Crime NewsLatestಬಾಗಲಕೋಟೆರಾಜ್ಯ-Karnataka

ಬಾಗಲಕೋಟೆ ಅಕ್ರಮ ಗರ್ಭಪಾತ ಪ್ರಕರಣ: ಕಂದಾಯ ಇಲಾಖೆಯ ಅಧಿಕಾರಿಯಿಂದ ಪ್ರತಿ ತಿಂಗಳು ಆರೋಪಿ ಖಾತೆಗೆ ಹಣ ವರ್ಗ

ಬಾಗಲಕೋಟೆ: ಆರೋಪಿ ಆಯಾ ಕವಿತಾ ಬಾಡನವರ ಗರ್ಭಪಾತ (Abortion) ದಂಧೆಗೆ ಮಹಾರಾಷ್ಟ್ರ ಮೂಲದ ಮಹಿಳೆ ಮೃತಪಟ್ಟಿದ್ದು, ಪ್ರಕರಣದ ತನಿಖೆಯನ್ನು ಪೊಲೀಸರು (Police) ಚುರುಕುಗೊಳಿಸಿದ್ದಾರೆ. ಇದೀಗ ಪ್ರತಿ ತಿಂಗಳು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಕವಿತಾಳ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ.

ಆಯಾ ಕವಿತಾ ಬಾಡನವರ ಹೆಸರಿನಲ್ಲಿ ಒಟ್ಟು ಐದು ಖಾತೆಗಳಿವೆ. ಕಂದಾಯ ಇಲಾಖೆಯ (Revenue Department) ಹಿರಿಯ ಅಧಿಕಾರಿಯೊಬ್ಬರು ಕವಿತಾಳ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದರು ಎಂಬುವುದು ತಿಳಿದು ಬಂದಿದೆ. ಈ ಖಾತೆಗಳನ್ನು ಪ್ರೀಜ್ ಮಾಡುವಂತೆ ಮಹಾಲಿಂಗಪುರ (Mahalingapura) ಪೊಲೀಸರು ಬ್ಯಾಂಕ್​ಗಳಿಗೆ ಪತ್ರ ಬರೆದಿದ್ದಾರೆ. ಯಾಕೆ ಹಣದ ವರ್ಗಾವಣೆಯಾಗಿದೆ, ಇಬ್ಬರ ಸಂಪರ್ಕ ಹಿಂದಿನ ಕಾರಣವೇನು? ಎಂಬುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆಗಾಗಿ ಬನಹಟ್ಟಿ‌ ಸಿಪಿಐ ನೇತೃತ್ವದಲ್ಲಿ ನಾಲ್ಕು ಜನರ ಪೊಲೀಸ್ ತಂಡ ರಚಿಸಲಾಗಿದೆ. ಇದನ್ನೂ ಓದಿ : ಖಾಸಗಿ ಬಸ್ ಪಲ್ಟಿ – 7 ಮಂದಿ ಗಂಭೀರ, ಸ್ಥಳದಲ್ಲೇ ಇಬ್ಬರು ಸಾವು

https://youtu.be/yT8_wXTi9wQ?si=ZdiAEpZhRF2gKWg9

ತಿಂಗಳಿಗೆ 10-30 ಸಾವಿರ ಹಣ ಜಮೆ
ಕಳೆದ ಆರು ತಿಂಗಳಿಂದ ಆರೋಪಿ ಕವಿತಾ ವಾರಕ್ಕೆ ಕನಿಷ್ಟ ಮೂರು ಗರ್ಭಪಾತ ‌ಮಾಡಿಸಿರುವ ಮಾಹಿತಿ ಲಭ್ಯವಾಗಿದೆ. ಕವುತಾ ಹೆಸರಲ್ಲಿ ಐದು ಬ್ಯಾಂಕ್‌ ಖಾತೆಗಳಿದ್ದು, ಅವುಗಳನ್ನು ಪ್ರೀಜ್‌ ಮಾಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇನ್ನು . ಕಂದಾಯ ಇಲಾಖೆ ಹಿರಿಯ ಅಧಿಕಾರಿ ಖಾತೆಯಿಂದ ಕವಿತಾಗೆ ಹಣ ವರ್ಗಾವಣೆಯಾಗಿದೆ‌. ತಿಂಗಳಿಗೆ 10 ರಿಂದ 30 ಸಾವಿರವರೆಗೆ ವರ್ಗಾವಣೆಯಾಗಿದ್ದು ತಿಳಿದು ಬಂದಿದೆ.

https://youtu.be/R9n1ZgRHKUA?si=qFZgVPPo_HLSZHjH

ಕವಿತಾ ಬಾಡನವರ ಈ ಹಿಂದೆ ಕೆಲ ವರ್ಷಗಳ ಕಾಲ ಖಾಸಗಿ ಆಸ್ಪತ್ರೆಯಲ್ಲಿ ಆಯಾ ಆಗಿ ಕೆಲಸ‌ ಮಾಡಿದ್ದಳು. ಆಗ ಇಂತಹ ಕೆಲಸ‌ ಕಲಿತ ಈಕೆ‌ ಮುಂದೆ ಅದನ್ನೇ ದೊಡ್ಡ ದಂಧೆ ಮಾಡಿಕೊಂಡಿದ್ದಾಳೆ. ಈಕೆ ಕೋಟಿ ಕೋಟಿ ಬೆಲೆ ಬಾಳುವ ಮೂರಂತಸ್ತಿನ ಮನೆ ಕಟ್ಟಿಸಿದ್ದಾಳೆ. ಈಕೆಯ ಮನೆ ಕೂಡಾ ಅಕ್ರಮ ಎಂಬ ಮಾಹಿತಿ‌ ಇದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ಬಂಧಿಸಲಾಗಿದೆ. ಬನಹಟ್ಟಿ‌ ಸಿಪಿಐ ನೇತೃತ್ವದಲ್ಲಿ ನಾಲ್ಕು ಜನರ ತಂಡ ರಚಿಸಿದ್ದು, ತಂಡ‌ ಆರೋಪಿ ವಿಜಯ್ ಗೌಳಿ ಸಮೇತ ಸೋನಾಲಿ‌ ಗರ್ಭ ಸ್ಕ್ಯಾನಿಂಗ್ ಮಾಡಸಿದ ಸ್ಥಳ ಮಹಾರಾಷ್ಟ್ರದ ಶಾಹುನಗರಕ್ಕೆ ತೆರಳಿದೆ. ಇದನ್ನೂ ಓದಿ : Election Results – ತಡವಾಗಲಿದೆ ಅಧಿಕೃತ ಫಲಿತಾಂಶ ಪ್ರಕಟ ಆದರೆ ಟ್ರೆಂಡ್‌ ಮಾತ್ರ ಬೇಗ

Share with Friends
author avatar
News Desk