ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಭಾರತದ ಅಮನ್ ಸೆಹ್ರಾವತ್
ಪ್ಯಾರಿಸ್ : ಕುಸ್ತಿಪಟು ವಿನೇಶ್ ಫೋಗಟ್ ಅವರ ಪ್ರಕರಣದಿಂದ ಬೇಸರದಲ್ಲಿದ್ದ ಭಾರತಕ್ಕೆ ಕೊನೆಗೂ ಕುಸ್ತಿಯಲ್ಲಿ ಪದಕ ಸಿಕ್ಕಿದೆ. ಅಮನ್ ಸೆಹ್ರಾವತ್ ಕುಸ್ತಿಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಅಭಿಮಾನಿಗಳಿಗೆ ಸ್ವಲ್ಪ ಸಮಾಧಾನ ಸಿಕ್ಕಂತಾಗಿದೆ.21 ವರ್ಷದ ಅಮನ್ ಸೆಹ್ರಾವತ್ 13-5 ಅಂತರದಲ್ಲಿ ಡೇರಿಯನ್ ಕ್ರೂಜ್ ಅವರನ್ನು ಸೋಲಿಸುವ ಮೂಲಕ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಅಮನ್ ಅಮೋಘ ಪ್ರದರ್ಶನ ನೀಡಿ, ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಮನ್ ಸೆಹ್ರಾವತ್ 57 ಕೆಜಿ ತೂಕ ವಿಭಾಗದಲ್ಲಿ ಪೋರ್ಟೊ ರಿಕೊ ಕುಸ್ತಿಪಟು ಡೇರಿಯನ್ ಟೊಯಿ ಕ್ರೂಜ್ ಅವರನ್ನು 13-5 ರಿಂದ ಸೋಲಿಸಿದರು.
ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಎಂಟನೇ ಕುಸ್ತಿಪಟು ಎನ್ನುವ ಹೆಗ್ಗಳಿಕೆ ಅಮನ್ ಸೆಹ್ರಾವತ್ ಅವರ ಪಾಲಾಗಿದೆ. ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಐದನೇ ಭಾರತೀಯ ಕುಸ್ತಿಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಇದು ಈ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಐದನೇ ಕಂಚು ಮತ್ತು ಆರನೇ ಒಟ್ಟಾರೆ ಪದಕವಾಗಿದೆ. ಭಾರತ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಕುಸ್ತಿಯಲ್ಲಿ ಮೊದಲ ಪದಕ ಗೆದ್ದಿದೆ.
- ಡಿಸ್ಕೌಂಟ್ ಔಷಧ ಮಾರಾಟಕ್ಕೆ ಕಡಿವಾಣ..
- ಬೆಂಗಳೂರಿನಲ್ಲಿ ಮುಂದುವರಿದ ಮಳೆ; ಹಲವೆಡೆ ಜಲಾವೃತ..
- ಮಳೆಗೆ ಧರೆಗೆ ಉರುಳಿದ ಬೃಹತ್ ಮರ..!
- ನಾಗವಾರ -ಟ್ಯಾನರಿ ರೋಡ್ನಲ್ಲಿ ವೈ-ಟಾಪಿಂಗ್ ಕಾಮಗಾರಿ: ವಾಹನ ಸವಾರರ ಪರದಾಟ
- ನಾಗರಹೊಳೆಯಲ್ಲಿ ಪ್ರವಾಸಿಗರಿಗೆ ಹುಲಿರಾಯನ ದರ್ಶನ
2008 ರಿಂದ ಭಾರತ ಕುಸ್ತಿಯಲ್ಲಿ ನಿರಂತರವಾಗಿ ಪದಕ ಗೆಲ್ಲುತ್ತಿದೆ. ಈ ಬಾರಿ ಕುಸ್ತಿಯಲ್ಲಿ ಅಮನ್ ಸೆಹ್ರಾವತ್ ಕೊರಳಿಗೆ ಕಂಚಿನ ಹಾರ ಬಿದ್ದಿದೆ. ಸುಶೀಲ್ ಕುಮಾರ್, ಯೋಗೇಶ್ವರ್ ದತ್, ಸಾಕ್ಷಿ ಮಲಿಕ್, ರವಿ ಕುಮಾರ್ ದಾಹಿಯ, ಬಜರಂಗ್ ಪುನಿಯಾ ಈಗಾಗಲೇ ಒಲಿಂಪಿಕ್ಸ್ನಲ್ಲಿ ಪದಕದ ಸಾಧನೆ ಮಾಡಿದ್ದಾರೆ. ಈ ಸಾಲಿಗೆ ಈಗ ಅಮನ್ ಸೇಹ್ರಾವತ್ ಸೇರುತ್ತಾರೆ.
