LatestLife Style | ಜೀವನಶೈಲಿ

ಆಲೂ ಪೋಹಾ ಬೋಂಡಾ

ಮಳೆಗಾಲ ಶುರುವಾಗಿದೆ ಏನಾಗಿದರು ಬಿಸಿಬಿಸಿ ತಿನ್ನಬೇಕು ಅಂತ ಅನ್ನಿಸೋದು ಸರ್ವೆಸಾಮಾನ್ಯ. ಬಜ್ಜಿ, ಬೊಂಡ, ಬಡೆ ಹೀಗೆ ನಾನಾ ರೀತಿಯ ತಿಂಡಿಗಳನ್ನ ನೀವು ನೆನಪು ಮಾಡಿಕೊಳ್ತೀರ ಅಲ್ವಾ.. ಹಾಗಾದ್ರೆ ನೀವು ಒಮ್ಮೆ ಈ ಹೊಸ ರೆಸೆಪಿಯನ್ನ ಟ್ರೈ ಮಾಡಿ.. ಅದರ ರುಚಿಗೆ ಕಳೆದೊಗೊದಂತು ಪಕ್ಕಾ.. ಯಾವುದು ಆ ರೆಸೆಪಿ ಅಂದರೆ ಆಲೂ ಪೋಹಾ ಬೋಂಡಾ.. ಕಾಮನ್ ಆಗಿ ಎಲ್ಲರಿಗೂ ಆಲೂಗಡ್ಡೆ ಪಲ್ಯ ಅಂದರೆ ಇಷ್ಟನೆ ಇರುತ್ತೆ. ಆದರೆ ಈ ಹೊಸ ಬಗೆಯ ತಿಂಡಿಯನ್ನ ಈಗ ನೀವು ಮಾಡಿ ತಿನ್ನಿ ಸಖತ್ ಆಗಿರುತ್ತೆ. ಹಾಗಾದರೆ ಹೇಗೆ ಇದನ್ನ ಮಾಡೋದು ಅಂತ ನೋಡೋಣ ..

ಬೇಕಾಗುವ ಪದಾರ್ಥಗಳು…
* ಬೇಯಿಸಿದ ಆಲೂಗಡ್ಡೆ-ಮಧ್ಯಮ ಗಾತ್ರ 1
* ಕಡಲೆಹಿಟ್ಟು-ಸ್ವಲ್ಲ
* ಅಕ್ಕಿಹಿಟ್ಟು- 1 ಚಮಚ
* ಪೇಪರ್ ಅವಲಕ್ಕಿ- 1/2 ಬಟ್ಟಲು
* ಅಚ್ಚ ಖಾರದ ಪುಡಿ- ಅರ್ಧ ಚಮಚ
* ಅರಿಶಿನದ ಪುಡಿ- ಅರ್ಧ ಚಮಚ
* ಬಿಳಿ ಎಳ್ಳು 1 ಚಮಚ
* ಉಪ್ಪು- ರುಚಿಗೆ ತಕ್ಕಷ್ಟು
* ಎಣ್ಣೆ- ಅಗತ್ಯವಿರುವಷ್ಟು

ಮಾಡುವ ವಿಧಾನ…

ಬೇಯಿಸಿದ ಆಲೂಗಡ್ಡೆಯನ್ನು ಗಂಟಿಲ್ಲದೆ ಪುಡಿಮಾಡಿಕೊಳ್ಳಿ. ಪೇಪರ್ ಅವಲಕ್ಕಿಯನ್ನು ನೀರಿನಲ್ಲಿ ತೊಳೆದು,ಬಸಿದು ಆಲೂ ಪುಡಿಯೊಂದಿಗೆ ಸೇರಿಸಿ, ಎಳ್ಳು, ಉಪ್ಪು ಹಾಕಿ ಮಿಶ್ರಣ ಮಾಡಿ, ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಇದೀಗ ಒಂದು ಪಾತ್ರೆಗೆ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಅಚ್ಚ ಖಾರದ ಪುಡಿ ಹಾಗೂ ಅರಿಶಿನ, ಉಪ್ಪು ಹಾಗೂ ಸ್ವಲ್ಪ ನೀರು ಗಟ್ಟಿಯಾಗಿ ಮಿಶ್ರಣ ಮಾಡಿಕೊಳ್ಳಿ. ಒಲೆಯ ಮೇಲೆ ಎಣ್ಣೆ ಇಟ್ಟು ಬಿಸಿ ಮಾಡಿ. ಗಟ್ಟಿಯಾಗಿ ಕಲೆಸಿದ ಹಿಟ್ಟಿಗೆ ಉಂಡೆಗಳನ್ನು ಅದ್ದಿ, ಕಾದ ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಆಲೂ ಪೋಹಾ ಬೋಂಡಾ ಸವಿಯಲು ಸಿದ್ಧ.

Share with Friends
author avatar
News Desk