EntertainmentLatestಬೆಂಗಳೂರು-Bengaluruರಾಜ್ಯ-Karnatakaಸ್ಯಾಂಡಲ್​ವುಡ್-Sandalwood

ಜೈಲಲ್ಲಿ ದರ್ಶನ್‍ನನ್ನು ಭೇಟಿಯಾದ ಪುತ್ರ ವಿನೀಶ್‌, ಪತ್ನಿ ವಿಜಯಲಕ್ಷ್ಮಿ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್‍ನನ್ನು (Darshan) ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi) ಹಾಗೂ ಮಗ ವಿನೀಶ್, ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಭೇಟಿಯಾಗಿದ್ದು, ಮಗನನ್ನು ನೋಡಿ ದರ್ಶನ್‌ ಅವರು ಭಾವುಕರಾಗಿದ್ದಾರೆ.

ದರ್ಶನ್ ಅವರು ಜೈಲಿಗೆ ಪತ್ನಿ ಹಾಗೂ ಪುತ್ರ ಬರುತ್ತಿದ್ದಂತೆ ಭಾವುಕರಾಗಿದ್ದಾರೆ. ಈ ವೇಳೆ ಮಗನನ್ನು ತಬ್ಬಿಕೊಂಡು ಕೆಲ ಹೊತ್ತು ದರ್ಶನ್ ಕಣ್ಣೀರು ಹಾಕಿದ್ದಾರೆ. ಅಳುತ್ತಲೇ ನಡೆದ ಘಟನೆಯ ಬಗ್ಗೆ ಮಾತಾಡಿದ್ದಾರೆ. ಅರ್ಧ ಗಂಟೆಯಲ್ಲಿ ಪತ್ನಿ ವಿಜಯಲಕ್ಷ್ಮಿಗಿಂತ ಹೆಚ್ಚಿನ ಸಮಯ ಮಗನ ಜೊತೆಯೇ ದರ್ಶನ್ ಕಳೆದಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.ಇದನ್ನೂ ಓದಿ: ದರ್ಶನ್‌ ಭೇಟಿಗೆ ಪರಪ್ಪನ ಅಗ್ರಹಾರಕ್ಕೆ ಬಂದ ನಟ ವಿನೋದ್ ಪ್ರಭಾಕರ್

https://youtu.be/OvXrOZlPR8I?si=miqjz9LiArwV4rA_

ದರ್ಶನ್ ಗ್ಯಾಂಗ್‍ನಿಂದ ನಡೆದಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Murder Case) ರಾಜ್ಯದ ಜನರನ್ನ ಬೆಚ್ಚಿ ಬೀಳಿಸಿತ್ತು. ರೇಣುಕಾಸ್ವಾಮಿ ದರ್ಶನ್‍ನ ಗೆಳತಿ ನಟಿ ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕೆ ಆತನನ್ನು ಅಪಹರಿಸಿ, ಬೆಂಗಳೂರಿನ ಆರ್‍ಆರ್ ನಗರದ ಪಟ್ಟಣಗೆರೆ ಶೆಡ್‍ನಲ್ಲಿ ರೇಣುಕಾಸ್ವಾಮಿಯನ್ನ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿದೆ ಎಂಬ ಸತ್ಯ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ದರ್ಶನ್‌ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಇದನ್ನೂ ಓದಿ: ತೆಲಂಗಾಣದಲ್ಲಿ ಮತ್ತೊಬ್ಬ ಬಿಆರ್​ಎಸ್​ ಶಾಸಕ ಕಾಂಗ್ರೆಸ್​ಗೆ ಸೇರ್ಪಡೆ

https://youtu.be/si9rs-L1mh0?si=DPnumIQSgJEBFnDM
Share with Friends
author avatar
News Desk