LatestTop Storiesರಾಯಚೂರು

ರಾಯಚೂರಲ್ಲಿ ಪುರಾತನ ಕಾಲದ ನಾಣ್ಯಗಳು ಪತ್ತೆ – ಮನೆ ಅಡಿಪಾಯದಲ್ಲಿ ಸಿಕ್ತು ನಿಧಿ..!

ರಾಯಚೂರು: ಮನೆಯ ಅಡಿಪಾಯ ಅಗೆಯುವಾಗ ತಾಮ್ರದ ಪುರಾತನ ನಾಣ್ಯಗಳು ಪತ್ತೆಯಾದ ಅಚ್ಚರಿಯ ಘಟನೆ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ನಡೆದಿದೆ.

ಮಾನ್ವಿಯ ಕಿಲ್ಲಾ ಪ್ರದೇಶದಲ್ಲಿ 60 ನಾಣ್ಯಗಳು ಪತ್ತೆ ಯಾಗಿವೆ. ಮನೆಯ ಕಾಮಗಾರಿಗಾಗಿ ಅಡಿಪಾಯ ತೆಗೆಯುವಾಗ ಕಾರ್ಮಿಕರಿಗೆ ತಾಮ್ರದ ನಾಣ್ಯಗಳು ದೊರೆತಿವೆ.

ಪತ್ತೆಯಾದ ನಾಣ್ಯಗಳ ಮೇಲೆ ಉರ್ದು ಭಾಷೆಯ ಲಿಪಿಯ ಬರಹ ಇದ್ದು, ಇವು ಐತಿಹಾಸಿಕ ಕಾಲದಲ್ಲಿ ಚಲಾವಣೆಯಲ್ಲಿದ್ದ ನಾಣ್ಯ ಗಳು ಎಂದು ಹೇಳಲಾಗುತ್ತಿದೆ. ನಿಜಾಮರ ಕಾಲದ ಅಥವಾ ಬಹಮನಿ ಸುಲ್ತಾನರ ಕಾಲದ ನಾಣ್ಯಗಳಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದಾರೆ.

ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ತಹಶೀಲ್ದಾರ್ ಭೀಮರಾಯ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮಾಲೀಕರಿಂದ ನಾಣ್ಯಗಳನ್ನ ವಶಕ್ಕೆ ಪಡೆದ ಅಧಿಕಾರಿಗಳು ಹೆಚ್ಚಿನ ಮಾಹಿತಿಗಾಗಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಈ ನಾಣ್ಯಗಳನ್ನು ಹೆಚ್ಚಿನ ಅಧ್ಯಯನಕ್ಕಾಗಿ ಪುರಾತತ್ವ ಇಲಾಖೆಗೆ ಹಸ್ತಾಂತರಿಸಲು ನಿರ್ಧಾರ ಮಾಡಲಾಗಿದೆ. ಪುರಾತತ್ವ ಇಲಾಖೆಯ ಅಧ್ಯಯನದ ನಂತರ ನಾಣ್ಯಗಳ ನಿಖರ ಕಾಲ ಮತ್ತು ಇತಿಹಾಸ ತಿಳಿದುಬರಲಿದೆ.

Share with Friends
author avatar
Digital Desk