Latestರಾಜ್ಯ-Karnatakaಶಿವಮೊಗ್ಗ-Shivamogga

ಅನ್ಯಕೋಮಿನ ಯುವತಿಯನ್ನ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಕ್ಕೆ ಹಲ್ಲೆ

ಶಿವಮೊಗ್ಗ: ಅನ್ಯಕೋಮಿನ ಯುವತಿಯನ್ನು ಬೈಕಿನಲ್ಲಿ (bike) ಕೂರಿಸಿಕೊಂಡು ಹೋಗಿದ್ದಕ್ಕೆ ಯುವಕನಿಗೆ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗದ (Shivamogga) ಸೀಗೆಟಹಳ್ಳಿ ಬಳಿ ಜೂನ್ 1 ರಂದು ಘಟನೆ ನಡೆದಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಂದನ್ ಹಲ್ಲೆಗೊಳಗಾದ ಯುವಕ. ನಂದನ್ ಹಾಗೂ ಅನ್ಯಕೋಮಿನ ಯುವತಿ ಒಂದೇ ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕೆಲಸದ ನಿಮಿತ್ತ ನಂದನ್ ಹಾಗೂ ಯುವತಿ ಬೈಕ್‌ನಲ್ಲಿ ಹೋಗುತ್ತಿದ್ದರು. ಬೈಕ್‌ನಲ್ಲಿ ಹೋಗುವುದನ್ನು ಗಮನಿಸಿದ ಅನ್ಯಕೋಮಿನ ಯುವಕರು ಬೈಕ್ ಅಡ್ಡಗಟ್ಟಿದ್ದಾರೆ. ಬಳಿಕ ನಂದನ್ ಅನ್ನು ಸ್ಥಳೀಯ ಟಿಂಬರ್ ಯಾರ್ಡ್ವೊಂದಕ್ಕೆ ಎಳೆದೊಯ್ದು ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ರೇವ್ ಪಾರ್ಟಿ ಪ್ರಕರಣ: ಡ್ರಗ್ಸ್ ಸಪ್ಲೈ ಮಾಡಿದ ಡಿಜೆ ಹಳ್ಳಿ ಪೆಡ್ಲರ್ ಅರೆಸ್ಟ್

https://youtu.be/yT8_wXTi9wQ?si=Gk5hofTSTrIi3vJx

ನಂದನ್ ಸ್ಥಳದಿಂದ ಓಡಿ ಬಂದಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಸಕ ಚನ್ನಬಸಪ್ಪ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಯುವಕನ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. . ಇದನ್ನೂ ಓದಿ: ಮಗಳ ಪ್ರೇಮ ವಿವಾಹಕ್ಕೆ ಮನನೊಂದು ತಾಯಿ ನೇಣಿಗೆ ಶರಣು

https://youtu.be/R9n1ZgRHKUA?si=9eUj0DWgTd1IK4mO

.

Share with Friends
author avatar
News Desk