Crime NewsLatestವಿದೇಶ-International

ಕುವೈತ್‌ನಲ್ಲಿ ಅಗ್ನಿ ಅವಘಡ- 4 ಭಾರತೀಯರು ಸೇರಿ 35 ಜನರ ಸಜೀವ ದಹನ

ಕುವೈತ್‌: ಮಲಯಾಳಿ ಉದ್ಯಮಿಗೆ (Malayali) ಸೇರಿದ ಕಟ್ಟಡವೊಂದರಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿದ್ದು, 35 ಮಂದಿ ಸಜೀವದಹನವಾಗಿರುವ ಘಟನೆ ಕುವೈತ್‌ನಲ್ಲಿ (Kuwait) ನಡೆದಿದೆ.

ಮೃತರಲ್ಲಿ ನಾಲ್ವರು ಭಾರತೀಯರಾಗಿದ್ದಾರೆ. ದಕ್ಷಿಣ ಕುವೈತ್‌ನ ಮಂಗಾಫ್ ನಗರದಲ್ಲಿ ಕಟ್ಟಡದಲ್ಲಿ ಅವಘಡ ಸಂಭವಿಸಿದೆ, ಈ ಕಟ್ಟಡದಲ್ಲಿರುವವರು ಹೆಚ್ಚಿನವರು ಮಲಯಾಳಿಗಳು ಎನ್ನಲಾಗಿದೆ. ಮೃತರಲ್ಲಿ ಇಬ್ಬರು ತಮಿಳುನಾಡು ಮತ್ತು ಉತ್ತರ ಭಾರತದವರು ಎನ್ನಲಾಗಿದೆ. ಇದನ್ನೂ ಓದಿ: ಬೀದರ್‌ನಲ್ಲಿ ಭಾರೀ ಮಳೆ-ಕೆರೆ ಒಡೆದು ಜಮೀನಿಗೆ ನುಗ್ಗಿದ ನೀರು

ಸದ್ಯ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಗಾಯಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುವೈತ್ ಆರೋಗ್ಯ ಸಚಿವಾಲಯ ತಳಿಸಿದೆ.

ಬೆಂಕಿ ಕಾಣಿಸಿಕೊಂಡಿದ್ದು, ಹೇಗೆ?
ಅಡುಗೆ ಮನೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ, ಬೆಂಕಿಯನ್ನು ಕಂಡು ಕೆಲವರು ಅಪಾರ್ಟ್​ಮೆಂಟ್​ನಿಂದ ಕೆಳಗೆ ಹಾರಿ ಸಾವನ್ನಪ್ಪಿದ್ದಾರೆ, ಇನ್ನೂ ಕೆಲವರು ಬೆಂಕಿಯಲ್ಲೇ ಬೆಂದು ಹೋಗಿದ್ದಾರೆ. ಇದನ್ನೂ ಓದಿ:ಇನ್‍ಸ್ಟಾದಲ್ಲಿ ದರ್ಶನ್ ಅನ್‍ಫಾಲೋ‌, ಡಿಪಿ ಡಿಲೀಟ್ ಮಾಡಿದ ಪತ್ನಿ ವಿಜಯಲಕ್ಷ್ಮಿ!

https://youtu.be/0XTngRgbVWg?si=su_Rd5vNrLfK3GhH

ಈ ಕಟ್ಟಡದಲ್ಲಿ ಸುಮಾರು 195 ಮಂದಿ ವಾಸಿಸುತ್ತಿದ್ದರು, ಈ ಕಟ್ಟಡವು ಕೆಜಿ ಅಬ್ರಹಾಂ ಮಾಲಿಕತ್ವದಲ್ಲಿದೆ. ಬೆಂಕಿಯನ್ನು ಹತೋಟಿಗೆ ತರಲಾಗಿದ್ದರೂ, ಇನ್ನೂ ಕೆಲವರು ಒಳಗೆ ಸಿಲುಕಿರುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ:ಜೂನ್‌ 24 ರಂದು 18ನೇ ಲೋಕಸಭೆಯ ಅಧಿವೇಶನ ಆರಂಭ

Share with Friends
author avatar
News Desk