Crime NewsLatest

ನೇಹಾ ಲವ್ ಬಗ್ಗೆ ಫಯಾಜ್ ತಾಯಿ ಬಳಿ ನನ್ನನ್ನು ಲವ್ ಮಾಡುತ್ತಿದ್ದಾಳೆ ಎಂದಿದ್ದ

ನೇಹಾ (Neha) ಹಾಗೂ ಕೊಲೆಗಾರ ನಡುವೆ ಇರುವ ಸಂಬಂಧದ ಬಗ್ಗೆ ಅವರ ತಾಯಿ (Mother) ಮುಮ್ತಾಜ್ ಪ್ರತಿಕ್ರಿಯಿಸಿ, ಅವರು ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು (Friends) . ನೇಹಾ ಕೂಡ ಅಷ್ಟೇ ಒಳ್ಳೆಯ ಹುಡುಗಿ. ಇಬ್ಬರ ಮಧ್ಯೆ ಒಳೆಯ ಸ್ನೇಹವಿತ್ತು. ನಾನು ಹೇಳಿದೆ. ನೋಡ್ರಪ್ಪಾ ಫ್ರೆಂಡ್ಲಿಯಾಗಿ ಇರಿ. ಫ್ರೆಂಡ್‌ಶಿಪ್ ಇಟ್ಕೊಳ್ಳಿ. ಯಾವುದಕ್ಕೂ ದುಡುಕೋಕೆ ಹೋಗಬೇಡ. ಅವಳು ಜಾಣೆ ಇದ್ದಾಳೆ, ನೀನು ಜಾಣೆ ಇದ್ದೀಯಾ. ಇಬ್ರೂ ಐಎಎಸ್ ಮಾಡಿ ಎಂದು ಹೇಳಿದ್ದೆ ಎಂದು ಹೇಳಿದ್ದಾರೆ.

ಇಬ್ಬರ ನಡುವೆ ಲವ್ (love) ಇತ್ತು. ಮಮ್ಮಿ ಅವಳು ನನ್ನನ್ನು ಲವ್ ಮಾಡುತ್ತಿದ್ದಾಳೆ. ನಾನು ಬೇಡ ಅಂತ ಹೇಳಿದ್ದೀನಿ. ನೋಡೋನಪ್ಪಾ ಮೊದಲು ನೀನು ನಿನ್ನ ಕಾಲು ಮೇಲೆ ನಿಲ್ಲು ಎಂದು ಹೇಳಿದ್ದೆ. ಐಎಎಸ್ ಮಾಡು. ಅವ್ನು ಬ್ರಿಲಿಯಂಟ್ ಇದ್ದಾನೆ. ಅವನನ್ನು ಐಎಎಸ್ ಮಾಡಬೇಕು ಎಂದು ಬಹಳಷ್ಟು ಕನಸಿತ್ತು ಎಂದು ತಾಯಿ ಮುಮ್ತಾಜ್ ಹೇಳೆದ್ದಾರೆ. ಇದನ್ನೂ ಓದಿ: ಮೂರು ತಿಂಗಳ ಹಿಂದೆ ತಂದೆ ಮೇಲೆಯೇ ಹಲ್ಲೆ ಮಾಡಿದ ಕೊಲೆಗಾರ ಫಯಾಜ್

https://youtu.be/RLABPlUFGgU?si=b3b9fGqN0nFUBiFK
Share with Friends
author avatar
News Desk