LatestTop Storiesಬೆಂಗಳೂರು-Bengaluruರಾಜ್ಯ-Karnataka

ನಡು ರಸ್ತೆಯಲ್ಲೇ ಹೊತ್ತಿ ಉರಿದ ಬಿಎಂಟಿಸಿ ಬಸ್‌ – ತಪ್ಪಿದ ಭಾರೀ ಅನಾಹುತ

ಬೆಂಗಳೂರು: ರಸ್ತೆ ಮಧ್ಯೆಯೇ ಬಿಎಂಟಿಸಿ ಬಸ್ (BMTC bus) ಹೊತ್ತಿ ಉರಿದ ಘಟನೆ (Fire Accident) ಎಮ್‍ಜಿ ರಸ್ತೆಯ (MG Road) ಅನಿಲ್ ಕುಂಬ್ಳೆ ಸರ್ಕಲ್ ಬಳಿ ನಡೆದಿದೆ.

ಬಸ್ ರೋಸ್ ಗಾರ್ಡನ್‍ನಿಂದ ಶಿವಾಜಿನಗರದ ಕಡೆಗೆ ಹೋಗುತ್ತಿತ್ತು. ಈ ವೇಳೆ ಬಸ್‍ನ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಫುಲ್‌ ಕೂಲ್‌ ಕೂಲಾದ ಬೆಂಗಳೂರು- ಮಳೆಯಾಗುವ ಸಾಧ್ಯತೆ

https://youtu.be/Z9guiREBeLU?si=vMvGmb6l77xzLBm9

ಬಸ್‌ ಚಾಲಕ ಕೂಡಲೇ ಪ್ರಯಾಣಿಕರನ್ನ ಕೆಳಗೆ ಇಳಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಬಸ್‌ನಲ್ಲಿ 30 ಜನ ಪ್ರಯಾಣಿಕರಿದ್ದರು ಎಂದು ಬಸ್‍ನ ನಿರ್ವಾಹಕ ತಿಳಿಸಿದ್ದಾರೆ.

ಸ್ಥಳ್ಕಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬಳಿಕ ಪೊಲೀಸರು ಉಂಟಾಗಿದ್ದ ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಿದ್ದು, ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಭಾರತದ ಜನರಿಗೆ ಸೇವೆ ಸಲ್ಲಿಸುವುದು ನನ್ನ ಏಕೈಕ ಗುರಿ: ಮೋದಿ

https://youtu.be/3EjLAOOE9Ss?si=wOunVszgifjfhzKv

ಸ್ಥಳಕ್ಕೆ ಆಗಮಿಸಿರುವ ಬಿಎಂಟಿಸಿ ಸಿಬ್ಬಂದಿ ಹಾಗೂ ಮೆಕ್ಯಾನಿಕ್‍ಗಳು ಬೆಂಕಿಗಾಹುತಿಯಾದ ಬಸ್‍ನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ಕಾರು-ಆಟೋ ಡಿಕ್ಕಿ: 6 ಮಂದಿ ಸಾವು

Share with Friends
author avatar
News Desk