ದರ್ಶನ್ ಭೇಟಿಗೆ ಪರಪ್ಪನ ಅಗ್ರಹಾರಕ್ಕೆ ಮಗನ ಜೊತೆ ಬಂದ ವಿಜಯಲಕ್ಷ್ಮಿ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣವಾಗಿ ದರ್ಶನ್ (Darshan) ಪರಪ್ಪನ ಅಗ್ರಹಾರ (Parappana Agrahara) ಜೈಲು ಸೇರಿದ್ದಾರೆ. ಸದ್ಯ ವಾರದಲ್ಲಿ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶವಿದ್ದು ಜೈಲಿಗೆ ದರ್ಶನ್ ನೋಡಲು ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್, ಅಕ್ಕನ ಮಗ ಚಂದನ್ ಆಗಮಿಸಿದ್ದಾರೆ.
3 ನೇ ಬಾರಿಗೆ ಪತಿಯ ಭೇಟಿಗೆ ಮಗನೊಂದಿಗೆ ವಿಜಯಲಕ್ಷ್ಮಿ (Vijayalakshmi) ಬಂದಿದ್ದಾರೆ. ಈ ವೇಳೆ, ಬೆಡ್ಶೀಟ್, ಬಟ್ಟೆಯ ಜೊತೆ ಡ್ರೈ ಪ್ರೂಟ್ಸ್, ಸ್ನಾಕ್ಸ್, ಹಣ್ಣುಗಳನ್ನು ದರ್ಶನ್ಗೆ ತಂದಿದ್ದರು. ಆದರೆ ಜೈಲಿನ ಚೆಕ್ಪೋಸ್ಟ್ ಬಳಿಯೇ ಹಣ್ಣುಗಳನ್ನಷ್ಟೇ ತನ್ನಿ, ಬೇರೆ ಪದಾರ್ಥಗಳಿಗೆ ಅವಕಾಶವಿಲ್ಲ ಎಂದು ಸಿಬ್ಬಂದಿ ತಡೆದಿದ್ದಾರೆ. ಇದನ್ನೂ ಓದಿ: AAP ಪಕ್ಷದ ಮಾಜಿ ಸಚಿವ ರಾಜ್ಕುಮಾರ್ ಆನಂದ್ ಕಮಲ ಸೇರ್ಪಡೆ
ದರ್ಶನ್ರನ್ನು ನೋಡಲು ಜೈಲಿಗೆ ಅವರ ಕುಟುಂಬ ಭೇಟಿ ಕೊಟ್ಟಿದೆ. ಸಿಕ್ಕ ಸಮಯಾವಕಾಶದಲ್ಲಿ ಪತ್ನಿ, ಮಗ ಮತ್ತು ಅಕ್ಕನ ಮಗನನ್ನು ದರ್ಶನ್ರನ್ನು ಮಾತನಾಡಿಸಿ ತೆರಳಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್ನಲ್ಲಿ ತಯಾರಿಸಿದ್ದ ಊಟದಲ್ಲಿ ಹಲ್ಲಿ ಪತ್ತೆ – 35 ವಿದ್ಯಾರ್ಥಿಗಳು ಅಸ್ವಸ್ಥ
ಇನ್ನೂ ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಇರುತ್ತದೆ. ಇದನ್ನೂ ಓದಿ: ಮನೆ ಉಟಕ್ಕೆ ಅವಕಾಶ ನೀಡುವಂತೆ ಸಲ್ಲಿಸಿದ ಅರ್ಜಿ ವಿಚಾರಣೆ ಮುಂದುಡಿಕೆ- ಜುಲೈ 18ರವರೆಗೆ ದರ್ಶನ್ಗೆ ಜೈಲೂಟವೇ ಗತಿ
