Health | ಆರೋಗ್ಯ

Cancer ಇಂದ ದೂರ ಇರಬೇಕಾ? ಹಾಗಾದ್ರೆ ಈ ವ್ಯಾಯಾಮಗಳನ್ನು ಮಾಡಿ ಸಾಕು

ಬೆಳಗ್ಗೆ ಹಾಸಿಗೆಯಿಂದ ಬೇಗನೆ ಎದ್ದು ಹೊರಗೆ ಹೋಗಿ ವ್ಯಾಯಾಮವನ್ನು ಮಾಡಿದರೆ, ಇಡೀ ದಿನ ದೇಹ (Body) ಮತ್ತು ಮನಸ್ಸು ತುಂಬಾನೇ ಉತ್ಸಾಹದಿಂದ ಕೂಡಿರುತ್ತದೆ ಅಂತ ಅನೇಕರು ಹೇಳುವುದನ್ನು ನಾವು ಕೇಳಿರುತ್ತೇವೆ. ಹೌದು, ಇದು ನೂರಕ್ಕೆ ನೂರು ಸತ್ಯವಾದ ಮಾತು. ಪ್ರತಿದಿನ ಬೆಳಗ್ಗೆ ಒಂದು ಅರ್ಧ ಗಂಟೆ ಜೋರಾಗಿ ಎಂದರೆ ಬಿರುಸಿನಿಂದ ನಡೆದರೂ ಸಾಕು, ದೇಹ ಮತ್ತು ಮನಸ್ಸು ತುಂಬಾನೇ ಚುರುಕಾಗಿರುತ್ತದೆ ಮತ್ತು ಇದು ಆರೋಗ್ಯಕ್ಕೂ ಸಹ ಒಳ್ಳೆಯದು. ಅಷ್ಟೇ ಅಲ್ಲದೆ ಈ ರೀತಿಯ ವ್ಯಾಯಾಮಗಳು (Exercise) ಅನೇಕ ರೋಗಗಳನ್ನು ಸಹ ತಡೆಗಟ್ಟುತ್ತದೆ ಎಂದು ವೈದ್ಯರು ಸಹ ಹೇಳುತ್ತಾರೆ.

ಜಾಹೀರಾತು

ಒಂದೇ ಮಾತಿನಲ್ಲಿ ಹೇಳುವುದಾದರೆ ಬೆಳಗ್ಗೆ ಎದ್ದ ತಕ್ಷಣ ಏನಾದರೊಂದು ವ್ಯಾಯಾಮದಲ್ಲಿ ತೊಡಗಿಸಿಕೊಂಡು ಮೈಯಿಂದ ಬೆವರು ಸುರಿಸಿದರೆ ಮಾತ್ರ ಆ ದಿನ ನಾವು ದೈಹಿಕವಾಗಿ ತುಂಬಾ ಸಕ್ರಿಯರಾಗಿರುತ್ತೇವೆ, ಇಲ್ಲದೆ ಹೋದರೆ ಆ ಜಡ ಜೀವನಶೈಲಿ ನಮ್ಮನ್ನು ದಿನವಿಡೀ ಜಡತ್ವವಾಗಿರಿಸುತ್ತದೆ.

ವ್ಯಾಯಾಮ ಅನೇಕ ರೋಗಗಳನ್ನು ಕಡಿಮೆ ಮಾಡುತ್ತದೆ

ತುಂಬಾ ಹೊತ್ತಿನ ವ್ಯಾಯಾಮ ಅಥವಾ ವರ್ಕ್‌ಔಟ್ ಮಾಡಲು ಸಾಧ್ಯವಾಗದೆ ಹೋದರೂ ಸಹ ಮಿನಿ ವರ್ಕ್‌ಔಟ್ ಗಳಾಗಿದ್ದರೂ ಸಹ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಕ್ರಿಯವಾಗಿರಲು ಸಹಾಯ ಮಾಡುತ್ತದೆ ಮತ್ತು ಜಡ ಜೀವನಶೈಲಿಯಿಂದ ಪ್ರಚೋದಿಸುವ ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

