LatestTop Storiesಕ್ರೀಡೆ-Sportsವಿದೇಶ-International

ಫಿಫಾ ನಿಯಮ ಉಲ್ಲಂಘಿಸಿದ ಅರ್ಜೆಂಟೀನಾ

ಅಟ್ಲಾಂಟಾ,ಜು.16 : ಫಿಫಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅದ್ಭುತ ಗೆಲುವು ಸಾಧಿಸಿದ ಅರ್ಜೆಂಟೀನಾ ತಂಡ, ಇದೀಗ ವಿವಾದವೊಂದರಲ್ಲಿ ಸಿಲುಕಿದೆ.
ಸದ್ಯ ಪಂದ್ಯದ ಗೆಲುವಿನ ಸಂಭ್ರಮಾಚರಣೆಯ ವೇಳೆ ಅರ್ಜೆಂಟೀನಾ ಆಟಗಾರರು ಪ್ರದರ್ಶಿಸಿದ ಬ್ಯಾನರ್ ಫಿಫಾ ನಿಯಮಗಳ ಉಲ್ಲಂಘನೆಯಾಗಿರಬಹುದು ಎಂಬ ಚರ್ಚೆ ಆರಂಭವಾಗಿದೆ.

ಅರ್ಜೆಂಟೀನಾದ ಮಿಡ್‌ ಫೀಲ್ಡರ್ ಜಿಯೋವಾನಿ ಲೊ ಸೆಲ್ಸೊ ಲಾಸ್ ಮಾಲ್ವಿನಾಸ್ ಸನ್ ಅರ್ಜೆಂಟೀನಾಸ್ ಎಂದು ಬರೆದಿದ್ದ ಬ್ಯಾನರ್ ಹಿಡಿದಿದ್ದರು.ಇದರ ಅರ್ಥ ಮಾಲ್ವಿನಾಸ್ ಅರ್ಜೆಂಟೀನಾಗೆ ಸೇರಿದ್ದು ಎಂದಾಗಿದೆ.
ಡಿಫೆಂಡರ್ ನಿಕೋಲಸ್ ಒಟಮೆಂಡಿ ಈ ಬ್ಯಾನರ್ ಅನ್ನು ಮೈದಾನದಲ್ಲಿ ಪ್ರದಶಿಸುವ ಮೊದಲು, ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಇದನ್ನು ಪ್ರದರ್ಶಿಸಿದ್ದರು.

ಲಾಸ್ ಮಾಲ್ವಿನಾಸ್ ಎಂಬುದು ಅರ್ಜೆಂಟೀನಾದ ಪೂರ್ವ ಕರಾವಳಿಯಿಂದ ಸುಮಾರು 480 ಕಿ.ಮೀ ದೂರದಲ್ಲಿರುವ, ಬ್ರಿಟಿಷ್ ಆಡಳಿತಕ್ಕೊಳಪಟ್ಟ ಫಾಕ್ಲಾಯಂಡ್ ದ್ವೀಪಗಳಿಗೆ ಅರ್ಜೆಂಟೀನಾದಲ್ಲಿ ಬಳಸಲಾಗುವ ಹೆಸರಾಗಿದೆ.

ಈ ದ್ವೀಪಗಳ ಮಾಲೀಕತ್ವದ ಕುರಿತು ಅರ್ಜೆಂಟೀನಾ ಮತ್ತು ಯುನೈಟೆಡ್ ಕಿಂಗ್‌ಡಮ್ (ಬ್ರಿಟನ್) ನಡುವೆ ದಶಕಗಳಿಂದ ವಿವಾದವಿದೆ.ಬ್ರಿಟನ್ 1774 ರಲ್ಲೇ ಈ ದ್ವೀಪಗಳ ಮೇಲೆ ಹಕ್ಕು ಸಾಧಿಸಿತ್ತು ಮತ್ತು 1832 ರಲ್ಲಿ ತನ್ನ ಅಧಿಕಾರವನ್ನು ಪುನಃ ಸ್ಥಾಪಿಸಿತು.1982 ರಲ್ಲಿ ಅರ್ಜೆಂಟೀನಾ ಈ ದ್ವೀಪಗಳ ಮೇಲೆ ಆಕ್ರಮಣ ಮಾಡಿತು.
ಏಪ್ರಿಲ್ 2 ರಿಂದ ಜೂನ್ 14 ರವರೆಗೆ ನಡೆದ ಈ ಭೀಕರ ಯುದ್ಧದಲ್ಲಿ ಅರ್ಜೆಂಟೀನಾ ಸೋಲೊಪ್ಪಿಕೊಂಡಿತು. ಈ ಸಂಘರ್ಷದಲ್ಲಿ ಮೂವರು ನಾಗರಿಕರು, 255 ಬ್ರಿಟಿಷ್ ಸೈನಿಕರು ಮತ್ತು 649 ಅರ್ಜೆಂಟೀನಾದ ಸೈನಿಕರು ಪ್ರಾಣ ಕಳೆದುಕೊಂಡಿದ್ದರು.

ಅಂತರರಾಷ್ಟ್ರೀಯ ಫುಟ್‌ಬಾಲ್ ಅಸೋಸಿಯೇಷನ್ ಮಂಡಳಿ ಮತ್ತು ಫಿಫಾ ಪಂದ್ಯಗಳ ವೇಳೆ ರಾಜಕೀಯ ಧ್ವಜಗಳು, ಘೋಷಣೆಗಳು ಹಾಗೂ ಚಿಹ್ನೆಗಳನ್ನು ಪ್ರದರ್ಶಿಸುವುದರ ವಿರುದ್ಧ ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿವೆ.

ಈಗ ಅರ್ಜೆಂಟೀನಾ ಆಟಗಾರರು ಪ್ರದರ್ಶಿಸಿದ ಫಾಕ್ಲಾಯಂಡ್ ದ್ವೀಪಗಳ ಬ್ಯಾನರ್ ಅನ್ನು ರಾಜಕೀಯ ಪ್ರೇರಿತ ಎಂದು ಪರಿಗಣಿಸಿದರೆ, ಅರ್ಜೆಂಟೀನಾ ತಂಡವು ಫಿಫಾದಿಂದ ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

ಪಂದ್ಯದ ಯಾವುದೇ ಉಪಕರಣಗಳ ಮೇಲೆ ರಾಜಕೀಯ, ಧಾರ್ಮಿಕ ಅಥವಾ ವೈಯಕ್ತಿಕ ಘೋಷಣೆಗಳು, ಹೇಳಿಕೆಗಳು ಅಥವಾ ಚಿತ್ರಗಳನ್ನು ಪ್ರದರ್ಶಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆಟಗಾರರು ತಮ್ಮ ಒಳ ಉಡುಪುಗಳ ಮೇಲೆಯೂ ಇಂತಹ ಯಾವುದೇ ರಾಜಕೀಯ, ಧಾರ್ಮಿಕ ಅಥವಾ ವೈಯಕ್ತಿಕ ಘೋಷಣೆ ಮತ್ತು ಚಿತ್ರಗಳನ್ನು ಪ್ರದರ್ಶಿಸುವಂತಿಲ್ಲ.

Share with Friends
author avatar
Digital Desk