BlogLatestTop Storiesಬೆಂಗಳೂರು-Bengaluru

ಬೆಂಗಳೂರಲ್ಲಿ ಕಳ್ಳರ ಹಾವಳಿ : ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕದ್ದೊಯ್ದ ಖದೀಮರು

ಬೆಂಗಳೂರು : ಬೆಂಗಳೂರಲ್ಲಿ ಇತ್ತೀಚಿನ ದಿನಗಳಲ್ಲಿ ವಾಹನಗಳ ಕಳ್ಳತನ ಹೆಚ್ಚಾಗಿದ್ದು ಸರ್ಜಾಪುರದ ಸಂಪುರ ಗೇಟ್ ಬಳಿ ಮನೆ ಮುಂದೆ ನಿಲ್ಲಿಸಿದ ಬೈಕ್ ನನ್ನು ಮೂವರು ಖದೀಮರು ಕದ್ದೊಯ್ದಿದ್ದಾರೆ. ಮನೆ ಮುಂದೆ ನಿಲ್ಲಿಸಿದ ಬೈಕ್ ನ ಹ್ಯಾಂಡಲ್ ಲಾಕ್ ಮುರಿದು ಬಳಿಕ ಬೈಕ್ ನನ್ನು ತಳ್ಳಿಕೊಂಡು ಹೋದ ಹೋಗಿದ್ದಾರೆ ಕಳ್ಳರು.

ಖದೀಮರ ಕೈಚಳಕದ ದೃಶ್ಯಗಳು ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಸರ್ಜಾಪುರದ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್ ಕದ್ದ ಖದೀಮರಿಗೆ ಪೊಲೀಸರು ಬಲೆ ಬೀಸಿದ್ದಾರೆ.

Share with Friends
author avatar
News Desk