Health | ಆರೋಗ್ಯLatestಬೆಂಗಳೂರು ಗ್ರಾಮಾಂತರಬೆಂಗಳೂರು-Bengaluruರಾಜ್ಯ-Karnataka

ಬೆಂಗಳೂರಿನಲ್ಲಿ ಡೆಂಘಿ ಪ್ರಕರಣ ಹೆಚ್ಚಳ- ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಹೈ ವೋಲ್ಟೇಜ್ ಮೀಟಿಂಗ್

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ (Dengue) ಪ್ರಕರಣಗಳೂ ಹೆಚ್ಚಾಗುತ್ತಿದ್ದು, ಇಂದು ಬಿಬಿಎಂಪಿ(BBMP) ಕೇಂದ್ರ ಕಛೇರಿಯಲ್ಲಿ ಹೈ ವೋಲ್ಟೇಜ್ ಮೀಟಿಂಗ್ ಮಾಡುತ್ತಿದ್ದು, ಖುದ್ದು ಡಿಸಿಎಂ ಡಿಕೆ ಶಿವಕುಮಾರ್ (DK̤ Shivakumar) ನೇತೃತ್ವದಲ್ಲಿ ಇಂದು ಬೆಳಿಗ್ಗೆ 12 ಗಂಟೆಗೆ ಸಭೆ ನಡೆಯಲಿದೆ.

ಬಿಬಿಎಂಪಿ ಪಾಲಿಕೆ ಕೇಂದ್ರ ಕಛೇರಿಯಲ್ಲಿ ಸಭೆ ನಡೆಯಾಲಿದ್ದು, ಸಭೆಯಲ್ಲಿ ಬಿಬಿಎಂಪಿ ಅಯುಕ್ತರು, ಅರೋಗ್ಯ ಇಲಾಖೆ ಅಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿ ಡೆಂಘಿ ತಡೆಗಟ್ಟುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಡಿಸಿಎಂ ಸಭೆ ಹಿನ್ನಲೆ ಈಗಾಗಲೇ ಪೂರ್ವ ಬಾವಿ ಸಭೆಗಳನ್ನು ಬಿಬಿಎಂಪಿ ಅಧಿಕಾರಿಗಳು ನಡೆಸಿದ್ದಾರೆ. ಇದನ್ನೂ ಓದಿ: ಕಾಫಿನಾಡಲ್ಲಿ ಮುಂದುವರೆದ ಮಳೆ ಅಬ್ಬರ- ಮಲೆನಾಡಿನ ಜನರ ಜೀವನ ಅಸ್ತವ್ಯಸ್ತ

ಡೆಂಘೀ ಹರಡುವಿಕೆಯನ್ನು ತಡೆಯುವ ಸಲುವಾಗಿ ಮನೆ ಮನೆಗೆ ತೆರಳಿ ನಾಗರೀಕರಲ್ಲಿ ಜಾಗೃತಿ ಮೂಡಿಸುವುದು, ವಲಯವಾರು ವ್ಯಾಪ್ತಿಯಲ್ಲಿ ಆರೋಗ್ಯ ಪರಿವೀಕ್ಷರು, ಆಶಾ ಕಾರ್ಯಕರ್ತೆಯರು, ಎ.ಎನ್.ಎಂ ಗಳು ಹಾಗೂ ಲಿಂಕ್ ವರ್ಕರ್ಸ್ಗಳು ಸೇರಿದಂತೆ 1000 ಮನೆಗಳಿಗೊಂದು ಬ್ಲಾಕ್ ರಚಿನೆ ಮಾಡುವಂತೆ ಮತ್ತು ಲಾರ್ವಾ ಇರುವ ತಾಣಗಳನ್ನು ಗುರುತಿಸುವುದು, ನಾಗರೀಕರಲ್ಲಿ ಅರಿವು ಮೂಡಿಸುವುದು, ಯಾರಿಗಾದರು ಜ್ವರ ಬಂದಿದ್ದಲ್ಲಿ ಅಂತಹವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಮಾಡಿಕೊಳ್ಳುವಂತೆ ಅರಿವು ಮೂಡಿಸುವುದು ಈ ತಂಡಗಳ ಜವಾಬ್ದಾರಿಯಾಗಿದ್ದು ಈ ಬಗ್ಗೆ ಡಿಸಿಎಂಗೆ ವರದಿ ನೀಡಲಾಗುವುದು. ಇದನ್ನೂ ಓದಿ: ಕಾಲೇಜಿನಲ್ಲಿ ಹಿಜಬ್‌ ನಿಷೇಧ: 9 ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿ ವಜಾ

