Latestರಾಷ್ಟ್ರೀಯ-National

ಕುವೈತ್‌ ಅಗ್ನಿ ದುರಂತ: 45 ಭಾರತೀಯರ ಶವಗಳೊಂದಿಗೆ ಕೇರಳಕ್ಕೆ ಬಂದಿಳಿದ ಸೇನಾ ವಿಮಾನ

ಕೊಚ್ಚಿ: ಕುವೈತ್‌ನ (Kuwait) ಮುಂಗಾಫ್​ನಲ್ಲಿ ಸಂಭವಿಸಿದ ಅಗ್ನಿ ಅವಘಡ(Fire Accident)ದಲ್ಲಿ ಸಾವನ್ನಪ್ಪಿದ್ದ 45 ಭಾರತೀಯರ ಶವಗಳೊಂದಿಗೆ ವಾಯು ಸೇನಾ ವಿಮಾನ ಕೊಚ್ಚಿಗೆ (kochi) ಬಂದಿಳಿದಿದೆ.

ಆಗ್ನಿ ದುರಂತದಲ್ಲಿ ಒಟ್ಟಾರೆಯಾಗಿ 45 ಮಂದಿ ಮೃತಪಟ್ಟಿದ್ದರು. ಇದೀಗ ಗಾಯಗೊಂಡ ವ್ಯಕ್ತಿಯೊಬ್ಬರು ಸಹ ಮೃತಪಟ್ಟಿದ್ದು, ಸಾವಿನ ಸಂಖ್ಯೆ 46 ಕ್ಕೆ ಏರಿಕೆಯಾಗಿದೆ. ಮೃತದೇಃಗಳನ್ನು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಹೋಗಿರುವ ವಿಮಾನ ಬಳಿಕ ದೆಹಲಿಗೆ ತೆರಳಲಿದೆ. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ: ಪ್ರದೀಪ್‌ ಈಶ್ವರ್‌

ಕುವೈತ್​ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟವರಲ್ಲಿ 33 ಮಂದಿ ಕೇರಳದವರು, ವಿದೇಶಾಂಗ ವ್ಯವಹಾರಗಳ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಕುವೈತ್ ಬೆಂಕಿಯಲ್ಲಿ ಗಾಯಗೊಂಡ ಭಾರತೀಯರಿಗೆ ಸಹಾಯ ಮಾಡಲು ಹಾಗೂ ಮೃತದೇಹಗಳನ್ನು ತರಲು ಕುವೈತ್​ಗೆ ಹೋಗಿದ್ದರು.

ನಡೆದಿದ್ದೇನು?
ಕುವೈತ್‌ನ ಮುಂಗಾಫ್​ ಕಟ್ಟದಲ್ಲಿ 160 ಮಂದಿ ವಾಸವಾಗಿದ್ದರು, ಬುಧವಾರ ಮುಂಜಾನೆ 4.30ಕ್ಕೆ ಕಾರ್ಮಿಕ ಶಿಬಿರದ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ಇಡೀ ಕಟ್ಟಡವನ್ನು ವ್ಯಾಪಿಸಿ ದುರಂತ ಸಂಭವಿಸಿದೆ. ಘಟನೆಯಲ್ಲಿ ದಕ್ಷಿಣ ಭಾರತೀಯರಲ್ಲದೆ, ಉತ್ತರ ಪ್ರದೇಶದ ಮೂವರು, ಒಡಿಶಾದ ಇಬ್ಬರು ಮತ್ತು ಬಿಹಾರ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಹರಿಯಾಣದಿಂದ ತಲಾ ಒಬ್ಬರು ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಯಾತ್ರಾರ್ಥಿಗಳ ಬಸ್‌ ದಾಳಿ ಪ್ರಕರಣ – 50 ಸ್ಥಳೀಯರನ್ನು ವಶಕ್ಕೆ ಪಡೆದ ಪೊಲೀಸರು

https://youtu.be/scaejbJlrAQ?si=FvoDsS3q1Om4-IBE

ಕೇರಳ ಸೇರಿ ತಮಿಳುನಾಡಿನ 7 ಜನ ಆಂಧ್ರ ಪ್ರದೇಶದ 3 ಹಾಗೂ ಬಿಹಾರ, ಒಡಿಶಾ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಾರ್ಖಂಡ್, ಹರ್ಯಾಣ ಪಂಜಾಬ್‌ನ ಹಾಗೂ ಪಶ್ಚಿಮ ಬಂಗಾಳದ ತಲಾ ಒಬ್ಬರು ಈ ದುರಂತದಲ್ಲಿ ಮಡಿದಿದ್ದಾರೆ. ಇತ್ತ ವಿದೇಶಾಂಗ ಇಲಾಖೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ನಿನ್ನೆಯೇ ಕುವೈತ್‌ಗೆ ಭೇಟಿ ನೀಡಿ ಅಲ್ಲಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಮೂಲದ ಗಾಯಾಳುಗಳ ಕ್ಷೇಮ ವಿಚಾರಿಸಿದ್ದರು.ಇದನ್ನೂ ಓದಿ: 3 ನೇಬಾರಿಗೆ ಪ್ರಧಾನಿಯಾದ ಬಳಿಕ ಮೋದಿ ಮೊದಲ ಪ್ರವಾಸ- G7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿ ತಲುಪಿದ ಪ್ರಧಾನಿ

https://youtu.be/MqYiVxcb02I?si=Fvx9mG5cTJ_ViZVv
Share with Friends
author avatar
News Desk