LatestWeatherಕೊಡಗು-Kodaguರಾಜ್ಯ-Karnataka

ಮಂಗಾರು ಮಳೆಯಿಂದಾಗಿ ಕೆಆರ್‌ಎಸ್‌ ಡ್ಯಾಂ ಒಳಹರಿವಿನಲ್ಲಿ ಹೆಚ್ಚಳ

ಕೊಡಗು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಕೆಆರ್‌ಎಸ್ ಡ್ಯಾಂ (KRS Dam) ಒಳಹರಿವಿನಲ್ಲಿ‌ ಹೆಚ್ಚಳವಾಗಿದೆ.

ಸದ್ಯ ಕಾವೇರಿ (Kaveri) ಜಲಾನಯನ ಪ್ರದೇಶದಲ್ಲಿ ಸಹ ಮುಂಗಾರು ಚುರುಕು ಪಡೆದುಕೊಂಡಿದ್ದು, ಎರಡು ದಿನಗಳಿಂದ ಈ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಸ್ವಲ್ಪ ಪ್ರಮಾಣದಲ್ಲಿ ಮಳೆ ಬೀಳುತ್ತಿದೆ. ಹೀಗಾಗಿ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.

ಕೆಆರ್‌ಎಸ್ ಡ್ಯಾಂ ಒಳಹರಿವಿನ ಪ್ರಮಾಣ 2,241 ಕ್ಯೂಸೆಕ್ ಇದೆ. ನಿನ್ನೆಗಿಂತ ಇಂದು ಒಳಹರಿವಿನಲ್ಲಿ 1,000 ಕ್ಯೂಸೆಕ್ ಹೆಚ್ಚಳವಾಗಿದೆ. ಇದನ್ನೂ ಓದಿ: ಸಂಸದರಾಗಿ ಕೈಯಲ್ಲಿ ಸಂವಿಧಾನ ಪ್ರತಿ ಹಿಡಿದು ರಾಹುಲ್‌ ಗಾಂಧಿ ಪ್ರಮಾಣ ವಚನ ಸ್ವೀಕಾರ

https://youtu.be/97Xqp_kxIBQ?si=2afpzZD71Lfm9jzh

124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ 87.90 ಅಡಿ ನೀರಿದೆ. 49.452 ಟಿಎಂಸಿ ಗರಿಷ್ಠ ಸಾಮಾರ್ಥ್ಯದ ಕೆಆರ್‌ಎಸ್‌ನಲ್ಲಿ 14.724 ಟಿಎಂಸಿ ನೀರು ಸಂಗ್ರಹವಾಗಿದೆ. ಕೆಆರ್‌ಎಸ್ ಡ್ಯಾಂನ ಒಳಹರಿವು 2,241 ಕ್ಯೂಸೆಕ್ ಹಾಗೂ ಡ್ಯಾಂನ ಹೊರ ಹರಿವು 986 ಕ್ಯೂಸೆಕ್‌ ಇದೆ.

https://youtu.be/OvXrOZlPR8I?si=spqM4Ru089f93Y71

Share with Friends
author avatar
News Desk