Crime NewsLatestಬೆಳಗಾವಿ-Belagaviರಾಜ್ಯ-Karnataka

ಬರ್ತ್‍ಡೇ ಪಾರ್ಟಿಗೆಂದು ಕರೆದು ಸ್ನೇಹಿತನ ಕೊಲೆ

ಬೆಳಗಾವಿ: ಸ್ನೇಹಿತನನ್ನು ಬರ್ತ್‍ಡೇ (Birthday) ಪಾರ್ಟಿಗೆ ಕರೆದು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ನಡೆದಿದೆ.

ಹತ್ಯೆಗೀಡಾದ ಯುವಕನನ್ನು ಬಸವರಾಜ್ ಮುದ್ದಣ್ಣವರ (23) ಎಂದು ಗುರುತಿಸಲಾಗಿದೆ. ಬಸವರಾಜ್ ಎಂಎಸ್‍ಡಬ್ಲ್ಯೂ (MSW) ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಸ್ನೇಹಿತ ಮಲ್ಲಿಕಾರ್ಜುನ್ ಎಂಬಾತ ಬಸವರಾಜ್ ನನ್ನು ಬರ್ತ್ ಡೇ ಪಾರ್ಟಿಗೆ ಕರೆದಿದ್ದ. ಬಳಿಕ ಆತ ಬರುತ್ತಿದ್ದಂತೆ ಗಲಾಟೆ ಆರಂಭಿಸಿ, ಐವರು ಸ್ನೇಹಿತರು ಸೇರಿ ಆತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಎನ್‌ಡಿಎ ಮೈತ್ರಿಕೂಟದ ಸಂಖ್ಯೆ 303ಕ್ಕೆ ಏರಿಕೆ!

https://youtu.be/EN_1kRxjo-4?si=6R7axOWr9ELputm7

ತೀವ್ರವಾಗಿ ಗಾಯಗೊಂಡ ಬಸವರಾಜ್‍ನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ.ಇದನ್ನೂ ಓದಿ: ಉತ್ತರಾಖಂಡ ಹಿಮಪಾತ ಕೇಸ್- ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿ ಉದ್ಯೋಗಿ ಸಾವು

https://youtu.be/IrlpjBl1yQk?si=xDHJ13FmVmeR8Dnh

ಮುರಗೋಡ ಪೊಲೀಸ್ (Muragod Police) ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ರಾಹುಲ್ ಗಾಂಧಿಗೆ ವಿಪಕ್ಷ ನಾಯಕನ ಸ್ಥಾನ ಫಿಕ್ಸ್‌

Share with Friends
author avatar
News Desk