EntertainmentLatestಸ್ಯಾಂಡಲ್​ವುಡ್-Sandalwood

ಯುವರಾಜ್‌ ಕುಮಾರ್‌ ದಾಂಪತ್ಯದಲ್ಲಿ ಬಿರುಕು- ರಾಜ್ ಕುಟುಂಬದಲ್ಲಿ ಮೊದಲ ಡಿವೋರ್ಸ್ ಗಾಳಿ

ಸ್ಯಾಂಡಲ್‌ವುಡ್‌ನಲ್ಲಿ ಡಿವೋರ್ಸ್ ಪ್ರಕರಣಗಳು ಹೆಚ್ಚಾಗಿದ್ದು, ಇತ್ತಿಚೆಗೆ ಖ್ಯಾತ ಹಾಡುಗಾರ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್‌ ಪಡೆದಿದ್ದಾರೆ. ಇದೀಗ ಡಿವೋರ್ಸ್ ಹೊಸ್ತಿಲಿಗೆ ಸ್ಯಾಂಡಲ್ವುಡ್ ನಲ್ಲಿ ಇನ್ನೊಬ್ಬ ನಟ ಮುಂದಾಗಿದ್ದಾರೆ.

ನಟ ರಾಘವೇಂದ್ರ ರಾಜ್‌ಕುಮಾರ್‌ (Raghavendra Rajkumar) ಪುತ್ರ ಯುವರಾಜ್‌ಕುಮಾರ್ (Yuva Rajkumar) ದಾಂಪತ್ಯದಲ್ಲಿ ಬಿರುಕಾಗಿದೆ. ಪತ್ನಿ ಶ್ರೀದೇವಿ (Sridevi) ಡಿವೋರ್ಸ್ ನೀಡಲು ಜೂನ್ 6ರಂದು ಬೆಂಗಳೂರಿನ ಫ್ಯಾಮಿಲಿ ಕೋರ್ಟ್‌ಗೆ ಯುವ ಅರ್ಜಿ ಸಲ್ಲಿಸಿದ್ದಾರೆ. ಪತ್ನಿ ಶ್ರೀದೇವಿಗೆ ಕೋರ್ಟ್‌ನಿಂದ ಈಗಾಗಲೇ ಡಿವೋರ್ಸ್ ನೋಟಿಸ್ ಕೂಡ ಕಳುಹಿಸಲಾಗಿದೆ.

https://youtu.be/N__BjhNj9eo?si=MIWXdyQ11fcR-r0j

ಮೈಸೂರು ಮೂಲದ ಶ್ರೀದೇವಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಅವರು ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಜೂನ್ 6ರಂದು ಫ್ಯಾಮಿಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಯುವರಾಜ್‌ಕುಮಾರ್, ಜುಲೈ 4ರಂದು ವಿಚಾರಣೆಗೆ ನಿಗದಿಯಾಗಿದೆ.

ಕಳೆದ 6 ತಿಂಗಳಿಂದ ಇಬ್ಬರ ಡಿವೋರ್ಸ್ ಸುದ್ದಿ ಹರಿದಾಡುತ್ತಿತ್ತು. ಕೆಲ ತಿಂಗಳುಗಳಿಂದ ಇಬ್ಬರೂ ಜೊತೆಯಾಗಿ ಕೂಡ ವಾಸಿಸುತ್ತಿಲ್ಲ. ಇನ್ನೂ ‘ಯುವ’ ಸಿನಿಮಾದ ಪ್ರಚಾರ ಕಾರ್ಯದಲ್ಲಿಯೂ ಕೂಡ ಶ್ರೀದೇವಿ ಭಾಗಿಯಾಗಿರಲಿಲ್ಲ. ಸದ್ಯ ಶ್ರೀದೇವಿ ಅವರು ವಿದೇಶದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.

https://youtu.be/vqst4url-zg?si=5VXLnqEY8a5rCuAF

ಹಲವು ವರ್ಷಗಳ ಪ್ರೀತಿಗೆ ಮೈಸೂರು ಮೂಲದ ಶ್ರೀದೇವಿ ಜೊತೆ 2018ರಲ್ಲಿ ಯುವರಾಜ್‌ಕುಮಾರ್ ನಿಶ್ಚಿತಾರ್ಥ ಜರುಗಿತ್ತು. 2019ರ ಮೇ 26ರಂದು ಅದ್ಧೂರಿಯಾಗಿ ಇಬ್ಬರ ಮದುವೆ ಜರುಗಿತ್ತು. ಶ್ರೀದೇವಿ ಅವರು ರಾಜ್‌ ಸಕಾಡೆಮಿಯನ್ನು ನಡೆಸಿಕೊಂಡು ಹೋಗುತ್ತಿದ್ದರು. ಮುದುವೆಯಾಗಿ ನಾಲ್ಕು ವರ್ಷಗಳು ಕಳೆದ ಬಳಿಕ ಫುಲ್ ಸ್ಟಾಪ್ ಇಡುತ್ತಿದ್ದಾರೆ.

ಈಗಾಗಲೇ ಶ್ರೀದೇವಿಗೆ ಅವರಿಗೆ ಯುವರಾಜ್‌ ಕುಮಾರ್‌ ನೋಡಿಸ್‌ ನೀಡಿದ್ದಾರೆ. ಸದ್ಯ ಶ್ರೀದೇವಿ ಅವರು ಅಮೆರಿಕಾದಲ್ಲಿ ನೆಲೆಸಿದ್ದಾರೆ.

Share with Friends
author avatar
News Desk