Latestದಾವಣಗೆರೆ-Davanagereರಾಜ್ಯ-Karnataka

ನಾನು ಆರೋಗ್ಯವಾಗಿದ್ದೇನೆ: ಶಾಮನೂರು ಶಿವಶಂಕರಪ್ಪ

ದಾವಣಗೆರೆ: ನಾನು ಆರೋಗ್ಯವಾಗಿದ್ದೇನೆ ಎಂದು ದಾವಣಗೆರೆ (Davanagere) ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ (Shamanur Shivashankarappa) ಸಂದೇಶ ರವಾನಿಸಿದ್ದಾರೆ.

94 ವರ್ಷದ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಶುಕ್ರವಾರ ಆರೋಗ್ಯದಲ್ಲಿ (Health) ಏರುಪೇರು ಉಂಟಾಗಿತ್ತು. ಕಫದ ಸಮಸ್ಯೆ ಉಂಟಾದ ಹಿನ್ನೆಲೆ ಶಾಮನೂರು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಸಂತ್ರಸ್ತೆ ಅಪಹರಣ ಕೇಸ್‌; ಯಾವುದೇ ಕ್ಷಣದಲ್ಲಿ ಭವಾನಿ ರೇವಣ್ಣ ಬಂಧನ ಸಾಧ್ಯತೆ

https://youtu.be/r32NMq7j5QU?si=GSV-b98l-nQLyWLL

ಇದೀಗ ಕುಟುಂಬಸ್ಥರ ಜೊತೆ ನಗುನಗುತ್ತಾ ನಾನು ಆರೋಗ್ಯವಾಗಿದ್ದೇನೆ ಎಂದು ದಾವಣಗೆರೆ ಜನರಿಗೆ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ. ಇದನ್ನೂ ಓದಿ: ಕೊಟ್ಟಿರುವ ರೂಂ ಸರಿಯಿಲ್ಲ, ಕೆಟ್ಟ ವಾಸನೆ ಬರುತ್ತಿದೆಂದು ಜಡ್ಜ್‌ ಮುಂದೆ ಅಳಲು ತೋರಿಕೊಂಡ ಪ್ರಜ್ವಲ್‌

https://youtu.be/Xmp5YfB-Rt4?si=_nshe9DjjeqYzzM2
Share with Friends
author avatar
News Desk