EntertainmentLatest

ನಟ ದರ್ಶನ್ ಮನೆ ಬಳಿ ಪೊಲೀಸ್ ಬಿಗಿ ಬಂದೋಬಸ್ತ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamu Murder Case) ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಸ್ಯಾಂಡಲ್‍ವುಡ್ ನಟ ದರ್ಶನ್ (Challenging Star Darshan) ಮನೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಯಾವುದೇ ಆಹಿತಕರ ಘಟನೆಗಳು ನಡೆಯದಂತೆ ದರ್ಶನ್‌ ಮನೆಯ ಎಡ ಹಾಗೂ ಬಲ ಭಾಗದಲ್ಲಿ ಬ್ಯಾರಿಕೇಟ್‌ ಅಳವಡಿಸಿ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಅಲ್ಲದೇ ದರ್ಶನ್ ಮನೆಯ ಅಕ್ಕಪಕ್ಕದ ಮನೆಗೆ ಹೋಗುವ ಹಾಗೂ ಬರುವವರನ್ನು ಕೂಡ ಪೊಲೀಸರು ವಿಚಾರಿಸಿ ಕಳುಹಿಸುತ್ತಿದ್ದಾರೆ. ಇದನ್ನೂ ಓದಿ: ಇಲಿ ಸಾಯಿಸೋಕು ಹಿಂಜರಿಯುತ್ತಿದ್ದ ಹುಡುಗಿ ಒಬ್ಬರನ್ನ ಕೊಲೆ ಮಾಡ್ತಾರೆ ಇದು ಸುಳ್ಳು: ಪವಿತ್ರಾ ಗೌಡ ಮಾಜಿ ಪತಿ

https://youtu.be/1_x8EQ5Qqp8?si=np4mmXNBo7cYGaLC

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಜನರನ್ನು ಬಂಧಿಸಲಾಗಿದೆ. ದರ್ಶನ್ ಬಂಧನವಾಗುತ್ತಿದ್ದಂತೆಯೇ ಅಭಿಮಾನಿಗಳು ನಟನ ಪರ ನಿಂತಿದ್ದಾರೆ. ಮೊನ್ನೆ ದರ್ಶನ್ ಬಂಧಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬರುತ್ತಿದ್ದಂತೆಯೇ ಠಾಣೆ ಮುಂಭಾಗ ಅಭಿಮಾನಿಗಳ ದಂಡೇ ನೆರೆದಿತ್ತು.ಇದನ್ನೂ ಓದಿ: ಕೋರ್ಟ್ ಆವರಣದಲ್ಲೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ

https://youtu.be/1_x8EQ5Qqp8?si=np4mmXNBo7cYGaLC

ಇನ್ನು ಕೊಲೆ ಪ್ರಕರಣ ಸಂಬಂಧ ಬುಧವಾರ ಸುಮ್ಮನಹಳ್ಲಿ ಮೋರಿ ಬಳಿ ಆರೋಪಿಗಳ ಸ್ಥಳ ಮಹಜರು ನಡೆಸಲಾಗಿತ್ತು. ಈ ವೇಳೆಯೂ ಅಭಿಮಾನಿಗಳು ದರ್ಶನ್ ನೋಡಲು ಬಂದಿದ್ದರು. ಪೊಲೀಸರು ಅಭಿಮಾನಿಗಳನ್ನು ಚದುರಿಸಲು ಕೊನೆಗೆ ಲಾಠಿ ಪ್ರಹಾರ ನಡೆಸಬೇಕಾಯಿತು. ಇದನ್ನೂ ಓದಿ:

Share with Friends
author avatar
News Desk