Latestಚುನಾವಣೆ-Electionರಾಷ್ಟ್ರೀಯ-National

ಗುಜುರಾತ್‌ನ ಗಾಂಧಿನಗರದಲ್ಲಿ ಗೆಲುವು ಸಾಧಿಸಿದ ಅಮಿತ್ ಶಾ

ಗಾಂಧಿ ನಗರ: ಲೋಕಸಭಾ ಚುನಾವಣೆಯಲ್ಲಿ ಗುಜುರಾತ್‌ನ (Gujrath) ಗಾಂಧಿನಗರ (Gandhinagar) ಕ್ಷೇತ್ರದಲ್ಲಿ ಅಮಿತ್‌ ಶಾ (Amit Shah) 5 ಲಕ್ಷಗಳ ಮತದ ಅಂತರದಲ್ಲಿ ಭಾರೀ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್​​​​​ ಅಭ್ಯರ್ಥಿ ಸೋನಾಲ್ ಪಟೇಲ್ (Sonal Patel) ಅವರ ವಿರುದ್ಧ ಅಮಿತ್​​​ ಶಾ ಸ್ಪರ್ಧಿಸಿದರು. ಈ ಹಿಂದೆ 2014 ರಲ್ಲಿ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರು ಈ ಕ್ಷೇತ್ರದಿಂದ ಸ್ವರ್ಧಿಸಿದರು. ಇದಕ್ಕೂ ಮೊದಲು 1996ರಲ್ಲಿ ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಕೂಡ ಈ ಕ್ಷೇತ್ರದಿಂದ ಸ್ವರ್ಧಿಸಿ ಗೆಲುವು ಸಾಧಿಸಿದರು. ಗಾಂಧಿ ನಗರ ಬಿಜೆಪಿ ಭದ್ರತಕೋಟೆಯು ಆಗಿದೆ. ಇದನ್ನೂ ಓದಿ: ಚುನಾವಣೆ ಫಲಿತಾಂಶ – ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್ ಸಿಂಗ್ ಗೆ ಮುನ್ನಡೆ

https://youtu.be/lc15CaHVVn4?si=6_dVvUPgU5ZQ_NDP

ಮೇ 7 ರಂದು ಮೂರನೇ ಹಂತದ ಚುನಾವಣೆ ನಡೆಯಿತು. ಬಿಜೆಪಿ ಇಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿಕೊಂಡು ಬಂದಿದೆ. ದೇಶದ ಬೇರೆ ಬೇರೆ ಕಡೆ ಬಿಜೆಪಿ ಮುನ್ನಡೆಯನ್ನು ಸಾಧಿಸಿದೆ. ಇದರ ಜತೆಗೆ ಕಾಂಗ್ರೆಸ್​​ ಮೈತ್ರಿಕೂಟ ಇಂಡಿಯಾ ಕೂಡ ಭಾರೀ ಪೈಪೋಟಿಯನ್ನು ನೀಡುತ್ತಿದೆ. ಗುಜರಾತ್‌ನ ಗಾಂಧಿನಗರ ನಗರ ಕ್ಷೇತ್ರದಿಂದ ಅಮಿತ್​​ ಶಾ ಎರಡನೇ ಭಾರೀ ಗೆಲುವು ಸಾಧಿಸಿದ್ದಾರೆ. ಇನ್ನು ಈ ಕ್ಷೇತ್ರದಿಂದ ಬೇರೆ ಬೇರೆ ಪಕ್ಷ ನಾಯಕರು ಈ ಕ್ಷೇತ್ರದಿಂದ ತಮ್ಮ ನಾಮಪತ್ರವನ್ನು ವಾಪಸ್ಸು ಪಡೆದಿದ್ದರು. ಇದನ್ನೂ ಓದಿ: ಲೋಕಸಭಾ ಚುನಾವಣಾ ಫಲಿತಾಂಶ – ಅತ್ಯಚಾರಿ ಆರೋಪಿ ಪ್ರಜ್ವಲ್‌ಗೆ ಫಲಿತಾಂಶ ನೋಡುವ ಭಾಗ್ಯ

https://youtu.be/D7pe8Pemslc?si=8qF8beV–OKYMjuB

ಗುಜರಾತ್‌ನಲ್ಲಿ ಬಿಜೆಪಿ ಸುಮಾರು 25-26 ಸ್ಥಾನಗಳನ್ನು ಗೆಲ್ಲಲಿದೆ ಎಂದು ಮತಗಟ್ಟೆ ಸಮೀಕ್ಷೆ ಹೇಳಿದೆ. ಕಾಂಗ್ರೆಸ್​​​ ಗುಜರಾತ್​​​ನಲ್ಲಿ ತನ್ನ ಖಾತೆ ತೆರೆಯಲು ಹೆಣಗಾಡುತ್ತಿದೆ. ಇದನ್ನೂ ಓದಿ: ಲೋಕಸಭೆ ಚುನಾವಣೆ ಫಲಿತಾಂಶ ಹಿನ್ನಲೆ- ಬಿ.ವೈ ರಾಘವೇಂದ್ರ ಟೆಂಪಲ್ ರನ್

Share with Friends
author avatar
News Desk