BlogEntertainmentLatest

ವೈವಾಹಿಕ ಜೀವನಕ್ಕೆ ಕಾಲಿಟ್ಟಿ ನಟಿ ಅದಿತಿ ರಾವ್ ಹೈದರಿ – ನಟ ಸಿದ್ಧಾರ್ಥ್

ನಟಿ ಅದಿತಿ ರಾವ್ ಹೈದರಿ ಹಾಗೂ ನಟ ಸಿದ್ಧಾರ್ಥ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುಟ್ಟಾಗಿ ಹಸೆಮಣೆ ಏರಿದ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿದೆ. ಇಬ್ಬರಿಗೂ ಇದು 2ನೇ ಮದುವೆ ಆಗಿದೆ. ಹಲವು ವರ್ಷಗಳ ಪ್ರೀತಿಗೆ ಇಂದು ಸಿದ್ಧಾರ್ಥ್‌, ಅದಿತಿ ರಾವ್‌ ಮದುವೆಯ ಮುದ್ರೆ ಒತ್ತಿದ್ದಾರೆ.

400 ವರ್ಷಗಳ ಹಳೆಯ ವನಪರ್ತಿಯ ದೇವಸ್ಥಾನದಲ್ಲಿ ಅದಿತಿ ಮತ್ತು ಸಿದ್ಧಾರ್ಥ್ ವಿವಾಹ ಸಿಂಪಲ್ ಆಗಿ ನಡೆದಿದ್ದು, ಫೋಟೋಶೂಟ್ ಅದ್ಧೂರಿಯಾಗಿದೆ. ಮದುವೆಯ ಕೆಲವು ಫೋಟೋಗಳನ್ನು ಅದಿತಿ ರಾವ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ನವ ಜೋಡಿ ರೊಮ್ಯಾಂಟಿಕ್ ಆಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. “ನೀವು ನನ್ನ ಸೂರ್ಯ, ನನ್ನ ಚಂದ್ರ ಮತ್ತು ನನ್ನ ಎಲ್ಲಾ ನಕ್ಷತ್ರಗಳು” ಎಂದು ಮದುವೆ ಫೋಟೋಗಳನ್ನು ದಂಪತಿ ಹಂಚಿಕೊಂಡಿದ್ದಾರೆ.

ಅದಿತಿ ಮತ್ತು ಸಿದ್ಧಾರ್ಥ್‌ ಇಬ್ಬರಿಗೂ ಇದು 2ನೇ ಮದುವೆಯಾಗಿದೆ. ಮೊದಲ ಮದುವೆಗೆ ಡಿವೋರ್ಸ್‌ ನೀಡಿದ ಬಳಿಕ ಸಿನಿಮಾವೊಂದರ ಚಿತ್ರೀಕರಣದಲ್ಲಿ ಪರಿಚಯವಾಗಿ ಇಂದು ಮದುವೆ ಮುನ್ನುಡಿ ಬರೆದಿದೆ. ಹೊಸ ಜೋಡಿಗೆ ಸಿನಿಮಾ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

Share with Friends
author avatar
News Desk