Crime NewsLatestಬೆಂಗಳೂರು-Bengaluruರಾಜ್ಯ-Karnataka

ರಾಜ್ಯಕ್ಕೆ ಸಿಹಿ ಸುದ್ದಿ ಕೊಟ್ಟ ದಿವ್ಯ ವಸಂತ- ಈಗ ರಾಜ್ಯದ ಸುದ್ದಿ ವಾಹಿನಿಗಳಲ್ಲಿ ಸದ್ದು

ಬೆಂಗಳೂರು: ರಾಜ್ಯಕ್ಕೆ ಸುದ್ದಿ ಕೊಟ್ಟ ದಿವ್ಯಾ ವಸಂತ್‌ (Divya Vasanth) & ಗ್ಯಾಂಗ್‌ ಹನಿಟ್ರ್ಯಾಪ್‌ ಮಾಡಿ ಪೊಲೀಸರ ಬಲೆಗೆ ಬಿದಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯಲ್ಲಿ ನಿರೂಪಕಿಯಾಗಿದ್ದ (Anchor) ದಿವ್ಯಾ ವಸಂತ್‌ ಬಗ್ಗೆ ಶಾಕಿಂಗ್‌ ನ್ಯೂಸ್ ಹೊರಬಿದಿದ್ದು, ಇದೀಗ ಜೈಲು ಸೇರಿದ್ದಾರೆ. ಯೂಟ್ಯೂಬ್‌ ಚಾನೇಲ್‌ ಹೆಸರು ಹೇಲಿಕೊಂಡು ಹನಿಟ್ರ್ಯಾಪ್‌ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದಿದ್ದಾರೆ.

ದಿವ್ಯಾ ವಸಂತ್‌ ಜೊತೆಗೆ ರಾಜನಕುಂಟೆ ವೆಂಕಟೇಶ್‌, ದಿವ್ಯಾ ವಸಂತ್‌ಳ ಸಹೋದರ ಸಂದೇಶ್ ,ಸಚಿನ್, ಮತ್ತು ಆಕಾಶ್‌ ಇಂದು ಗ್ಯಾಂಗ್‌ ಮಾಡಿಕೊಂಡು ಯೂಟ್ಯೂಬ್‌ ಚಾನೆಲ್‌ ಹೆಸರು ಹೇಳಿಕೊಂಡು ಪ್ರಮುಖ ಸ್ಪಾ, ವೈದ್ಯರು ಮತ್ತು ದುಡ್ಡು ಇರುವ ವ್ಯಕ್ತಿಗಳ ಮೇಲೆ ಹನಿಟ್ರ್ಯಾಪ್‌ ಮಾಡಿ ಲಕ್ಷ ಲಕ್ಷ ಹಣ ವಂಚಿಸುತ್ತಿದ್ದರು. ಇದನ್ನೂ ಓದಿ: ತಮಿಳುನಾಡಿನ ಬಿಎಸ್‌ಪಿ ಅಧ್ಯಕ್ಷ ಹತ್ಯೆ ಕೇಸ್- 8 ಮಂದಿ ಪೊಲೀಸ್‌ ವಶಕ್ಕೆ

-ದಿವ್ಯಾ ವಸಂತ್‌ ಮತ್ತು ಸಂದೇಶ್‌

ಖಾಸಗಿ ಚಾನೇಲ್‌ನಲ್ಲಿ ನಿರೂಪಕಿಯಾಗಿದ್ದ ದಿವ್ಯಾ ವಸಂತ್‌ ಜೊತೆಗೆ ಖಾಸಗಿ ಸುದ್ದಿ ವಾಹಿನಿಯ CEO ಎಂದು ಹೇಳಿಕೊಂಡಿದ್ದ ವೆಂಕಟೇಶ ಹಾಗೂ ದಿವ್ಯಾಳ ಸಹೋದರ ಸಂದೇಶ ಮತ್ತು ಗ್ಯಾಂಗ್ ಖಾಸಗಿ ವಾಹಿನಿಯ ಹೆಸರು ಹೇಳಿಕೊಂಡು ಇಂದಿರಾ ನಗರದ ಸ್ಪಾ ಒಂದರಲ್ಲಿ ನಡೆಯುವ ಚಟುವಟಿಕೆಗಳು ಮತ್ತು ಅಲ್ಲಿ ನಡೆಯುವ ಕಾರ್ಯಗಳ ಬಗ್ಗೆ ವಿಡಿಯೋ ಮಾಡಿದ್ದಾರೆ. ಬಳಿಕ ಬ್ಲಾಕ್‌ಮೇಲ್‌ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಇನ್ನೂ ಸ್ಪಾ ನವರು ಸಹ 8 ಲಕ್ಷ ರೂಪಾಯಿ ಹಣ ಕೊಡಲು ಮಾಂದಾಗಿದ್ದಾರೆ. ಈ ಹಣ ಪಡೆಯುವ ವೇಳೆ ಕಾಕಿ ಕೈಗೆ ಸಿಕ್ಕಿಬಿದಿದ್ದಾರೆ.

ಈ ಗ್ಯಾಂಗ್‌ ಪ್ರಮುಖವಾಗಿ ವೈದ್ಯರು, ಹಣವಂತರ ಮೇಲೆಯೇ ಟಾರ್ಗೆಟ್‌ ಮಾಡಿಕೊಂಡು ಪ್ಲಾನ್‌ ಮಾಡಿಕೊಂಡು ಹಣ ವಂಚಿಸುತ್ತಿದ್ದರು. ಇವರೆಗೆ ಸುಮಾರು 100 ಕ್ಕೂ ಹೆಚ್ಚು ಮಂದಿ ಬಳಿ ಲಕ್ಷ ಲಕ್ಷ ಹಣ ವಂಚಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಚಾರ್ಮಾಡಿ ಘಾಟ್‍ನಲ್ಲಿ ಭೂಮಿ ಬಿರುಕು- ಕಂಗಾಲದ ಕಾಫಿನಾಡು ಜನತೆ

ಸದ್ಯ ವೆಂಕಟೇಶ್‌ ಮತ್ತು ಸಂದೇಶ್‌ ನನ್ನು ಪೊಲೀಸರು ಬಂಧಿಸಿದ್ದು, ಉಳಿದ ಮೂವರಿಗಾಗಿ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಇದನ್ನೂ ಓದಿ: ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್- ಜೆಡಿಎಸ್‌ಗೆ ಸಿಕ್ತು ಸರ್ಕಾರ ವಿರುದ್ಧ ಹೊಸ ಅಸ್ತ್ರ

Share with Friends
author avatar
News Desk