“2022 ರಲ್ಲಿ ಭಾರತದಲ್ಲಿ ವರದಿಯಾದ 14,61,427 ಹೊಸ ಕ್ಯಾನ್ಸರ್ ಪ್ರಕರಣಗಳ ಹಿನ್ನೆಲೆಯಲ್ಲಿ, ಪ್ರತಿದಿನ ಯಾವುದಾದರೊಂದು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಲ್ಲಿ ಈ ಅಪಾಯ ಕಡಿಮೆಯಾಗಿರುವುದು ಕಂಡು ಬಂದಿದೆಯಂತೆ.

ಹಲವಾರು ವ್ಯಾಯಾಮಗಳನ್ನು ಸಂಯೋಜಿಸುವುದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಲ್ಲಿ ಪ್ರಬಲವಾದ ಸಾಧನವಾಗಿದೆ” ಎಂದು ವೃತ್ತಿಪರ ಬಾಡಿಬಿಲ್ಡರ್ ಮತ್ತು ಜಿಮ್ ತರಬೇತುದಾರ ಚಿತರೇಶ್ ನಟೇಶನ್ ಹೇಳುತ್ತಾರೆ.

ಯಾವೆಲ್ಲಾ ವ್ಯಾಯಾಮಗಳು ಆರೋಗ್ಯಕ್ಕೆ ಒಳ್ಳೆಯದು ನೋಡಿ..

ಬಿರುಸಿನ ನಡಿಗೆ: ಬಿರುಸಿನ ನಡಿಗೆ ಸರಳವಾದ ಆದರೆ ಪ್ರಬಲವಾದ ಏರೋಬಿಕ್ ಚಟುವಟಿಕೆಯಾಗಿದ್ದು, ವೇಗದ ಕ್ರಮೇಣ ಹೆಚ್ಚಳವನ್ನು ಪ್ರೇರೇಪಿಸುತ್ತದೆ, ಪರಿಣಾಮಕಾರಿಯಾಗಿ ಹೃದಯ ಬಡಿತ ಮತ್ತು ಉಸಿರಾಟವನ್ನು ಸಹ ಇದು ಹೆಚ್ಚಿಸುತ್ತದೆ.

ಜಾಹೀರಾತು

ಸೈಕ್ಲಿಂಗ್ ಮಾಡುವುದು: ಸ್ಥಾಯಿ ಬೈಕ್‌ನಲ್ಲಿ ಅಥವಾ ತೆರೆದ ಗಾಳಿಯಲ್ಲಿ, ಸೈಕ್ಲಿಂಗ್ ಹೋಗುವುದು ಅತ್ಯುತ್ತಮವಾದ ಹೃದಯ ರಕ್ತನಾಳದ ತಾಲೀಮು ನೀಡುತ್ತದೆ. 20-30 ನಿಮಿಷಗಳ ಅವಧಿಯ ಗುರಿಯನ್ನು, ವಾರಕ್ಕೆ ಹಲವಾರು ಬಾರಿ ಮಧ್ಯಮದಿಂದ ಹೆಚ್ಚಿನ ತೀವ್ರತೆಯೊಂದಿಗೆ ಮಾಡಿದರೆ ಆರೋಗ್ಯ ತುಂಬಾನೇ ಚೆನ್ನಾಗಿರುತ್ತದೆ.

ಸಾಮರ್ಥ್ಯ ತರಬೇತಿ ವ್ಯಾಯಾಮಗಳು: ಏರೋಬಿಕ್ ಚಟುವಟಿಕೆಗಳಿಗೆ ಪೂರಕವಾಗಿ, ದೇಹದ ತೂಕದ ಸ್ಕ್ವಾಟ್‌ಗಳು ಮತ್ತು ಪುಷ್-ಅಪ್‌ಗಳಂತಹ ಶಕ್ತಿ ತರಬೇತಿ ವ್ಯಾಯಾಮಗಳು ಮಸ್ಕ್ಯುಲೋಸ್ಕೆಲಿಟಲ್ ವ್ಯವಸ್ಥೆಯನ್ನು ಬಲಪಡಿಸುತ್ತವೆ.

