗಳಲ್ಲಿ 35 ಆರೋಪಿಗಳನ್ನುಬಂಧಿಸಲಾಗಿದೆ. ವಂಚನೆ ಪ್ರಕರಣದಲ್ಲಿ 37,13,942 ರೂಪಾಯಿವಶಕ್ಕೆ ಪಡೆಯಲಾಗಿದೆ.ಒಟ್ಟಾರೆಯಾಗಿ ಎಲ್ಲಾ ಪ್ರಕರಣಗಳಲ್ಲಿ ಸೇರಿ3 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಜಿಲ್ಲಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸರ ಈ ಕಾರ್ಯಾಚರಣೆಗೆ ರಾಜ್ಯದಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕಳುವಾದ ವಸ್ತುಗಳನ್ನು ನ್ಯಾಯಾಲಯದ ಅನುಮತಿಯೊಂದಿಗೆ ಸಂತ್ರಸ್ತರಿಗೆ ಹಿಂತಿರುಗಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಎಸ್ಪಿ ರೋಹನ್ ಜಗದೀಶ್ ತಿಳಿಸಿದರು.

Share with Friends
author avatar
Digital Desk