Crime NewsLatestದಕ್ಷಿಣ ಕನ್ನಡ-Dakshina Kannadaರಾಜ್ಯ-Karnataka

ಡ್ರಗ್ಸ್ ಮಾರುತ್ತಿದ್ದವರ ಬಂಧನ; ಇಬ್ಬರ ಬಂಧನ

ಮಂಗಳೂರು: ಇತ್ತೀಚೆಗೆ ಮಾದಕವಸ್ತು ಪ್ರಕರಣಗಳು ಹೆಚ್ಚುತ್ತಿದ್ದು, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಉಳ್ಳಾಲ ತಾಲೂಕಿನ ಕೋಟೆಕಾರ್ ಬೀರಿ ಬಳಿ ಡ್ರಗ್ಸ್ ಮಾರುತ್ತಿದ್ದ ಇಬ್ಬರನ್ನು CCB ಪೊಲೀಸರು ಬಂಧಿಸಿದ್ದು, ನಗದು ಸೇರಿ 16 ಲಕ್ಷ ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.

ಉಳ್ಳಾಲದ ಮೊಹಮ್ಮದ್ ಇಶಾನ್, ಜಾಫರ್ ಸಾಧಿಕ್ ಬಂಧಿತ ಆರೋಪಿಗಳು. ಇವರ ಬಳಿಯಿದ್ದ 9 ಲಕ್ಷ ಮೌಲ್ಯದ 407 ಗ್ರಾಂ. ತೂಕದ ಮಾದಕವಸ್ತು, ಕಾರು, ಮೊಬೈಲ್, ನಗದು ಸೇರಿ 16,13,800 ಲಕ್ಷ ಮೌಲ್ಯದ MDMA ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಈ ಆರೋಪಿಗಳು ಬೆಂಗಳೂರಿನಿಂದ ಡ್ರಗ್ಸ್ ಖರೀದಿಸಿ ತಂದು, ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಡ್ರಗ್ಸ್ ಮಾರುತ್ತಿದ್ದರು. ಇದನ್ನೂ ಓದಿ: ಅಮಿತ್ ಶಾ ವಿರುದ್ಧದ ಫೇಕ್ ವಿಡಿಯೋ ಪ್ರಕರಣ, ತೆಲಂಗಾಣ ಕಾಂಗ್ರೆಸ್ ಘಟಕದ ಐಟಿ ಸೆಲ್‌ನ ಮೂವರ ಬಂಧನ

https://youtu.be/7ZX33HT5nQs?si=xlqWAmAwE4u8FPMy

ಇನ್ನು ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಜಾಫರ್‌ವಿರುದ್ಧ ಹಲ್ಲೆ ಮತ್ತು ಕೊಲೆ ಯತ್ನ ಸೇರಿ ಒಟ್ಟು 9 ಕೇಸ್‌ಗಳು ದಾಖಲಾಗಿತ್ತು. ಇನ್ನು ಆರೋಪಿ ಮೊಹಮ್ಮದ್ ಇಶಾನ್ ವಿರುದ್ಧವು ಈ ಹಿಂದೆ ಮಾದಕವಸ್ತು ಮಾರಾಟ ಪ್ರಕರಣ ದಾಖಲಾಗಿದೆ. ಈ ಹಿನ್ನಲೆ ಇಂದು ಖಚಿತ ಮಾಹಿತಿ ಪಡೆದು ದಾಳಿ ಮಾಡಿದಾಗ ಮಾದಕ ವಸ್ತುಗಳು ಪತ್ತೆಯಾಗಿವೆ. ಇದನ್ನೂ ಓದಿ: ದೇವೇಗೌಡರ ಕುಟುಂಬ ಸದಸ್ಯರು ಹಾಸನವಷ್ಟೇ ಅಲ್ಲ, ಕರ್ನಾಟಕದ ಹೆಸರು ಕೆಡಿಸಿದ್ದಾರೆ: ಮೊಯ್ಲಿ

https://youtu.be/VdisxEZw61M?si=A486zdg9RGn_B9Vv
Share with Friends
author avatar
News Desk