ಇದನ್ನೂ ಓದಿ:
ಇವೇ ನೋಡಿ ಕಡಿಮೆ ಸಕ್ಕರೆ ಪ್ರಮಾಣ ಹೊಂದಿರುವ ಡ್ರೈ ಫ್ರೂಟ್ಸ್​ಗಳು! ಶುಗರ್​ ಇರುವವರಿಗೆ ಬೆಸ್ಟ್​

ಜಾಹೀರಾತು

ದೇಹ ತೂಕದ ಸ್ಕ್ವಾಟ್‌ಗಳು ಕುಳಿತಿರುವ ಸ್ಥಾನದಿಂದ ಕೆಳಕ್ಕೆ ಇಳಿಯುವಿಕೆಯನ್ನು ಒಳಗೊಂಡಿರುತ್ತದೆ, ನಂತರ ನಿಂತಿರುವ ಸ್ಥಿತಿಗೆ ಮತ್ತೆ ಹಿಂತಿರುಗುತ್ತವೆ. ಪುಷ್-ಅಪ್‌ಗಳು ಸಹ ನಿಂತ ಸ್ಥಾನದಲ್ಲಿಯೇ ಮಾಡಲಾಗುತ್ತದೆ. ಇದರಲ್ಲಿ ದೇಹದ ಎದೆ, ಭುಜ ಮತ್ತು ತೋಳಿನ ಸ್ನಾಯುಗಳನ್ನು ತೊಡಗಿಸಿಕೊಳ್ಳುತ್ತೇವೆ.

ಯೋಗ: ಯೋಗದಲ್ಲಿ ಮುಖ್ಯವಾಗಿ ಕೆಳಮುಖ ನಾಯಿ ಮತ್ತು ಮಗುವಿನ ಭಂಗಿಯಂತಹ ಪರಿವರ್ತಕ ಭಂಗಿಗಳನ್ನು ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಸಾವಧಾನಿಕ ಉಸಿರಾಟವನ್ನು ಉತ್ತೇಜಿಸುವಾಗ ಮೊದಲನೆಯದು ದೇಹವನ್ನು ವಿಸ್ತರಿಸುತ್ತದೆ ಮತ್ತು ಬಲಪಡಿಸುತ್ತದೆ, ಆದರೆ ಎರಡನೆಯದು ವಿಶ್ರಾಂತಿ ಮತ್ತು ನಮ್ಯತೆಯನ್ನು ಉತ್ತೇಜಿಸುತ್ತದೆ.

ಜಾಹೀರಾತು

ಒಟ್ಟಾರೆಯಾಗಿ ಹೇಳುವುದಾದರೆ, ಈ ವ್ಯಾಯಾಮಗಳು ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಲು ಮಾತ್ರವಲ್ಲದೆ ಉರಿಯೂತವನ್ನು ನಿಯಂತ್ರಿಸುತ್ತದೆ ಮತ್ತು ಪ್ರತಿರಕ್ಷಣಾ ಕಾರ್ಯವನ್ನು ವರ್ಧಿಸುತ್ತದೆ, ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಇವುಗಳು.

ಡೈಮೆಂಡ್ ನೆಕ್ ಪೀಸ್​ ಧರಿಸಿ ಮಿಂಚಿದ ಶ್ರೀಲೀಲಾ!


ಡೈಮೆಂಡ್ ನೆಕ್ ಪೀಸ್​ ಧರಿಸಿ ಮಿಂಚಿದ ಶ್ರೀಲೀಲಾ!

ಯಾವುದೇ ವ್ಯಾಯಾಮವನ್ನು ಶುರು ಮಾಡುವ ಮುಂಚೆ ಆರೋಗ್ಯ ವೃತ್ತಿಪರರಿಂದ ಮಾರ್ಗದರ್ಶನವನ್ನು ಪಡೆಯುವುದು ಸೂಕ್ತವಾಗಿದೆ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Share with Friends
author avatar
News Desk