https://youtu.be/qanFQbMQKMM?si=NK1MZgum0KqFe9Qb

ವಲಯವಾರು ಮೈಕ್ರೋ ಪ್ಲಾನ್ ಮಾಡಿಕೊಂಡು ಡೆಂಘೀ ಹರಡುವಿಕೆಯನ್ನು ನಿಯಂತ್ರಿಸುವಂತೆ ಸೂಚನೆ ನೀಡಲಾಗಿದೆ. ಎನ್.ಎಸ್ 1 ಟೆಸ್ಟ್ ಕಿಟ್ ಮೂಲಕ ಡೆಂಘೀ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜನ ಸಂಖ್ಯೆ ಹೆಚ್ಚಿರುವ ಪ್ರದೇಶ ಹಾಗೂ ತಗ್ಗು ಪ್ರದೇಶಗಳಲ್ಲಿರುವ 14 ಲಕ್ಷ ಮನೆಗಳಿಗೆ 15 ದಿನಕ್ಕೊಮ್ಮೆ ಭೇಟಿ ನೀಡಬೇಕು. ಲಾರ್ವಾ ಉತ್ಪತ್ತಿ ತಾಣಗಳು ಹಾಗೂ ನಾಗರೀಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮತ್ತು ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ಡೆಂಘೀ ಪ್ರಕರಣಗಳನ್ನು ನಿಯಂತ್ರಿಸಬೇಕು. ಹೆಚ್ಚು ಪ್ರಕರಣಗಳಿರುವ ಪ್ರದೇಶಗಳಲ್ಲಿ ಸೂಕ್ತ ಕ್ರಮವಹಿಸುವಂತೆ ಎಚ್ಚರಿಕೆ ನೀಡಲಾಗಿದೆ.

https://youtu.be/si9rs-L1mh0?si=x6qI8g8W3F3DTyAs

ಇನ್ನೂ ರಾಜಧಾನಿ ಬೆಂಗಳೂರಿನ ಮಹದೇವಪುರ, ದಕ್ಷಿಣ ವಲಯ ಹಾಗೂ ಪೂರ್ವ ವಲಯಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಿರುವ ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಆರೋಗ್ಯ ಸ್ಥಿರ

ನಗರದಲ್ಲಿ ದಾಖಲಾದ ಪ್ರಕರಣಗಳು

  • ಬೊಮ್ಮನಹಳ್ಳಿ: 122
    * ಪೂರ್ವ: 218
    * ಮಹದೇವಪುರ: 386
    * ಆರ್.ಆರ್ ನಗರ: 75
    * ದಕ್ಷಿಣ: 190
    * ಪಶ್ಚಿಮ: 141
    * ಯಲಹಂಕ: 90
    * ದಾಸರಹಳ್ಳಿ: 08

ಒಟ್ಟು: 1230 ಪ್ರಕರಣ

ವರ್ಷವಾರು ಡೆಂಘೀ ಪ್ರಕರಣಗಳ ವಿವರ:

  • ವರ್ಷ – ಪ್ರಕರಣಗಳು
    * 2019 – 9434
    * 2020 – 1127
    * 2021 – 1629
    * 2022 – 2335
    * 2023 – 11136 (2023 ಜನವರಿಯಿಂದ ಜೂನ್ ವರೆಗೆ – 732 ಪ್ರಕರಣ)
    * 2024 – 1230 (2024 ಜನವರಿಯಿಂದ ಜೂನ್ ವರೆಗೆ)
Share with Friends
author avatar
News Desk