BlogLatestTop Storiesರಾಷ್ಟ್ರೀಯ-National

EOS-8 ಮಿಷನ್ ಯಶಸ್ವಿ ಉಡಾವಣೆ : ಇಸ್ರೋ ಮತ್ತೊಂದು ಮಹತ್ತರ ಸಾಧನೆ

ಶ್ರೀಹರಿಕೋಟಾ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಬೆಳಿಗ್ಗೆ 9.19ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ತನ್ನ EOS-8 ಮಿಷನ್​​​​​ ಉಡಾವಣೆ ನಡೆಸಿದೆ. ಇದು ಈ ಮಿಷನ್‌ನ ಮೂರನೇ ಮತ್ತು ಅಂತಿಮ ಅಭಿವೃದ್ಧಿಯ ಹಾರಾಟವಾಗಿದೆ. ಈ ಮಿಷನ್​​​ನ ಉಡಾವಣೆ SSLV ಯ ಅಭಿವೃದ್ಧಿಯ ಹಂತವನ್ನು ಸೂಚಿಸುತ್ತದೆ.

ಈ ಉಪಗ್ರಹವು ಭೂಮಿಯ ಮೇಲೆ ಕಣ್ಗಾವಲು ಹಾಗೂ ಭೂಮಿಯ ಮೇಲೆ ಆಗುವ ವಿಪತ್ತು ಮೇಲ್ವಿಚಾರಣೆ, ಪರಿಸರ ಮೇಲ್ವಿಚಾರಣೆಯನ್ನು ಮಾಡಿದ ಅದರ ಚಿತ್ರಗಳನ್ನು ಇಸ್ರೋಗೆ ಕಳುಹಿಸುತ್ತದೆ.

EOS-8 ಮಿಷನ್ 34-ಮೀಟರ್ ಅಡಿಯಿಂದ ಹಾರಾಟ ನಡೆಸಿದ್ದು ಹಾಗೂ 175.5-ಕಿಲೋಗ್ರಾಂ ಭೂಮಿಯ ವೀಕ್ಷಣಾ ಉಪಗ್ರಹ ಹೊತ್ತುಕೊಂಡು ಉಡಾವಣೆಗೊಂಡಿದೆ. ಇದು ಎಲೆಕ್ಟ್ರೋ-ಆಪ್ಟಿಕಲ್ ಇನ್‌ಫ್ರಾರೆಡ್ ಪೇಲೋಡ್, ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ರಿಫ್ಲೆಕ್ಟೋಮೆಟ್ರಿ ಪೇಲೋಡ್ ಮತ್ತು ಸಿಲಿಕಾನ್ ಕಾರ್ಬೈಡ್ ನೇರಳಾತೀತ ಡೋಸಿಮೀಟರ್​​​​​ಗಳನ್ನು ಹೊಂದಿದೆ.

EOS-8 ಮಿಷನ್‌ನ ಮೊದಲು ಗುರಿ ಅಂದರೆ ವಿಜ್ಞಾನದ ಪ್ರಕಾರ ಇದರ ಪ್ರಾಥಮಿಕ ಉದ್ದೇಶ ಮೈಕ್ರೋಸ್ಯಾಟಲೈಟ್ ಅಭಿವೃದ್ಧಿಪಡಿಸುವುದು ಹಾಗೂ ಮೈಕ್ರೋಸ್ಯಾಟಲೈಟ್ ಉಪಕರಣಕ್ಕೆ ಹೊಂದಿಕೆಯಾಗುವ ಪೇಲೋಡ್ ಯಂತ್ರವನ್ನು ಅಳವಡಿಸುವುದು. ಈ ಮೂಲಕ ಭವಿಷ್ಯದ ಉಪಗ್ರಹಗಳಿಗಾಗಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಬೆಂಗಳೂರಿನಲ್ಲಿರುವ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಜನವರಿಯಲ್ಲಿ PSLV-C58/XpoSat ಮತ್ತು ಫೆಬ್ರವರಿಯಲ್ಲಿ GSLV-F14/INSAT-3DS ಸೇರಿದಂತೆ SSLV ಯ ಮೂರು ಪರೀಕ್ಷಾ ಹಾರಾಟಗಳನ್ನು ಇಸ್ರೋ ಈ ವರ್ಷ ನಡೆಸಿದೆ. ಸರಿಸುಮಾರು 34 ಮೀಟರ್ ಎತ್ತರ ಮತ್ತು 500 ಕೆಜಿ ಪೇಲೋಡ್ ಸಾಮರ್ಥ್ಯದೊಂದಿಗೆ, SSLV ಸಣ್ಣ ಉಪಗ್ರಹಕ್ಕೆ ಹೊಂದಾಣಿಕೆ ಆಗುವ ಉಪಕರಣಗಳನ್ನು ಅಳವಡಿಸಲಾಗಿದೆ.

Share with Friends
author avatar
News Desk