LatestTop Storiesರಾಜಕೀಯ | Politics

ಇಂದೇ ಸಂಪುಟ ಸಚಿವರ ಪಟ್ಟಿ ಫೈನಲ್..? ಶುಕ್ರವಾರ ಪ್ರಮಾಣವಚನ ಸಾಧ್ಯತೆ..?

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಇಂದು ಮಹತ್ವದ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ. ಇಂದು ಸಂಜೆ 8 ಗಂಟೆಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಹಾಗೂ ರಾಜ್ಯ ನಾಯಕರ ನಡುವೆ ಮಹತ್ವದ ಸಭೆ ನಡೆಯಲಿದ್ದು, ಸಚಿವ ಸಂಪುಟ ವಿಸ್ತರಣೆಯ ದಿನಾಂಕ ಮತ್ತು ಅಂತಿಮ ಪಟ್ಟಿಗೆ ಮುದ್ರೆ ಬೀಳುವ ನಿರೀಕ್ಷೆಯಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಲ್ಲಿಸಿರುವ ಪಟ್ಟಿಯ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಚರ್ಚೆ ನಡೆಸಲಿದ್ದಾರೆ.

ಆರಂಭದಲ್ಲಿ 16 ರಿಂದ 17 ಸಚಿವ ಸ್ಥಾನಗಳನ್ನು ಮಾತ್ರ ಭರ್ತಿ ಮಾಡುವ ಚಿಂತನೆ ನಡೆದಿತ್ತು. ಉಳಿದ 3 ರಿಂದ 4 ಸ್ಥಾನಗಳನ್ನು ಮುಂದಿನ ಹಂತಕ್ಕೆ ಕಾಯ್ದಿರಿಸುವ ಸಾಧ್ಯತೆಯೂ ಇತ್ತು. ಆದರೆ ಇದೀಗ ಎರಡನೇ ಹಂತದಲ್ಲೇ ಖಾಲಿ ಇರುವ ಎಲ್ಲಾ 20 ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಕುರಿತು ಹೈಕಮಾಂಡ್ ಒಲವು ತೋರಿದೆ ಎನ್ನಲಾಗಿದೆ.

ಜಿಲ್ಲಾವಾರು ಹಾಗೂ ಸಮುದಾಯವಾರು ಸಮತೋಲನ ಕಾಪಾಡುವ ಜೊತೆಗೆ ಯುವ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ಒಟ್ಟು 20 ಸಚಿವರ ಪೈಕಿ 13 ರಿಂದ 15 ಹೊಸಬರಿಗೆ ಅವಕಾಶ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.

ಸಂಭಾವ್ಯ ಸಚಿವರ ಪಟ್ಟಿ

ಮೂಲಗಳ ಪ್ರಕಾರ, ಸಚಿವ ಸಂಪುಟ ವಿಸ್ತರಣೆಯಲ್ಲಿ ಈ ಕೆಳಗಿನ ನಾಯಕರ ಹೆಸರುಗಳು ಚರ್ಚೆಯಲ್ಲಿವೆ. ಆದರೆ ಈ ಪಟ್ಟಿ ಅಧಿಕೃತವಾಗಿಲ್ಲ.

