Latestರಾಷ್ಟ್ರೀಯ-National

ಇಂದು ಮೋದಿ 3.O ಸರ್ಕಾರದ ಮೊದಲ‌ ಕ್ಯಾಬಿನೆಟ್ ಸಭೆ

ನವದೆಹಲಿ: ಮೂರನೇ ಬಾರಿಗೆ ಪ್ರಧಾನಿಯಾದ (Prime Minster) ನಂತರ ಮೊದಲ ಕ್ಯಾಬಿನೆಟ್‌ ಸಭೆ (Cabinet Meeting) ಇಂದು ಸಂಜೆ 5 ಗಂಟೆಗೆ ಪ್ರಧಾನಿ ಅಧಿಕೃತ ನಿವಾಸದಲ್ಲಿ ನಡೆಯಲಿದೆ.

ಮೊದಲ ಸಭೆಯಲ್ಲಿ ಮುಂದಿನ 100 ದಿನಗಳ ಕಾರ್ಯಸೂಚಿ ಬಗ್ಗೆ ನರೇಂದ್ರ ಮೋದಿ (Narendra Modi) ತಿಳಿಸಲಿದ್ದಾರೆ. ಜೊತೆಗೆ ಇಂದು ಸಂಜೆಯೊಳಗೆ ಕೇಂದ್ರದ ಕ್ಯಾಬಿನೇಟ್ ಖಾತೆಗಳನ್ನು ಸಹ ಹಂಚಿಕೆ ಮಾಡಲಾಗುತ್ತದೆ. ಇದನ್ನೂ ಓದಿ: ಇಂದು ಪ್ರಜ್ವಲ್ ರೇವಣ್ಣ ಎಸ್‍ಐಟಿ ಕಸ್ಟಡಿ ಅಂತ್ಯ – ಮತ್ತೊಮ್ಮೆ ಕಸ್ಟಡಿಗೆ ಕೇಳುವ ಸಾಧ್ಯತೆ

ಸದ್ಯ ಪ್ರಮುಖ ಖಾತೆಗಳನ್ನು ಬಿಜೆಪಿ ತಮ್ಮಲ್ಲೆ ಇಟ್ಟುಕೊಳ್ಳಲಿದೆ. ರಕ್ಷಣಾ ಖಾತೆ, ಗೃಹಖಾತೆ, ಹಣಕಾಸು ಖಾತೆ, ವಿದೇಶಾಂಗ, ಹೆದ್ದಾರಿ, ಮೂಲಸೌಕರ್ಯ, ಐಟಿ, ಶಿಕ್ಷಣ ಖಾತೆಗಳು ಬಿಜೆಪಿ ಬಳಿಯೇ ಉಳಿಯಲಿದೆ.

https://youtu.be/vqst4url-zg?si=ughqLYx43b3KUbLc

ಬರೋಬ್ಬರಿ 25 ವರ್ಷಗಳ ಬಳಿಕ ಜೆಡಿಎಸ್‌ಗೆ ಕೇಂದ್ರದಲ್ಲಿ ಸ್ಥಾನ ಸಿಕ್ಕಿದ್ದು, ಕುಮಾರಸ್ವಾಮಿಯವರು ಪ್ರಬಲ ಖಾತೆಯ ನಿರೀಕ್ಷೆಯಲ್ಲಿದ್ದಾರೆ.ಇದನ್ನೂ ಓದಿ: ಸೆಂಟ್ರಲ್ ಜೈಲ್ ನಲ್ಲಿ ಗ್ಯಾಂಗ್ ವಾರ್- ಸಿನಿಮಾ ಶೈಲಿಯಲ್ಲಿ ನಡಿತ್ತು ಗುಂಪುಗಳ ನಡುವೆ ಅಟ್ಯಾಕ್‌

ಪ್ರಲ್ಹಾದ್ ಜೋಶಿಗೆ & ನಿರ್ಮಾಲ ಸೀತಾರಾಮನ್ ಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಸಿಗಲಿದೆ. ಇನ್ನೂ, ಶೋಭಾ ಮತ್ತು ಸೋಮಣ್ಣಗೆ ರಾಜ್ಯಖಾತೆಯ ಸ್ಥಾನ ಮಾನ ಸಿಗಲಿದೆ.

https://youtu.be/N__BjhNj9eo?si=rv6aUN9etOAVxyVs
Share with Friends
author avatar
News Desk