
ನಟಿ ಐಶ್ವರ್ಯಾ ಸಿಂಧೋಗಿ ನಿರಂತರ ಕಿರುಕುಳ
ಬೆಂಗಳೂರು : ಕಳೆದ ಎರಡು ತಿಂಗಳಿಂದ ನಟಿ ಐಶ್ವರ್ಯಾ ಸಿಂಧೋಗಿಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಅಪರಿಚಿತ ವ್ಯಕ್ತಿಯೊಬ್ಬ ನಕಲಿ ಖಾತೆಗಳನ್ನು ಬಳಕೆ ಮಾಡಿಕೊಂಡು ಅತ್ಯಂತ ಅವಹೇಳನಕಾರಿ ಹಾಗೂ ನಿಂದನಾತ್ಮಕ ಭಾಷೆಯಲ್ಲಿ ಕಮೆಂಟ್ ಮಾಡುವುದು, ಬೆದರಿಕೆ ಹಾಕುವ ಮೆಸೇಜ್ ಕಳುಹಿಸುವುದು ಮತ್ತು ನಟಿಯ ವೈಯಕ್ತಿಕ ಗೌರವಕ್ಕೆ ಧಕ್ಕೆ ತರುವಂತಹ ಪೋಸ್ಟ್‌ಗಳನ್ನು ಹಾಕುತ್ತಿದ್ದಾನೆ ಎಂದು ನಟಿ ಸಂಜಯನಗರ ಪೊಲೀಸ್ ಠಾಣೆಗೆ ಟಿ ಐಶ್ವರ್ಯಾ ಸಿಂಧೋಗಿ ದೂರು ಸಲ್ಲಿಸಿದ್ದಾರೆ.

Continuous harassment and complaints
ಸಂಶಯದ ನೆರಳು ಹಾಗೂ ‘ಮನ್ನತ್ ನಕುಲ್’ ಹೆಸರು: ದೂರಿನಲ್ಲಿ ಐಶ್ವರ್ಯಾ ಅವರು ಅತ್ಯಂತ ಪ್ರಮುಖ ವಿಚಾರವೊಂದನ್ನು ಉಲ್ಲೇಖಿಸಿದ್ದಾರೆ. ತಮಗೆ ಈ ರೀತಿ ಕಿರುಕುಳ ನೀಡುತ್ತಿರುವುದು ಬೇರಾರೂ ಅಲ್ಲ, ತಮ್ಮ ಪರಿಚಯದ ವ್ಯಕ್ತಿಯೇ ಇರಬಹುದು ಎಂಬ ಬಲವಾದ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ. ದೂರಿನಲ್ಲಿ ಮನ್ನತ್ ನಕುಲ್ ಎಂಬ ಹೆಸರನ್ನು ಉಲ್ಲೇಖಿಸಿದ್ದು, ಈ ವ್ಯಕ್ತಿಯೇ ಬೇರೆ ಬೇರೆ ಹೆಸರಿನಲ್ಲಿ ನಕಲಿ ಪ್ರೊಫೈಲ್‌ಗಳನ್ನು ತೆರೆದು ದ್ವೇಷಪೂರಿತ ಸಂದೇಶಗಳನ್ನು ಕಳುಹಿಸುತ್ತಿರಬಹುದು ಎಂದು ಶಂಕಿಸಿದ್ದಾರೆ
ಮರುಕಳಿಸಿದ 2022ರ ಭೀಕರ ಅನುಭವ: ನಟಿ ಐಶ್ವರ್ಯಾ ಅವರಿಗೆ ಈ ರೀತಿಯ ಕಿರುಕುಳ ಹೊಸದೇನಲ್ಲ. 2022ರಲ್ಲೂ ಅವರು ಇದೇ ರೀತಿಯ ಸೈಬರ್ ಸ್ಟಾಕಿಂಗ್ ಎದುರಿಸಿದ್ದರು. ಆ ಸಂದರ್ಭದಲ್ಲೂ ನಿರಂತರ ಕರೆಗಳನ್ನು ಮಾಡಿ ಕಿರುಕುಳ ನೀಡುವುದು, ಅವರು ಹೋಗುವ ಸ್ಥಳಗಳನ್ನು ಹಿಂಬಾಲಿಸುವುದು ಸೇರಿದಂತೆ ಹಲವು ರೀತಿಯಲ್ಲಿ ತೊಂದರೆ ನೀಡಲಾಗಿತ್ತು. ಆ ಸಮಯದಲ್ಲೂ ಅವರು ಸಂಜಯನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರು ನೀಡಿದ್ದರು. ಆದರೆ, ಮತ್ತೊಮ್ಮೆ ಅದೇ ಮಾದರಿಯ ಕಿರುಕುಳ ಪುನರಾವರ್ತನೆಯಾಗಿರುವುದು ನಟಿಯನ್ನು ಆತಂಕಕ್ಕೆ ದೂಡಿದೆ.
ನಟಿಯರ ಮೇಲಿನ ಸೈಬರ್ ದಾಳಿ:ಆತಂಕಕಾರಿ ಬೆಳವಣಿಗೆಸಾಮಾಜಿಕ ಜಾಲತಾಣಗಳಲ್ಲಿ ಫಾಲೋವರ್ಸ್ ಪಡೆಯಲು ಹಾಗೂ ನಟಿಯರ ಹೆಸರಿಗೆ ಮಸಿ ಬಳಿಯಲು ಸೈಬರ್ ಅಪರಾಧಿಗಳು ನಕಲಿ ಖಾತೆಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಬ್ಲಾಕ್ ಮಾಡಿದಷ್ಟೂ ಹೊಸ ಖಾತೆಗಳನ್ನು ತೆರೆದು ಕಿರುಕುಳ ನೀಡುವುದು ಇವರ ಶೈಲಿಯಾಗಿದೆ. ಇದು ಕೇವಲ ನಟಿಯರ ಮೇಲಿನ ದಾಳಿಯಷ್ಟೇ ಅಲ್ಲದೆ, ಅವರ ಮಾನಸಿಕ ನೆಮ್ಮದಿಯ ಮೇಲಾಗುತ್ತಿರುವ ದೊಡ್ಡ ಸವಕಳಿಯಾಗಿದೆ.