1.ಅಜಯ್ ಧರ್ಮಸಿಂಗ್ – ರಜಪೂತ್ (ಕಲ್ಯಾಣ ಕರ್ನಾಟಕ)
2.ಯಶವಂತರಾಯಗೌಡ ಪಾಟೀಲ್ – ಲಿಂಗಾಯತ (ವಿಜಯಪುರ)
3.ಶರತ್ ಬಚ್ಚೇಗೌಡ – ಒಕ್ಕಲಿಗ (ಬೆಂಗಳೂರು ಗ್ರಾಮಾಂತರ, ಯುವ ಕೋಟಾ)
4.ರಿಜ್ವಾನ್ ಅರ್ಷದ್ – ಮುಸ್ಲಿಂ (ಬೆಂಗಳೂರು, ಯುವ ಕೋಟಾ)
5.ಎ.ಎಸ್. ಪೊನ್ನಣ್ಣ – ಕೊಡವ (ಕೊಡಗು, ಯುವ ಕೋಟಾ)
6.ಎಸ್.ಎಸ್. ಮಲ್ಲಿಕಾರ್ಜುನ್ – ಲಿಂಗಾಯತ (ದಾವಣಗೆರೆ)
7.ಲಕ್ಷ್ಮಣ ಸವದಿ – ಗಾಣಿಗ ಲಿಂಗಾಯತ (ಬೆಳಗಾವಿ)
8.ರಘು ಮೂರ್ತಿ – ಎಸ್‌ಟಿ ವಾಲ್ಮೀಕಿ (ಚಿತ್ರದುರ್ಗ)
9.ಅನ್ನಪೂರ್ಣ ತುಕಾರಂ – ಎಸ್‌ಟಿ ವಾಲ್ಮೀಕಿ (ಬಳ್ಳಾರಿ, ಮಹಿಳಾ ಕೋಟಾ)
10.ಬಿ. ನಾಗೇಂದ್ರ – ಎಸ್‌ಟಿ ವಾಲ್ಮೀಕಿ (ಬಳ್ಳಾರಿ)
11.ತನ್ವೀರ್ ಸೇಠ್ – ಮುಸ್ಲಿಂ (ಮೈಸೂರು)
12.ಖನೀಜಾ ಫಾತೀಮಾ – ಮುಸ್ಲಿಂ (ಕಲಬುರಗಿ)
13.ವಿಜಯಾನಂದ ಕಾಶಪ್ಪನವರ್ – ಲಿಂಗಾಯತ (ಬಾಗಲಕೋಟೆ)
14.ಬಸವರಾಜ ರಾಯರೆಡ್ಡಿ – ಲಿಂಗಾಯತ (ಕೊಪ್ಪಳ)
15.ಪುಟ್ಟರಂಗ ಶೆಟ್ಟಿ – ಉಪ್ಪಾರ (ಚಾಮರಾಜನಗರ)
16.ರುದ್ರಪ್ಪ ಲಮಾಣಿ – ಲಂಬಾಣಿ (ಹಾವೇರಿ)
17.ಆನೇಕಲ್ ಶಿವಣ್ಣ – ಎಸ್‌ಸಿ (ಬೆಂಗಳೂರು)
18.ಚೆಲುವರಾಯಸ್ವಾಮಿ – ಒಕ್ಕಲಿಗ (ಮಂಡ್ಯ)
19.ಆರ್.ವಿ. ದೇಶಪಾಂಡೆ – ಬ್ರಾಹ್ಮಣ (ಉತ್ತರ ಕನ್ನಡ)
20.ಶಿವರಾಜ್ ತಂಗಡಗಿ – ಎಸ್‌ಸಿ ಭೋವಿ (ಕೊಪ್ಪಳ)
21.ಬಿ.ಕೆ. ಹರಿಪ್ರಸಾದ್ – ಈಡಿಗ (ಎಂಎಲ್‌ಸಿ ಕೋಟಾ)
22.ಸಂತೋಷ್ ಲಾಡ್ – ಮರಾಠ (ಧಾರವಾಡ)
23.ಲೇಔಟ್ ಕೃಷ್ಣಪ್ಪ – ಒಕ್ಕಲಿಗ (ಬೆಂಗಳೂರು)
24.ಷಡಕ್ಷರಿ – ಲಿಂಗಾಯತ (ತುಮಕೂರು)
25.ಶಿವಲಿಂಗೇಗೌಡ – ಒಕ್ಕಲಿಗ (ಹಾಸನ)
26.ಬಂಗಾರಪೇಟೆ ನಾರಾಯಣಸ್ವಾಮಿ – ಎಸ್‌ಸಿ (ಕೋಲಾರ)
27.ಜಮೀರ್ ಅಹ್ಮದ್ – ಮುಸ್ಲಿಂ (ಬೆಂಗಳೂರು)
28.ಲಕ್ಷ್ಮೀ ಹೆಬ್ಬಾಳ್ಕರ್ – ಲಿಂಗಾಯತ (ಬೆಳಗಾವಿ)
29.ಮಾಗಡಿ ಬಾಲಕೃಷ್ಣ – ಒಕ್ಕಲಿಗ (ರಾಮನಗರ)
30.ಶಿವಲಿಂಗೇಗೌಡ – ಒಕ್ಕಲಿಗ (ಹಾಸನ)

ಸಮುದಾಯವಾರು ಸಂಭಾವ್ಯ ಪ್ರಾತಿನಿಧ್ಯ

  • ಲಿಂಗಾಯತ – 7
  • ಒಕ್ಕಲಿಗ – 6
  • ಮುಸ್ಲಿಂ – 4
  • ಎಸ್‌ಸಿ – 3
  • ಎಸ್‌ಟಿ – 3
  • ರಜಪೂತ್ – 1
  • ಮರಾಠ – 1
  • ಕೊಡವ – 1
  • ಲಂಬಾಣಿ – 1
  • ಉಪ್ಪಾರ – 1
  • ಬ್ರಾಹ್ಮಣ – 1
  • ಈಡಿಗ – 1

ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡರೆ, ಶುಕ್ರವಾರ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಆದರೆ ಸಚಿವರ ಅಂತಿಮ ಪಟ್ಟಿ ಹಾಗೂ ಸಂಪುಟ ವಿಸ್ತರಣೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಥವಾ ರಾಜ್ಯ ಸರ್ಕಾರದಿಂದ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

Share with Friends
author avatar
News Desk