Crime NewsLatestಬೆಂಗಳೂರು-Bengaluruರಾಜ್ಯ-Karnataka

ಸಿಲಿಕಾನ್‌ ಸಿಟಿಯ ಮೂರು ಹೋಟೆಲ್‌ಗಳಿಗೆ ಬಾಂಬ್‌ ಬೆದರಿಕೆ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಬಾಂಬ್ ಬೆದರಿಕೆ ಇಮೇಲ್ ಮುಂದುವರಿದಿದ್ದು, ನಗರದ ಮೂರು ಹೋಟೆಲ್‌ (Hotel) ಗಳಿಗೆ ಮತ್ತೆ ಬಾಂಬ್ ಬೆದರಿಕೆ ( Bomb Threat) ಹಾಕಲಾಗಿದೆ.

ಎಲೆಕ್ಟ್ರಾನಿಕ್ ಸಿಟಿಯ (Electronic City) ಬಳಿಯ ಒಟೇರಾ ಹೋಟೆಲ್ ಸೇರಿ ಮೂರು ಹೋಟೆಲ್ ಗೆ ನಸುಕಿನ ಜಾವ 2 ಗಂಟೆ ಸುಮಾರಿಗೆ ಇಮೇಲ್‌ (Bomb Threat Email) ಬಂದಿದೆ. ಇಂದು ಬೆಳಗ್ಗೆ ಹೋಟೆಲ್ ಸಿಬ್ಬಂದಿ ಇಮೇಲ್ ಚೆಕ್ ಮಾಡುವಾಗ ಬೆಳಕಿಗೆ ಬಂದಿದೆ. ಕೂಡಲೇ ಗಾಬರಿಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪ್ರಜ್ವಲ್‌ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದತಿಗೆ ಮುಂದಾದ MEA

https://youtu.be/CQ5L1vxidf0?si=n1mNXK-SdOoFYZ-e

ಬಾಂಬ್ ಸ್ಕ್ವಾಡ್ ಮತ್ತು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ಒಟೇರಾ ಹೋಟೆಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಇದೊಂದು ಹುಸಿಬಾಂಬ್‌ ಬೆದರಿಕೆ ಅನ್ನೋದು ಬಯಲಾಗಿದೆ. ಇದನ್ನೂ ಓದಿ: ಒಂದೆಡೆ ಭವಾನಿ ರೇವಣ್ಣ SIT ನೋಟಿಸ್‌ಗೆ ಡೋಂಟ್‌ಕೇರ್‌, ಇನ್ನೊಂದೆಡೆ ಡ್ರೈವರ್ ನಾಪತ್ತೆ

https://youtu.be/SjqyqjIHY1A?si=rkGbjG4FxGfyKuoO

ಈ ಹಿಂದೆ ಹಲವು ಶಾಲೆಗಳಿಗೆ ಮತ್ತು ವಿಮಾನ ನಿಲ್ದಾಣಗಳಿಗೆ ಬಾಂಬ್‌ ಬೆದರಿಕೆಯ ಇಮೇಲ್‌ ಕಳುಹಿಸಲಾಗಿತ್ತು. ಇತ್ತ ಪೊಲೀಸರು ಹಾಗೂ ಬಾಂಬ್ ಸ್ಕ್ವಾಡ್ ಬಂದು ಪರಿಶೀಲನೆ ನಡೆಸಿದಾಗ ಹುಸಿಬಾಂಬ್‌ ಕರೆ ಎಂದು ಬಯಲಾಗಿತ್ತು. ಇದನ್ನೂ ಓದಿ: ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದತಿಗೆ ಪ್ರಧಾನಿಗೆ, ಸಿಎಂ 2ನೇ ಪತ್ರ

Share with Friends
author avatar
News Desk